ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಶಾಂಘೈನಲ್ಲಿ ನಡೆದಿರುವ 2019ರ ಆಟೋ ಮೇಳದಲ್ಲಿ ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ಲೆಕ್ಸಸ್ ತನ್ನ ಬಹುನೀರಿಕ್ಷಿತ ಎಲ್ಎಂ ಲಗ್ಷುರಿ ವ್ಯಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊತ್ತಬರುತ್ತಿರುವ ಎಲ್ಎಂ ಲಗ್ಷುರಿ ವ್ಯಾನ್ ಇದೀಗ ಚೀನಿ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಲೆಕ್ಸಸ್ ಸಂಸ್ಥೆಯು ಟೊಯೊಟಾ ಅಂಗಸಂಸ್ಥೆಯಾಗಿ ಸದ್ಯ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವಹಿವಾಟು ನಡೆಸುತ್ತಿದ್ದು, ಟೊಯೊಟಾ ನಿರ್ಮಾಣದ ಅಲ್ಫಾರ್ಡ್ ವ್ಯಾನ್ ಮಾದರಿಯಲ್ಲಿಯೇ ಎಲ್ಎಂ ಲಗ್ಷುರಿ ವ್ಯಾನ್ ಮಾದರಿಯನ್ನು ನಿರ್ಮಾಣ ಮಾಡಿ ಪ್ರದರ್ಶನಗೊಳಿಸಿದೆ. ಈ ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ರಸ್ತೆಗಿಳಿಯಲಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಲೆಕ್ಸಸ್ ಸಂಸ್ಥೆಯು ಈಗಾಗಲೇ ಹೈಬ್ರಿಡ್ ಎಂಜಿನ್ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿದ್ದು, ತನ್ನ ಬಹುತೇಕ ಕಾರು ಮಾದರಿಗಳಲ್ಲಿ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ನೀಡುತ್ತಿದೆ. ಹೀಗಾಗಿ ಸದ್ಯ ಬಿಡುಗಡೆಯ ಸರದಿಯಲ್ಲಿರುವ ಎಲ್ಎಂ ಲಗ್ಷುರಿ ವ್ಯಾನ್ ಕೂಡಾ ಹೈಬ್ರಿಡ್ ಎಂಜಿನ್‌ ಆಯ್ಕೆ ಪಡೆದುಕೊಂಡಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಹಾಗೆಯೇ ಕಾರುಗಳ ವಿನ್ಯಾಸ ಕೂಡಾ ಐಷಾರಾಮಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಥರ್ಡ್ ಜನರೇಷನ್ ಅಲ್ಫಾರ್ಡ್ ಮಾದರಿಯಲ್ಲಿ 26-ಇಂಚಿನ ಸ್ಕ್ರೀನ್ ಡಿಸ್‌ಪ್ಲೇ ಮತ್ತು ರೋಲ್ಸ್ ರಾಯ್ಸ್ ಮಾದರಿಯಲ್ಲಿ ಅಂಬ್ರೆಲಾ ಸ್ಟೋರೆಜ್ ಕೂಡಾ ಈ ವ್ಯಾನ್ ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಎಲ್ಎಂ ಲಗ್ಷುರಿ ವ್ಯಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 4 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ತಿಳಿಸಿರುವ ಲೆಕ್ಸಸ್ ಸಂಸ್ಥೆಯು, ವ್ಯಾನ್ ಒಳಭಾಗದಲ್ಲೇ 14-ಲೀಟರ್ ಸಾಮಾರ್ಥ್ಯದ ರೆಫ್ರಿಜೆಟರ್, 19-ಸ್ಪೀಕರ್ಸ್ ಸೌಂಡ್ ಸಿಸ್ಟಂ, ಡಬಲ್ ಲೆಯರ್ ವೈಶಿಷ್ಟ್ಯತೆಯ ಹೊರ ಭಾಗದ ಶಬ್ದ ತಡೆಯುವ ಗ್ಲಾಸ್‌ಗಳು ಈ ವ್ಯಾನ್ ಮುಖ್ಯ ತಾಂತ್ರಿಕ ಅಂಶಗಳಾಗಿವೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಎಂಜಿನ್ ಸಾಮರ್ಥ್ಯ

