Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರೀಮಿಯಂ ಕಾರುಗಳ ಲೀಸ್ ಸೇವೆ ಆರಂಭಿಸಲಿದೆ ಫಿಯೆಟ್
ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ (ಎಫ್ಸಿಎ) ಇಂಡಿಯಾ ಕಂಪನಿಯು, ಒರಿಕ್ಸ್ ಆಟೋ ಇನ್ಫಾಸ್ಟ್ರಕ್ಚರ್ ಸರ್ವಿಸಸ್ ಸಹಭಾಗಿತ್ವದಲ್ಲಿ ಪ್ರೀಮಿಯಂ ಕಾರು ಮಾಡೆಲ್ಗಳನ್ನು ಲೀಸ್ನಲ್ಲಿ ನೀಡುವ ಯೋಜನೆಯನ್ನು ಘೋಷಿಸಿದೆ. ಈ ಲೀಸಿಂಗ್ ಸರ್ವಿಸ್ಗಳು ದೇಶಾದ್ಯಂತ ಶುರುವಾಗಲಿದ್ದು, ಮೊದಲಿಗೆ ಮುಂಬೈ, ಪುಣೆ, ದೆಹಲಿ ಎನ್ಸಿಆರ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆರಂಭಿಸಲಾಗುವುದು.

ಎಫ್ಸಿಎ ಇಂಡಿಯಾದ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೆವಿನ್ ಫ್ಲಿನ್ ರವರು ಮಾತನಾಡಿ, ಈ ನವೀನ ಮಾದರಿಯ ಸಹಭಾಗಿತ್ವವು ಗ್ರಾಹಕರು ಜೀಪ್ ಕಂಪಾಸ್ ವಾಹನವನ್ನು ಲೀಸ್ ಮೇಲೆ ಪಡೆಯಲು ಅನುಕೂಲವಾಗಲಿದ್ದು, ವಾಹನದ ಹಣವನ್ನು ಪೂರ್ತಿಯಾಗಿ ಪಾವತಿಸದೇ, ನಿಗದಿಪಡಿಸಿದ ವರ್ಷಗಳವರೆಗೆ ಪಾವತಿಸಲಿದ್ದಾರೆ ಎಂದು ತಿಳಿಸಿದರು. ಲೈವ್ಮಿಂಟ್ ವರದಿಗಳ ಪ್ರಕಾರ, ಎಫ್ಸಿಎಗೆ ಈ ಸಹಭಾಗಿತ್ವದಿಂದ ಜೀಪ್ ಮಾಲೀಕತ್ವದ ಅನುಭವವನ್ನು ಭಾರತೀಯ ಗ್ರಾಹಕರಿಗೆ ನೀಡಿ, ಗ್ರಾಹಕರೆಡೆಗಿನ ತಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿಕೊಳ್ಳಲು ಅನುಕೂಲವಾಗಲಿದೆ.

ಎಫ್ಸಿಎ ಇಂಡಿಯಾ ಮತ್ತು ಒರಿಕ್ಸ್ ಆಟೋ ಇನ್ಫಾಸ್ಟ್ರಕ್ಚರ್ ಸರ್ವಿಸಸ್ಗಳು ಈ ಸಹಭಾಗಿತ್ವದಲ್ಲಿ, ರೋಡ್ ಟ್ಯಾಕ್ಸ್ ಪೇಮೆಂಟ್, ಇನ್ಶೂರೆನ್ಸ್ ಹಾಗೂ ರಿನಿವಲ್, ಬ್ರೇಕ್ಡೌನ್ ಅಸಿಸ್ಟಂಟ್, ಆಕ್ಸಿಡೆಂಟ್ ರಿಪೇರ್, ಎಂಡ್ ಟು ಎಂಡ್ ಮೆಂಟೆನೆನ್ಸ್ ಮತ್ತು ಮಾಡೆಲ್ನ ಬಳಕೆಗೆ ತಕ್ಕಂತೆ ಪಾವತಿಸುವ ಸೌಲಭ್ಯಗಳನ್ನು 2 ರಿಂದ 5 ವರ್ಷಗಳಿಗೆ ನೀಡಲಿದೆ.

