ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಭಾರತದಲ್ಲಿ ಇತರ ಕ್ರೀಡೆಗಳಗಿಂತ ಕ್ರಿಕೆಟ್ ಆಟಗಾರರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ಟೀಂ ಇಂಡಿಯಾ ಆಟಗಾರರಿಗೆ ಕಾರುಗಳ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಭಾರತೀಯ ಸ್ಟಾರ್ ಕ್ರಿಕೆಟ್ ಆಟಗಾರರು ಯಾವ ಹೊಸ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ವಿರಾಟ್ ಕೊಹ್ಲಿ

ಬೆಂಟ್ಲೆ ಕಾಂಟಿನೇಟಲ್ ಫ್ಲೈಯಿಂಗ್ ಸ್ಪರ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕಾರು ಕ್ರೇಜ್ ಸ್ವಲ್ಪ ಹೆಚ್ಚು. ಹೀಗಾಗಿ ಕೊಹ್ಲಿ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇದೀಗ ವಿರಾಟ್ ಕೊಹ್ಲಿ ಅವರು ಹೊಸ ಬೆಂಟ್ಲೆ ಕಾರು ಅನ್ನು ಖರೀದಿಸಿದ್ದಾರೆ. ಕೊಹ್ಲಿಯವರ ಬಳಿಯಿರುವ ಎರಡನೇ ಬೆಂಟ್ಲೆ ಕಾರು ಇದಾಗಿದೆ. ಕೊಹ್ಲಿ ಅವರು ದೆಹಲಿಯಲ್ಲಿದ್ದಾಗ ಮೊದಲ ಬಾರಿಗೆ ಬೆಂಟ್ಲೆ ಕಾಂಟಿನೇಟಲ್ ಜಿಟಿ ಕಾರ್ ಅನ್ನು ಖರೀದಿಸಿದ್ದರು.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಕೊಹ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾದ ಬಳಿಕ ಮುಂಬೈಗೆ ಶಿಫ್ಟ್ ಆದ ನಂತರ ಎರಡನೇ ಬೆಂಟ್ಲೆ ಕಾರನ್ನು ಖರೀದಿಸಿದ್ದಾರೆ. ಈ ಕಾರಿನಲ್ಲಿ ತಮ್ಮ ಪತ್ನಿ ಅನುಷ್ಕ ಶರ್ಮಾ ಜೊತೆ ಸಿಟಿ ರೌಂಡ್ ಹೋಗುವ ಪೋಟೋ ಇದಾಗಿದೆ. ಫ್ಲೈಯಿಂಗ್ ಸ್ಪರ್ ಕಾರಿನ ರೂ.3.41 ಕೋಟಿ ಯಿಂದ ರೂ.3.63 ಕೋಟಿವರೆಗೂ ಬೆಲೆಯನ್ನು ಹೊಂದಿದೆ. ಈ ಕಾರು 4.0 ಲೀಟರ್ ವಿ8 ಎಂಜಿನ್ ಹೊಂದಿದ್ದು, 500 ಬಿಎಚ್‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 6.0 ಲೀಟರ್ ಡಬ್ಲ್ಯು12 ಎಂಜಿನ್ 616 ಬಿ‍ಎಚ್‍ಪಿ ಮತ್ತು 800 ಎನ್‍ಎಂ ಉತ್ಪಾದಿಸುತ್ತದೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಹಾರ್ದಿಕ್ ಪಾಂಡ್ಯ

ಮರ್ಸಿಡಿಸ್-ಎಎಂಜಿ ಜಿ63

ಟೀಂ ಇಂಡಿಯಾ ಅಲ್-ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಾರುಗಳ ಕ್ರೇಜ್ ಹೊಂದಿರುವ ಆಟಗಾರ. ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಲ್ಯಾಂಬೊರ್ಗಿನಿ ಕಾರನ್ನು ಟೆಸ್ಟ್ ಡ್ರೈವ್ ಮಾಡಿದ್ದರು. ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಹೊಸ ತಲೆಮಾರಿನ ಮರ್ಸಿಡಿಸ್-ಎಎಂ‍ಜಿ ಜಿ63 ಕಾರನ್ನು ಖರೀದಿಸಿದ್ದಾರೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.19 ಕೋಟಿಗಳಾಗಿದೆ. ಈ ಕಾರಿನ ಆನ್‍‍ರೋಡ್ ಬೆಲೆ ರೂ. 3 ಕೋಟಿಯಾಗಿದೆ. ಈ ಹೊಸ ಕಾರು 4.0 ಲೀಟರ್ ಬಿಐ-ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 585 ಬಿ‍ಎಚ್‍‍ಪಿ ಪವರ್ ಮತ್ತು 850 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಮಹೇಂದ್ರ ಸಿಂಗ್ ಧೋನಿ ಹೊಸ ಕಾರು

