Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ
ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅಂತಹ ದೊಡ್ಡ ವಿಷಯವೇನಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇರುವ ವಿಧಾನಗಳನ್ನು ಅನುಸರಿಸಿದರೆ, ಯಾವುದೇ ತೊಂದರೆಯಿಲ್ಲದೇ ಲೈಸೆನ್ಸ್ ಪಡೆಯಬಹುದು. ಲೈಸೆನ್ಸ್ ಪಡೆಯಲು ಇರುವ ಡ್ರೈವಿಂಗ್ ಟೆಸ್ಟ್ ಸಹ ಅಷ್ಟೇನೂ ಕಷ್ಟಕರವಾಗಿರುವುದಿಲ್ಲ.

ಇದರಲ್ಲಿ ಚಾಲನಾ ಕೌಶಲ್ಯಗಳನ್ನು ಹೆಚ್ಚು ಟೆಸ್ಟ್ ಮಾಡಲಾಗುವುದಿಲ್ಲ. ಆದರೆ ಈ ಡ್ರೈವಿಂಗ್ ಟೆಸ್ಟ್ ನಲ್ಲಿಯೇ ಒಂದು ಸಮಸ್ಯೆ ಎದುರಾಗಿದೆ. ಹಿಂದೂಸ್ಥಾನ್ ಟೈಮ್ಸ್ ನಲ್ಲಿ ವರದಿಯಾಗಿರುವಂತೆ ಪುಣೆಯಲ್ಲಿರುವ ಆರ್‍ಟಿಒ ಒಂದು ಮ್ಯಾನುವಲ್ ಗೇರ್‍ಬಾಕ್ಸ್ ಇರುವ ಕಾರು ಚಲಾಯಿಸಲು ಬರದೇ ಇರುವವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತಿಲ್ಲ. ಜನಪ್ರಿಯವಾಗುತ್ತಿರುವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳಿಂದಾಗಿ ಬಹಳಷ್ಟು ಜನರಿಗೆ ಮ್ಯಾನುವಲ್ ಗೇರ್‍ನ ಕಾರ್ ಅನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ.

ಮೂಲಗಳ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಲ್ಲಿಸುವ ಅರ್ಜಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇವರಲ್ಲಿ ಬಹುತೇಕ ಮಂದಿ ಭೊಸಾರಿಯಲ್ಲಿರುವ ಇನ್ಸ್ ಟಿಟ್ಯೂಟ್ ಆಫ್ ಡ್ರೈವಿಂಗ್ ಟ್ರೇನಿಂಗ್ ಅಂಡ್ ರೀಸರ್ಚ್‍ನಲ್ಲಿ ನಡೆಸಲಾಗುವ ಡ್ರೈವಿಂಗ್ ಟೆಸ್ಟ್ ನಲ್ಲಿ ಫೇಲ್ ಆಗುತ್ತಿದ್ದಾರೆ.

ಪುಣೆಯ ಆರ್‍ಟಿಒ ಪ್ರತಿ ದಿನ 220 ಟೆಸ್ಟ್ ಗಳನ್ನು ನಡೆಸುತ್ತದೆ. ಅದರಲ್ಲಿ 10-20 ಮಂದಿ ಟೆಸ್ಟ್ ನಲ್ಲಿ ಫೇಲ್ ಆಗುತ್ತಲೇ ಇರುತ್ತಾರೆ. ಈ ರೀತಿ ಫೇಲ್ ಆಗುವವರು ಡ್ರೈವಿಂಗ್ ತರಬೇತಿಯನ್ನು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳಲ್ಲಿ ಪಡೆದಿರುವವರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ರಾಜ್ಯ ಟ್ರಾನ್ಸ್ ಪೋರ್ಟ್ ಕಮಿಷನರ್‍ರವರಾದ ಶೇಖರ್ ಚನ್ನೆರವರು, ಸದ್ಯಕ್ಕೆ ರಾಜ್ಯದಲ್ಲಿರುವ ಟೆಸ್ಟಿಂಗ್ ಟ್ರಾಕ್‍ಗಳಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಶಾಶ್ವತವಾದ ಲೈಸೆನ್ಸ್ ಟೆಸ್ಟ್ ಆಯ್ಕೆಗಳಿಲ್ಲದ ಕಾರಣ, ಅರ್ಜಿದಾರರಿಗೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳ ಆಯ್ಕೆಯನ್ನು ನೀಡಲಾಗುತ್ತಿಲ್ಲ. ನಾವು ನಮ್ಮ ದಾಖಲೆಗಳನ್ನು ಪರಿಶೀಲಿಸಿ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿದ್ದುಪಡಿ ಮಾಡುವಂತೆ ಕೇಳಿಕೊಳ್ಳಗಾಗಿದೆಯೇ ಎಂಬುದನ್ನು ನೋಡುತ್ತೇವೆ.

ನಾವು ಈ ಸಮಸ್ಯೆಗೆ ಪರಿಹಾರವನ್ನು ಖಂಡಿತವಾಗಿಯೂ ನೀಡಲಿದ್ದೇವೆ ಎಂದು ತಿಳಿಸಿದರು. ಆದರೆ ಈ ರೀತಿಯ ಸಮಸ್ಯೆಯು ಇದೇ ಮೊದಲ ಬಾರಿಗೆ ಎದುರಾಗುತ್ತಿಲ್ಲ. ಇದೇ ರೀತಿಯ ಸಮಸ್ಯೆಯನ್ನು ದೇಶದಲ್ಲಿರುವ ಉಳಿದ ಆರ್‍ಟಿಒಗಳು ಕೂಡ ಎದುರಿಸಿದ್ದವು.

ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಯಾಗಿರುವಂತೆ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಆರ್‍ಟಿಒ ಗಳಿಗೆ ಈ ಬಗ್ಗೆ ಸೂಚನೆ ನೀಡಿ, ಆಟೋಮ್ಯಾಟಿಕ್ ಕಾರುಗಳಲ್ಲಿ ಟೆಸ್ಟ್ ಗಳಿಗೆ ಬರುವವರನ್ನು ವಾಪಸ್ ಕಳುಹಿಸಬಾರದೆಂದು ತಿಳಿಸಿದ್ದಾರೆ.

ಮಹಿಳೆಯೊಬ್ಬರಿಗೆ ಆಟೋಮ್ಯಾಟಿಕ್ ಕಾರನ್ನು ಟೆಸ್ಟ್ ಗೆ ಒಯ್ದ ಕಾರಣದಿಂದಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ನಿರಾಕರಿಸಲಾಗಿತ್ತು. ಈ ಬಗ್ಗೆ ಆ ಮಹಿಳೆ ಟ್ವೀಟ್ ಮಾಡಿ ಅಧಿಕಾರಿಗಳ ಗಮನ ಸೆಳೆದ ನಂತರ ಈ ರೀತಿಯಾಗಿ ಸೂಚನೆ ನೀಡಲಾಗಿತ್ತು.
MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಡ್ರೈವಿಂಗ್ ಸ್ಕೂಲ್‍ನ ಮಾಲೀಕರು ಹಾಗೂ ಪುಣೆಯ ಆರ್‍ಟಿಒದಲ್ಲಿ ಅಧಿಕೃತ ಏಜೆಂಟ್ ಆಗಿರುವ ರವಿ ಅಗರ್‍ವಾಲ್‍ರವರು ಈ ಬಗ್ಗೆ ಮಾತನಾಡಿ, ನಮ್ಮ ಡ್ರೈವಿಂಗ್ ಸ್ಕೂಲ್‍ಗೆ ಬರುವ ಬಹುತೇಕರು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕಾರುಗಳೊಂದಿಗೆ ಬರುತ್ತಾರೆ ಹಾಗೂ ಅದೇ ಕಾರುಗಳಲ್ಲಿ ಡ್ರೈವಿಂಗ್ ಕಲಿಯುತ್ತಾರೆ.

ಅವರು ಡ್ರೈವಿಂಗ್ ಟೆಸ್ಟ್ ಗಾಗಿ ಹೋದಾಗ, ಅವರಿಗೆ ಆಟೋಮ್ಯಾಟಿಕ್ ಕಾರಿನ ಬದಲಿಗೆ ಮ್ಯಾನುಯಲ್ ಟ್ರಾನ್ಸ್ ಮಿಷನ್ ಕಾರುಗಳನ್ನು ಚಲಾಯಿಸುವಂತೆ ಹೇಳಲಾಗುತ್ತಿದೆ. ಮ್ಯಾನುವಲ್ ಕಾರುಗಳನ್ನು ಚಲಾಯಿಸಿದ ಅನುಭವವಿಲ್ಲದ ಕಾರಣ ಟೆಸ್ಟ್ ನಲ್ಲಿ ಫೇಲ್ ಆಗುತ್ತಿದ್ದಾರೆ.
MOST READ: ಎಸ್‍ಯುವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಬಹಳಷ್ಟು ಜನರು ಮ್ಯಾನುವಲ್ ಆವೃತ್ತಿಯ ಕಾರುಗಳಿಗೆ ಬದಲಾಗಿ, ಆಟೋಮ್ಯಾಟಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಬಹುತೇಕ ಮಂದಿ ಟೆಸ್ಟ್ ನಲ್ಲಿ ಫೇಲ್ ಆಗುತ್ತಿರುವ ಕಾರಣ ಆರ್‍ಟಿಒ ಆಟೋಮ್ಯಾಟಿಕ್ ಕಾರುಗಳಲ್ಲಿ ಡ್ರೈವಿಂಗ್ ಟೆಸ್ಟ್ ಮಾಡಲು ಅವಕಾಶ ನೀಡಬೇಕು. ಟೆಸ್ಟ್ ನಲ್ಲಿ ಫೇಲ್ ಆಗುತ್ತಿರುವವರಲ್ಲಿ ಬಹುತೇಕ ಮಂದಿ ಮಹಿಳೆಯರು ಹಾಗೂ ಹಿರಿಯ ನಾಗರೀಕರಿದ್ದಾರೆ ಎಂದು ಹೇಳಿದರು.

ಆಟೋಮ್ಯಾಟಿಕ್ ಕಾರುಗಳಿಗೆ ಡ್ರೈವಿಂಗ್ ಟೆಸ್ಟ್ ಗಳಲ್ಲಿ ಅವಕಾಶ ನೀಡುವ ಬಗ್ಗೆ ಯಾವುದೇ ಸರಿಯಾದ ನಿಯಮಗಳನ್ನು ಮಾಡಲಾಗಿಲ್ಲ. ಆದ ಕಾರಣ ಬೇರೆ ಬೇರೆ ಆರ್‍ಟಿಒಗಳು ಬೇರೆ ಬೇರೆ ರೀತಿಯ ನಿಯಮಗಳನ್ನು ಅನುಸರಿಸುತ್ತಿವೆ.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ಪ್ರತಿಯೊಬ್ಬರು ಮ್ಯಾನುಯಲ್ ಕಾರುಗಳನ್ನು ಚಲಾಯಿಸುವುದನ್ನು ಕಲಿತಿರಬೇಕು. ಆದರೆ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಕಾರುಗಳಿಗೂ ಸಹ ಆದ್ಯತೆ ನೀಡಬೇಕು.