ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಪರಿಸರ ಸ್ನೇಹಿ ವಾಹನಗಳ ತಯಾರಕ ಸಂಸ್ಥೆಯಾದ ಮೆಜೆಂಟಾ ಪವರ್, ಪೋರ್ಟಬಲ್ ಹಾಗೂ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜರ್ ಸರಣಿಗಳನ್ನು ಬಿಡುಗಡೆಗೊಳಿಸಿದೆ. ಇದನ್ನು ಚಾರ್ಜ್ ಗ್ರಿಡ್ ಎಂದು ಕರೆಯಲಾಗುತ್ತದೆ. ಈ ಪೋರ್ಟಬಲ್ ಗ್ರಿಡ್ ಹಳೆಯ ಹಾಗೂ ಹೊಸ ನಾಲ್ಕು ಚಕ್ರ ಮತ್ತು ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲಿದೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಕಂಪನಿಯ ಹೊಸ ಚಾರ್ಜಿಂಗ್ ಗ್ರಿಡ್ ಸರಣಿಯು ಮೊದಲ ಪೂರ್ಣ ಪ್ರಮಾಣದ ಇಂಟಿಗ್ರೇಟೆಡ್, ಪೇಮೆಂಟ್ ಎನಾಬಲ್ಡ್ ಒಪನ್ ನೆಟ್‌ವರ್ಕ್ ಆಗಿದೆ. ಚಾರ್ಜ್‌ಗ್ರಿಡ್ ಸರಣಿಯು ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ - ಲೈಟ್ ಮಾದರಿಯ ಬೆಲೆ ರೂ.11,799, ಪ್ರೊ -3 ಪಿ ಮಾದರಿಯ ಬೆಲೆ ರೂ.32,499, ಪ್ರೊ-ಟಿ 2 ಮಾದರಿಯ ಬೆಲೆ ರೂ. 39,499 ಹಾಗೂ ಅಲ್ಟ್ರಾ ಮಾದರಿಯ ಬೆಲೆ ರೂ.48,699ಗಳಾಗಿವೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಈ ಎಲೆಕ್ಟ್ರಿಕ್ ವಾಹನಗಳ ಚಾರ್ಜರ್‍ ಬಗ್ಗೆ ಮಾತನಾಡಿದ ಮೆಜೆಂಟಾ ಪವರ್‍‍ನ ಎಂ‍‍ಡಿ ಮ್ಯಾಕ್ಸನ್ ಲೂಯಿಸ್‍‍ರವರು, ಮೆಜೆಂಟಾದಿಂದ ತಯಾರಾದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‍‍ಗಳು, ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯದ ಬೆನ್ನೆಲುಬಾಗಿ ರೂಪುಗೊಂಡಿವೆ. ಗ್ರಾಹಕರಿಗೆ ಸುಲಭವಾಗಿ ಚಾರ್ಜಿಂಗ್ ಸೇವೆಗಳನ್ನು ಒದಗಿಸುತ್ತವೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಈ ರೀತಿಯ ಚಾರ್ಜಿಂಗ್‍‍ಗಳು ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವ ಗ್ರಾಹಕರ ಸಮಸ್ಯೆಯನ್ನು ದೂರ ಮಾಡುತ್ತವೆ. ಸ್ಮಾರ್ಟ್ ಚಾರ್ಜಿಂಗ್ ಸೊಲ್ಯೂಷನ್‍‍ಗಳನ್ನು ವೈಯಕ್ತಿಕ, ಕಾರ್ಪೊರೇಟ್ ಹಾಗೂ ಸಮುದಾಯಗಳ ಬಳಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಈ ಚಾರ್ಜರ್‌ಗಳನ್ನು ಮೊಬೈಲ್ ಅಪ್ಲಿಕೇಶನ್‌ ಮೂಲಕ ಸಂಪರ್ಕಿಸಬಹುದು. ಈ ಆ್ಯಪ್ ಚಾರ್ಜಿಂಗ್ ಕೇಂದ್ರಗಳಿರುವ ಸ್ಥಳಗಳ ಮಾಹಿತಿ ನೀಡುತ್ತದೆ. ಬಳಕೆದಾರರು ಚಾರ್ಜಿಂಗ್ ಸ್ಲಾಟ್‌ಗಳನ್ನು ಸಹ ಬುಕ್ ಮಾಡಿ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಬಳಕೆದಾರರು ಚಾರ್ಜಿಂಗ್‍‍ನ ಬಗ್ಗೆ ಅಪ್‍ಡೇಟ್ ಪಡೆಯಬಹುದು ಹಾಗೂ ಯಾವ ಸಮಯದಲ್ಲಿ ಬಳಸಬಹುದು ಎಂಬುದರ ಬಗ್ಗೆ ತಿಳಿಯಬಹುದು. ಚಾರ್ಜಿಂಗ್ ಗ್ರಿಡ್ ಸರಣಿಯು ವಾಟರ್ ಪ್ರೂಫ್ ಆಗಿದೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇತ್ತೀಚೆಗೆ ಪ್ರಾರಂಭಿಸಲಾದ ಎಲೆಕ್ಟ್ರಿಕ್ ವಾಹನಗಳಿಗಾಗಿ ಟೈಪ್ 2 ಕನೆಕ್ಟರ್ ಸೇರಿದಂತೆ ಅನೇಕ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗುತ್ತದೆ. ಅವುಗಳು ಎಲ್‍‍ಸಿ‍‍ಡಿ ಸ್ಕ್ರೀನ್ ಹಾಗೂ ಎಲ್ಇಡಿ ಇಂಡಿಕೇಟರ್‍‍ಗಳನ್ನು ಸಹ ಹೊಂದಿರುತ್ತವೆ. ಐಇಸಿ ಸಾಕೆಟ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಎರಡನೇ ಸಾಕೆಟ್ 16ಎ (ಮನೆಯ ಸಾಕೆಟ್) ಅಥವಾ ಟೈಪ್ -2 ಕನೆಕ್ಟರ್ ಆಗಿರಬಹುದು. ಮೆಜೆಂಟಾ ಪವರ್ ಈಗಾಗಲೇ ಚಾರ್ಜರ್‌ಗಳನ್ನು ಲಿಂಕ್ಸ್ ಎಂಬ ಕಂಪನಿಯ ಮೂಲಕ ಅಮೆಜಾನ್ ಆನ್‌ಲೈನ್ ಶಾಪಿಂಗ್‍‍ನಲ್ಲಿ ಮಾರಾಟ ಮಾಡುತ್ತಿದೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ವಾಹನಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆಯುತ್ತಿದ್ದು, ಜನರು ಸಹ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಸಮಸ್ಯೆಗಳೆಂದರೆ ಅವುಗಳ ಚಾರ್ಜ್‌ ಬೇಗ ಕಡಿಮೆಯಾಗುತ್ತದೆ.

ಇವಿಗಳಿಗೆ ಪೋರ್ಟಬಲ್ ಚಾರ್ಜರ್ ಬಿಡುಗಡೆಗೊಳಿಸಿದ ಮೆಜೆಂಟಾ

ಚಾರ್ಜ್ ಗ್ರಿಡ್ ಅನ್ನು ಬಿಡುಗಡೆಗೊಳಿಸುವ ಮೂಲಕ ಈ ಸಮಸ್ಯೆಯನ್ನು ದೂರ ಮಾಡಬಹುದು. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲಿವೆ.

Most Read Articles

Kannada
English summary
Magenta Power Launches ChargeGrid — Power Banks For EVs! - Read in kannada
Story first published: Friday, July 26, 2019, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X