ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮಹೀಂದ್ರಾದ ಟ್ರಕ್ ಹಾಗೂ ಬಸ್ (ಎಂ‍ಟಿ‍‍ಬಿ) ವಿಭಾಗವು ತನ್ನ ಬ್ಲೆಜೊ ಸರಣಿಯ ಟ್ರಕ್‍‍ಗಳು, ಟ್ರಕ್ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿರುವುದಾಗಿ ತಿಳಿಸಿದೆ. ಬ್ಲೆಜೊ ಟ್ರಕ್‍‍ಗಳನ್ನು ಮೂರು ವರ್ಷಗಳ ಹಿಂದೆ ಬಿಡುಗಡೆಗೊಳಿಸಲಾಗಿತ್ತು.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಬ್ಲೆಜೊ ಸರಣಿಯ ಪ್ರೀಮಿಯಂ ಟ್ರಕ್‍‍ಗಳನ್ನು ಬೇರೆ ಕಂಪನಿಯ ಟ್ರಕ್‍‍ಗಳ ಬೆಲೆಯಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಬ್ಲೆಜೊ ಸರಣಿಯ ಟ್ರಕ್‍‍ಗಳು ಬಿ‍ಎಸ್ 6 ಎಂಜಿನ್ ಹೊಂದಿವೆ. ಇದರ ಜೊತೆಗೆ ಮಹೀಂದ್ರಾದ ಟ್ರಕ್ ಹಾಗೂ ಬಸ್ ವಿಭಾಗವು ಬಿ‍ಎಸ್ 4 ಎಂಜಿನ್‍‍ನ 80%ಗೂ ಹೆಚ್ಚಿನ ಬಿಡಿಭಾಗಗಳನ್ನು ಹಾಗೆಯೇ ಉಳಿಸಿಕೊಂಡು ಬಿ‍ಎಸ್ 6 ಎಂಜಿನ್‍ ಅನ್ನು ಸರಳವಾಗಿ ಅಭಿವೃದ್ಧಿಪಡಿಸಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮಹೀಂದ್ರಾ ಕಂಪನಿಯು ಇತ್ತೀಚಿಗೆ ಬ್ಲೆಜೊ ಎಕ್ಸ್ 49 ರಿಜಿಡ್ (ಎಂ‍ಎ‍‍ವಿ) ಮಲ್ಟಿ ಆಕ್ಸೆಲ್ ವೆಹಿಕಲ್ ಟ್ರಕ್ ಅನ್ನು 16 ವ್ಹೀಲ್‍‍ಗಳ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಟ್ರಕ್ ಸುಧಾರಿತ ಫ್ಯೂಯಲ್ ಎಫಿಶಿಯನ್ಸಿಯ ಜೊತೆಗೆ ಹೆಚ್ಚು ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮಹೀಂದ್ರಾದ ಟ್ರಕ್ ಹಾಗೂ ಬಸ್ ವಿಭಾಗದ ಫ್ಯೂರಿಯೊ ಟ್ರಕ್ ಸಹ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದು, 12 ಟನ್ ಹಾಗೂ 14 ಟನ್ ಸೆಗ್‍‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಟ್ರಕ್‍‍ಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿನ ವಾಹನಗಳನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ಮೂರು ವಿವಿಧ ಬಗೆಯ ಹೊಸ ವಾಹನಗಳನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಐ‍‍ಸಿ‍‍ವಿ ಸೆಗ್‍‍ಮೆಂಟಿನಲ್ಲಿ 5ರಿಂದ 18 ಟನ್ ಭಾರವನ್ನು ಹೊರುವ ಸಾಮರ್ಥ್ಯದ ಇನ್ನೂ 18 ಮಾದರಿಯ ಟ್ರಕ್‍‍ಗಳನ್ನು ಬಿಡುಗಡೆಗೊಳಿಸಲಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಇದರ ಬಗ್ಗೆ ಮಾತನಾಡಿದ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಸೆಕ್ಟರ್‌ನ ಅಧ್ಯಕ್ಷರಾದ ರಾಜನ್ ವಾಧೇರಾರವರು, ಹೆವಿಡ್ಯೂಟಿ ಕಮರ್ಷಿಯಲ್ ವೆಹಿಕಲ್ ಸೆಗ್‍‍ಮೆಂಟ್ ಕಠಿಣ ಸಮಯವನ್ನು ಎದುರಿಸುತ್ತಿರುವುದರಿಂದ, ಈ ಸೆಗ್‍‍ಮೆಂಟಿನಲ್ಲಿ ಯಶಸ್ಸನ್ನು ಸಾಧಿಸಲು ಹೊಸತನದ ಅವಶ್ಯಕತೆಯಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಇದರಿಂದಾಗಿ ಮೈಲೇಜ್‍‍ಗೆ ಸಂಬಂಧಿಸಿದ ವಿಷಯದಲ್ಲಿ ಬ್ಲೆಜೊ ಸರಿಸಾಟಿಯಿಲ್ಲದ ಯಶಸ್ಸನ್ನು ಕಂಡಿದೆ. ಇದು ಬ್ಲೆಜೊ ಟ್ರಕ್ ಮಾಲೀಕರಿಗೆ ಸಂದ ಗೆಲುವು. ಬಿ‍ಎಸ್ 6 ಎಂಜಿನ್‍ ಹೊಂದಿರುವ ಹೆಚ್ಚಿನ ಟ್ರಕ್ ಹಾಗೂ ಬಸ್ಸುಗಳನ್ನು ಬಿಡುಗಡೆಗೊಳಿಸಲಿದ್ದೇವೆ. ಹೊಸ ವಾಹನಗಳು ಸರಳವಾದ ಹೊಸ ಟೆಕ್ನಾಲಜಿ ಹೊಂದಿರಲಿದ್ದು, ಹೆಚ್ಚಿನ ಮೈಲೇಜ್ ನೀಡಲಿವೆ ಎಂದು ಹೇಳಿದರು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ, ಮಹೀಂದ್ರಾ ಟ್ರಕ್ ಹಾಗೂ ಬಸ್ ವಿಭಾಗದ ಸಿಇಒ ವಿನೋದ್ ಸಹಾಯ್‍‍ರವರು ಮಾತನಾಡಿ, ನಮ್ಮ ಸರಿಸಾಟಿಯಿಲ್ಲದ ಖಚಿತ ಮೈಲೇಜ್ ಪ್ರಸ್ತಾಪವನ್ನು ಮುಂದುವರೆಸುತ್ತಿದ್ದೇವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