ಜೀಪ್ ಗ್ರ್ಯಾಂಡ್ ಚರೋಕಿ ಎಸ್‍‍ಯುವಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕಾರು ಮತ್ತು ಬೈಕ್‍‍ಗಳ ಕ್ರೇಜ್ ಇರುವ ವಿಷಯ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮಹೀಂದ್ರ ಸಿಂಗ್ ಧೋನಿಯವರು ದುಬಾರಿ ಕಾರು ಜೀಪ್ ಗ್ರ್ಯಾಂಡ್ ಚರೋಕಿ ಎಸ್‍‍ಯುವಿ ಇತ್ತೀಚೆಗೆ ಖರೀದಿಸಿದ್ದಾರೆ. ಇದು ಸಿ‍‍ಬಿ‍ಯು ವಾಹನವಾಗಿದ್ದು, ಇದರ ಬೆಲೆಯು ರೂ.2 ಕೋಟಿಗಿಂತಲೂ ಅಧಿಕವಾಗಿದೆ. ಈ ಎಸ್‍‍ಯು‍ವಿ ಅಂತರಾಷ್ಟ್ರೀಯ ಮಟ್ಟದ ಪವರ್‍‍ಫುಲ್ ಎಸ್‍‍ಯು‍ವಿಗಳಲ್ಲಿ ಒಂದಾಗಿದೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಈ ಎಸ್‍‍ಯು‍‍ವಿ 6.2 ಲೀಟರ್ ಹೆಲ್‍‍ಕ್ಯಾಟ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 700 ಬಿ‍ಎಚ್‍ಪಿ ಪವರ್ ಮತ್ತು 875 ಎನ್‍ಎಮ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ವಿಶೇಷತೆ ಅಂದರೆ ಕೇವಲ 3.26 ಸೆಕೆಂಡ್‍ಗಳಲ್ಲಿ 100ಕಿ.ಮೀ ವೇಗವನ್ನು ಮುಟ್ಟಬಲ್ಲದು. ಧೋನಿ ಲಡಾಖ್‍ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಈ ಕಾರಿನ ಡೆಲಿವರಿಯನ್ನು ಸ್ವೀಕರಿಸಿದ ಬಳಿಕ ಅವರ ಪತ್ನಿ ಕಾರಿನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಶುಭಮನ್ ಗಿಲ್

ಲ್ಯಾಂಡ್ ರೋವರ್ ರೆಂಜ್ ರೋವರ್ ವಿಲಾರ್

ಉದಯೋನ್ಮುಖ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಗಿಲ್ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದಾರೆ. ರೂ.1 ಕೋಟಿ ನೀಡಿ ಲ್ಯಾಂಡ್ ರೋವರ್ ರೆಂಜ್ ರೋವರ್ ವಿಲಾರ್ ಕಾರನ್ನು ಖರೀದಿಸಿದ್ದಾರೆ. ಸ್ಟೈಲಿಶ್ ಲುಕ್ ಅನ್ನು ಹೊಂದಿರುವ ಈ ಕಾರ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಈ ಕಾರಿನಲ್ಲಿ ಮೆರಿಡಿಯನ್ ಸೌಂಡ್ ಸಿಸ್ಟಂ ಅಳವಡಿಸಲಾಗಿದ್ದು, ಲ್ಯಾಂಡ್ ರೋವರ್ ಸೆಗ್‍‍ಮೆಂಟಿನಲ್ಲಿರುವ ಉತ್ತಮ ಆಯ್ಕೆಯಾಗಿದೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಸಚಿನ್ ತೆಂಡೂಲ್ಕರ್

ಬಿ‍ಎಂ‍ಡಬ್ಲ್ಯು ಎಂ760 ಎಲ್‍ಐ

ಸಚಿನ್ ತೆಂಡೂಲ್ಕರ್ ಅವರಿಗೆ ಕಾರು ಕ್ರೇಜ್ ಇರುವುದು ಗೊತ್ತಿರುವ ವಿಷಯವಾಗಿದೆ. ಸಚಿನ್ ಅವರ ಬಳಿ ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ. ಸಚಿನ್ ಅವರು ಇತ್ತೀಚೆಗೆ ಬಿ‍‍ಡಬ್ಲ್ಯು 7-ಸೀರಿಸ್ ಎಂಡಬ್ಲ್ಯು ಎಂ 760 ಎಲ್‍ಐ ಕಾರನ್ನು ಖರೀದಿಸಿದ್ದಾರೆ. ಇದು 7-ಸೀರಿಸ್ ಕಾರಿನಲ್ಲಿರುವ ಟಾಪ್ ಆವೃತ್ತಿಯಾಗಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ ರೂ. 2.8 ಕೋಟಿಗಳಾದರೆ, ಅನ್ ರೋಡ್ ಬೆಲೆ ಸುಮಾರು ರೂ. 3.5 ಕೋಟಿಗಳಾಗುತ್ತದೆ. ಈ ಕಾರು 6.6 ಲೀಟರ್ ವಿ12 ಎಂಜಿನ್ ಹೊಂದಿದ್ದು, ಇದು 600 ಬಿಎಚ್‍‍ಪಿ ಪವರ್ ಮತ್ತು 850 ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಎ‍ಡಬ್ಲ್ಯುಡಿ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಭಾರತದ ಕ್ರಿಕೆಟಿಗರ ಬಳಿಯಿರುವ ಐಷಾರಾಮಿ ಕಾರುಗಳಿವು

ಯುವರಾಜ್ ಸಿಂಗ್

ಬಿಎಂಡಬ್ಲ್ಯು ಎಂ5

ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಬಿ‍‍ಡಬ್ಲ್ಯು ಕಾರು ಅಭಿಮಾನಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಗ್ ಬಾಯ್ ಟಾಯ್ಸ್ (ಬಿ‍ಬಿ‍ಟಿ) ಅವರಿಂದ ಬಿ‍‍ಡಬ್ಲು ಎಂ5 ಕಾರನ್ನು ಖರೀದಿಸಿದ್ದರು. ಬಿಬಿಟಿ ಐಷಾರಾಮಿ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತದೆ. ಎಂ5 ಕಾರು 5.0 ಲೀಟರ್ ವಿ10 ಎಂಜಿನ್ ಹೊಂದಿದ್ದು, ಇದು 500 ಬಿ‍ಎಚ್‍ಪಿ ಪವರ್ ಮತ್ತು 520 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
New cars of India’s cricket stars: Sachin Tendulkar’s BMW 7-Series to Virat Kohli’s Bentley -Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X