ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಲೆಕ್ಸಸ್ ಕಂಪನಿಯು ಹೊಸ 2020 ಆರ್‍ಎಕ್ಸ್ 450 ಹೆಚ್‍ಎಲ್ ಐಷಾರಾಮಿ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಲೆಕ್ಸಸ್ ಆರ್‌ಎಕ್ಸ್ 450 ಎಚ್‌ಎಲ್ ಎಸ್‍‍ಯುವಿಯ ಆರಂಭಿಕ ಬೆಲೆ ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಹೊಸ ಲೆಕ್ಸಸ್ ಆರ್‌ಎಕ್ಸ್ 450 ಎಚ್‌ಎಲ್‌ ಎಸ್‍‍ಯುವಿಯ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದ್ದು, ದೇಶಾದ್ಯಂತವಿರುವ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಬಹುದಾಗಿದೆ. ಶೀಘ್ರದಲ್ಲೇ ಈ ಎಸ್‍‍ಯುವಿಯ ವಿತರಣೆ ಆರಂಭವಾಗಲಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಲೆಕ್ಸಸ್ ಆರ್‌ಎಕ್ಸ್ 450 ಹೆಚ್‌ಎಲ್, ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಆರ್‍ಎಕ್ಸ್ 450 ಹೆಚ್ ಎಸ್‍‍ಯುವಿಯ ಏಳು ಸೀಟಿನ ಆವೃತ್ತಿಯಾಗಿದೆ. ಸ್ಟ್ಯಾಂಡರ್ಡ್ ಎಸ್‍‍ಯುವಿಗಿಂತ ಹಲವಾರು ವಿಧದಲ್ಲಿ ಬೇರೆಯಾಗಿರುವ ಈ ಹೊಸ ಎಸ್‍‍ಯುವಿಯು ಉದ್ದವಾದ ವ್ಹೀಲ್ ಬೇಸ್ ಹಾಗೂ ಬಿ‍ಎಸ್ 6 ನಿಯಮಕ್ಕೆ ಹೊಂದಿಕೊಳ್ಳುವ ಹೈಬ್ರಿಡ್ ಎಂಜಿನ್ ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಜೊತೆಗೆ ಹೆಚ್ಚುವರಿಯಾಗಿ ಮೂರನೇ ಸಾಲನ್ನು ಹೊಂದಿದೆ. ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್ 3.5 ಲೀಟರಿನ ವಿ6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮುಂಬರುವ ದಿನಗಳಲ್ಲಿ ಜಾರಿಯಾಗಲಿರುವ ಹೊಸ ಬಿಎಸ್ 6 ನಿಯಮಗಳಿಗೆ ತಕ್ಕಂತೆ ಇರಲಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಈ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಅಳವಡಿಸಲಾಗಿದೆ. ಈ ಎಸ್‌ಯುವಿ ಒಟ್ಟಾರೆಯಾಗಿ 313 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಸ್‍‍ಯುವಿಯಲ್ಲಿರುವ ಅಟ್ಕಿನ್ಸನ್ ಸೈಕಲ್ ಎಂಜಿನ್ ಡ್ಯುಯಲ್ ವಿವಿಟಿ-ಐ ಹಾಗೂ ಸುಧಾರಿತ ಡಿ 4 ಎಸ್ ಎಫ್ಐ ಸಿಸ್ಟಂ ಹೊಂದಿದೆ. ಅತ್ಯುತ್ತಮವಾದ ಪರ್ಫಾಮೆನ್ಸ್ ಹಾಗೂ ಪ್ರಭಾವಶಾಲಿಯಾದ ಇಂಧನ ದಕ್ಷತೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಹೊಸ ಬಿಎಸ್6 ಎಂಜಿನ್ ಜೊತೆಗೆ, ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್ ಎಸ್‍‍ಯುವಿಯು ಬಲಿಷ್ಟವಾದ ಬಾಡಿಯನ್ನು ಹೊಂದಿದೆ. ಜೊತೆಗೆ ಇದರಲ್ಲಿರುವ ಸಸ್ಪೆಂಷನ್ ಅನ್ನು ಸುಧಾರಿಸಲಾಗಿದೆ. ಆಕ್ಟಿವ್ ಕಾರ್ನರಿಂಗ್ ಅಸಿಸ್ಟ್, ಫ್ರಿಕ್ಷನ್ ಕಂಟ್ರೋಲ್ ಡಿವೈಸ್, ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಸೆನ್ಸಾರ್‍‍ಗಳಿವೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಇದರ ಜೊತೆಗೆ ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ಬ್ರೇಕ್ ಅಸಿಸ್ಟ್, ಇ‍‍ಸಿ‍ಎಸ್ ಹಾಗೂ 10 ಏರ್‍‍ಬ್ಯಾಗ್‍ ಸೇರಿ ಹಲವಾರು ಫೀಚರ್‍‍ಗಳಿವೆ. ಕಂಫರ್ಟ್ ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಆರ್‍ಎಕ್ಸ್ 450 ಹೆಚ್‍ಎಲ್ ಎಸ್‍‍ಯುವಿ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನೊರಾಮಿಕ್ ಸನ್‍‍ರೂಫ್, ಲೆದರ್ ಅಪ್‍‍ಹೊಲೆಸ್ಟರಿ, ಮುಂಭಾಗದಲ್ಲಿ ಹೀಟೆಡ್ ಹಾಗೂ ಕೂಲ್ ಸೀಟುಗಳಿದ್ದರೆ, ಹಿಂಭಾಗದಲ್ಲಿ ಫೋಲ್ಡ್ ಮಾಡಬಹುದಾದ ಸೀಟುಗಳಿವೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಲೆಕ್ಸಸ್ ಇಂಡಿಯಾದ ಅಧ್ಯಕ್ಷರಾದ ಪಿ ಬಿ ವೇಣುಗೋಪಾಲ್‍‍ರವರು ಮಾತನಾಡಿ, ಆರ್‍ಎಕ್ಸ್ 450 ಹೆಚ್‍ಎಲ್ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿದ್ದು, ಇದು ಐಷಾರಾಮಿ, ಸ್ಪೇಸ್, ಕರಕುಶಲತೆಯನ್ನು ನೀಡುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಇದರ ಜೊತೆಗೆ ಪ್ರಯಾಣದ ಪ್ರತಿ ಕ್ಷಣದಲ್ಲೂ ಆರಾಮದಾಯಕ ಅನುಭವವನ್ನು ನೀಡುತ್ತದೆ. ಸುಧಾರಿತ ತಂತ್ರಜ್ಞಾನ, ವಿನ್ಯಾಸ ಮತ್ತು ಆಕರ್ಷಕ ಬೆಲೆ ಖಂಡಿತವಾಗಿಯೂ ಆರ್‍ಎಕ್ಸ್ 450 ಹೆಚ್‍ಎಲ್ ಅನ್ನು ಅಪೇಕ್ಷಣೀಯ ಕಾರನ್ನಾಗಿ ಮಾಡುತ್ತದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ನಾವು ಹೊಸ ಆರ್‌ಎಕ್ಸ್‌ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ, ನಮ್ಮ ನಿರಂತರ ಬದ್ಧತೆ ಹಾಗೂ ಅಸ್ತಿತ್ವದಲ್ಲಿರುವ ನಮ್ಮ ಕೊಡುಗೆಗಳಿಗೆ ಮೌಲ್ಯಯುತವಾದ ಸೇರ್ಪಡೆಯಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಆರ್‍ಎಕ್ಸ್ 450 ಹೆಚ್‍‍‍ನ ಏಳು ಸೀಟುಗಳ ಆವೃತ್ತಿಯಾಗಿದೆ. ಹೊಸ ವಿಸ್ತರಿತ ವ್ಹೀಲ್‍‍ಬೇಸ್ ಮಾದರಿಯು ಐದು ಸೀಟುಗಳ ಮಾದರಿಗೆ ಸುಮಾರು ರೂ.30 ಲಕ್ಷ ಹೆಚ್ಚಿನ ಬೆಲೆಯನ್ನು ಹೊಂದಿದೆ. ಹೊಸ ಲೆಕ್ಸಸ್ ಆರ್‍ಎಕ್ಸ್ 450 ಹೆಚ್‍ಎಲ್ ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕ್ಯೂ 7, ವೋಲ್ವೋ ಎಕ್ಸ್‌ಸಿ 90, ಮರ್ಸಿಡಿಸ್ ಬೆಂಜ್ ಜಿಎಲ್ಇ ಹಾಗೂ ಬಿಎಂಡಬ್ಲ್ಯು ಎಕ್ಸ್5 ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New (2020) Lexus RX450hL Launched In India: Prices Start At Rs 99 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X