16 ವ್ಹೀಲ್ ಸೆಗ್‍‍ಮೆಂಟಿನಲ್ಲಿರುವ ಹೊಸ ಬ್ಲೆಜೊ ಎಕ್ಸ್ 49 ರಿಜಿಡ್ ಎಂಎವಿ ಟ್ರಕ್ ಹೊಂದಿರುವ ಗ್ರಾಹಕರು, ಹೆಚ್ಚು ಮೈಲೇಜ್ ಹಾಗೂ ಪೇಲೋಡ್‌ನಿಂದಾಗಿ ಹೆಚ್ಚು ಆದಾಯವನ್ನು ಹೊಂದಲಿದ್ದಾರೆ. ಐಸಿವಿ ಸರಣಿಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ, ಫ್ಯೂರಿಯೊವನ್ನು ಗ್ರಾಹಕರು ಒಪ್ಪಿಕೊಂಡಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಮುಂಬರುವ ದಿನಗಳಲ್ಲಿ 18 ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವುದರೊಂದಿಗೆ, ಈ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿರಲು ಬಯಸುತ್ತೇವೆ. ನಮ್ಮ ಕ್ರೂಜಿಯೊ ಸರಣಿಯ ಲಾಂಗ್ ಪ್ಲಾಟ್‌ಫಾರ್ಮ್ ಓವರ್‌ಹ್ಯಾಂಗ್ ಬಸ್‌ಗಳನ್ನು ಉದ್ಯೋಗಿ ಹಾಗೂ ಸ್ಕೂಲ್ ಸೆಗ್‍‍ಮೆಂಟಿನಲ್ಲಿ ವಾಣಿಜ್ಯಿಕವಾಗಿ ಬಿಡುಗಡೆಗೊಳಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಒಂದು ಅದ್ಭುತವಾದ ಕಂಪನಿಯಾಗಿದ್ದು, ತನ್ನ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ಟ್ರಕ್ ಸೆಗ್‍‍ಮೆಂಟಿನಲ್ಲಿ ಮಾರುಕಟ್ಟೆಯ ನಾಯಕನಾಗಿ ಹೊರಹೊಮ್ಮಿದೆ.

ಕಡಿಮೆ ಅವಧಿಯಲ್ಲಿ ಅಗ್ರಸ್ಥಾನಕ್ಕೇರಿದ ಮಹೀಂದ್ರಾ ಬ್ಲೆಜೊ

ಇದು ಸುಲಭದ ಮಾತಲ್ಲ. ಇದಕ್ಕಾಗಿ ಇಡೀ ಎಂ‍‍ಟಿ‍‍ಬಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಬೇಕು. ಮಹೀಂದ್ರಾ ಕಂಪನಿಯ ಕ್ಲಾಸಿಕ್ ಲೆಜೆಂಡ್ಸ್ ವಿಭಾಗವು ಎಂಟಿಬಿ ತಂಡವನ್ನು ಅನುಸರಿಸುವುದು ಒಳ್ಳೆಯದು.

Most Read Articles

Kannada
English summary
Mahindra’s Blazo Range Of Trucks Become Market Leaders In Trucking Industry - Read in Kannada
Story first published: Tuesday, October 15, 2019, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X