ಎಲ್ಎಂ ವ್ಯಾನ್ ಮಾದರಿಯು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಲ್ಎಂ 350 ಮಾದರಿಯು 3.5-ಲೀಟರ್ ವಿ-6 ಪೆಟ್ರೋಲ್ ಎಂಜಿನ್‌ ಹೊಂದಿರಲಿದೆ. ಹಾಗೆಯೇ ಎಲ್ಎಂ 300ಹೆಚ್ ಮಾದರಿಯು 2.5-ಲೀಟರ್ ಹೈಬ್ರಿಡ್ ಎಂಜಿನ್ ಜೊತೆ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯನ್ನು ಪಡೆದುಕೊಂಡಿರಲಿದೆ.

MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ವ್ಯಾನ್ ಬೆಲೆಗಳು

ಭಾರತದಲ್ಲಿ ಸದ್ಯ ಎಕ್ಸ್‌ಶೋರೂಂ ಪ್ರಕಾರ ರೂ.54 ಲಕ್ಷದಿಂದ ರೂ. 1.32 ಕೋಟಿ ಬೆಲೆ ಅಂತರದಲ್ಲಿ ಹಲವು ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಲೆಕ್ಸಸ್ ಸಂಸ್ಥೆಯು ಇದೀಗ ಮೊದಲ ಬಾರಿಗೆ ವ್ಯಾನ್ ಮಾದರಿಯನ್ನು ಹೊರತಂದಿದ್ದು, ಟೊಯೊಟಾ ಅಲ್ಫಾರ್ಡ್‌ಗಿಂತಲೂ ಹಲವಾರು ಗುಣಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಹೀಗಾಗಿ ಎಲ್ಎಂ ವ್ಯಾನ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ.50 ಲಕ್ಷದಿಂದ ರೂ.65 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಚೀನಿ ಮಾರುಕಟ್ಟೆಯಲ್ಲಿ ಸದ್ಯ ಹೈಬ್ರಿಡ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದು ಲೆಕ್ಸಸ್ ಕಾರುಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಭಾರತಕ್ಕೂ ಬರುತ್ತಾ ಎಲ್ಎಂ ವ್ಯಾನ್?

ಈ ಕುರಿತು ಲೆಕ್ಸಸ್ ಸಂಸ್ಥೆಯು ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಎಲ್ಎಂ ವ್ಯಾನ್ ಭಾರತಕ್ಕೆ ಬರುವ ಸಾಧ್ಯತೆ ಕಡಿಮೆಯಿದೆ. ಯಾಕೆಂದ್ರೆ ಲೆಕ್ಸಸ್ ಮಾತೃಸಂಸ್ಥೆಯಾಗಿರುವ ಟೊಯೊಟಾ ತನ್ನ ಅಲ್ಫಾರ್ಡ್ ವ್ಯಾನ್ ಮಾದರಿಯನ್ನು ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿ ಸಜ್ಜಾಗಿದ್ದು, ತಾಂತ್ರಿಕವಾಗಿ ಅಲ್ಪಾರ್ಡ್ ಶೈಲಿಯನ್ನೇ ಹೊಂದಿರುವ ಎಲ್ಎಂ ವ್ಯಾನ್ ಬಿಡುಗಡೆ ಸಾಧ್ಯತೆ ಕಡಿಮೆಯಿದೆ. ಒಟ್ಟಿನಲ್ಲಿ ಹೊಸ ಲೆಕ್ಸಸ್ ವ್ಯಾನ್ ಮಾದರಿಯು ಸದ್ಯ ಮಾರುಕಟ್ಟೆ ಪ್ರವೇಶಿಸಿರುವ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್‌ಗೆ ಪ್ರಬಲ ಪೈಪೋಟಿಯಾಗಲಿದ್ದು, ಕಾರ್ಪೊರೇಟ್ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Lexus Reveals China Specific LM Luxury Minivan. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X