ಒರಿಕ್ಸ್ ಆಟೋ ಇನ್ಫಾಸ್ಟ್ರಕ್ಚರ್ ಸರ್ವಿಸಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಂದೀಪ್ ಗಂಭೀರ್ ರವರು ಮಾತನಾಡಿ, ನಾವು ನಮ್ಮ ಲೀಸಿಂಗ್ ಸಲ್ಯೂಷನ್ ಬಲಗೊಳಿಸಲು ಮತ್ತು ಹೊಸ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದು, ಗ್ರಾಹಕರು ಪ್ರೀಮಿಯಂ ಪ್ರಾಡಕ್ಟ್ ಗಳ ಅನುಭವವನ್ನು ಹಾಗೂ ವ್ಯಾಲ್ಯೂ ಆಡೆಡ್ ಸೌಲಭ್ಯಗಳನ್ನು ಪಡೆಯಲಿ ಎಂದು ತಿಳಿಸಿದರು.

ಆಟೋಮೊಬೈಲ್ ತಯಾರಕರು ಲೀಸಿಂಗ್ ತಂತ್ರಗಳ ಮೇಲೆ ಬಹಳಷ್ಟು ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ. ಫೋಕ್ಸ್ ವ್ಯಾಗೆನ್ ಈ ರೀತಿ ಯೋಜನೆಯನ್ನು ಆರಂಭಿಸಿದ ಮೊದಲ ಕಂಪನಿಯಾಗಿದೆ. ಇದರಿಂದ ಆ ಕಂಪನಿಯ ಸ್ಕೋಡಾ ವಾಹನದ ಮಾರಾಟದಲ್ಲಿ ಬಹಳಷ್ಟು ಏರಿಕೆಯಾಯಿತು. ಫೋಕ್ಸ್ ವ್ಯಾಗನ್ ತನ್ನ ಕಂಪನಿಯ ಹ್ಯಾಚ್ಬ್ಯಾಕ್ಗಳನ್ನು ವಿವಿಧ ಸರ್ಕಾರಿ ಕಚೇರಿಗಳಿಗೆ, ಏಜೆನ್ಸಿಗಳಿಗೆ ಮತ್ತು ವ್ಯಕ್ತಿಗಳಿಗೆ ಲೀಸ್ನಲ್ಲಿ ನೀಡುವ ಕಾಂಟ್ರಾಕ್ಟ್ ಪಡೆದಿದೆ.

ವಿದೇಶಿ ಕಾರು ತಯಾರಕರಾದ ಫೋರ್ಡ್, ಹ್ಯುಂಡೈ ಮತ್ತು ಫೋಕ್ಸ್ ವ್ಯಾಗನ್ ತಮ್ಮ ಸಿ ಲೆವೆಲ್ ಮ್ಯಾನೇಜ್ಮೆಂಟ್ಗಳಿಗೆ ಮತ್ತು ವಿದೇಶಿ ಇಂಜಿನಿಯರುಗಳಿಗೆ ಸಹ ಈ ಸೇವೆಯನ್ನು ನೀಡುತ್ತಿವೆ. ಸಾಧಾರಣವಾಗಿ ಈ ರೀತಿಯಾಗಿ ಮೂರು ವರ್ಷಗಳವರೆಗೆ ಲೀಸ್ಗೆ ನೀಡಲಾಗುವುದು ನಂತರ ಅವುಗಳನ್ನು ನವೀಕರಿಸಿ ರೆಗ್ಯುಲರ್ ಕಸ್ಟಮರ್ಗಳಿಗೆ ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.
MOST READ: ರಿವ್ಯೂ: ಹೊಸ ಟ್ರೇಂಡ್ನಲ್ಲಿ ಹೀರೋ ಎಕ್ಸ್ ಟ್ರೀಮ್ 200ಎಸ್

ಫಿಯೆಟ್ ಕ್ರೈಸ್ಲರ್ ನಂತಹ ಕಂಪನಿಗಳು ಈಗ ಲೀಸಿಂಗ್ ಸೇವೆಯನ್ನು ಪ್ರಾರಂಭಿಸುತ್ತಿವೆ. ಈ ಉದ್ಯಮವು ಭವಿಷ್ಯದಲ್ಲಿ ಹೆಚ್ಚಿನ ಆದ್ಯತೆಯನ್ನು ಪಡೆಯಲಿದೆ. ಬಹುತೇಕ ಎಲ್ಲರೂ ಪ್ರೀಮಿಯಂ ಕಾರುಗಳ ಮಾಲೀಕರಾಗಲು ಬಯಸುತ್ತಾರೆ, ಅಂತಹವರಿಗಾಗಿ ಈ ರೀತಿಯ ಸೇವೆಗಳು ಹೇಳಿ ಮಾಡಿಸಿದಂತಿವೆ. ಈ ಲೀಸಿಂಗ್ ಸೇವೆಗಳಿಗಾಗಿ ನಿಗದಿಪಡಿಸಿರುವ ದರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಿಲ್ಲ.