Just In
- 1 hr ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 2 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ದಿಲ್ಲದೆ ಬಿಡುಗಡೆಯಾದ ಎಬಿಎಸ್ ಆಧಾರಿತ ಮಹೀಂದ್ರಾ ಬೊಲೆರೊ
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಎಸ್ಯುವಿ ಕಾರುಗಳಿತಿಂತಲೂ ಈ ಹಿಂದೆಯೆ ತನ್ನ ವಿಭಿನ್ನವಾದ ವಿನ್ಯಾಸದಿಂದ ಮಾರುಕಟ್ಟೆಯಲ್ಲಿ ಜನಪ್ರೀಯತೆಯನ್ನು ಪಡೆದ ಮಹೀಂದ್ರಾ ಬೊಲೆರೊ ಕಾರು ಇದೀಗ ಮತ್ತಷ್ಟು ಸುರಕ್ಷಾ ಸಾಧನಗಳೊಂದಿಗೆ ಬಿಡಗಡೆಯಾಗಿದೆ. ಹೊಸ ಸುರಕ್ಷಾ ಸಾಧನಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಬೊಲೆರೊ ಕಾರಿನ ಖರರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಸಹ ಪ್ರಾರಂಭವಾಗಿದ್ದು, ಮಹೀಂದ್ರಾ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ನಿಮ್ಮ ಸಮೀಪದಲ್ಲಿರುವ ಡೀಲರ್ನ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಹೊಸ ಸುರಕ್ಷಾ ಸಾಧನಗಳು
ಬಿಡುಗಡೆಯಾದ ನವೀಕೃತ ಮಹೀಂದ್ರಾ ಬೊಲೊರೊ ಎಸ್ಯುವಿ ಕಾರು ಈ ಬಾರಿ ಎಬಿಎಸ್, ಡ್ರೈವರ್ಸೈಡ್ ಏರ್ಬ್ಯಾಗ್, ಓವರ್ ಸ್ಪೀಡಿಂಗ್ ಅಲಾರ್ಮ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಹಾಗು ಡ್ರೈವರ್ ಮತ್ತು ಕೋ ಪ್ಯಾಸೆಂಜರ್ಗಳಿಗೆ ಸೀಟ್ ಬೆಲ್ಟ್ ವಾರ್ನಿಂಗ್ ಎಂಬ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿದೆ. ಹೊಸ ಸುರಕ್ಷಾ ಸಾಧನಗಳ ನಿಯಮಾವಳಿಗಳ ಅನುಸಾರ ಮಹೀಂದ್ರಾ ಸಂಸ್ಥೆಯು ಮೇಲೆ ನೀಡಲಾಗಿರುವ ಸುರಕ್ಷಾ ಸಾಧನಗಳನ್ನು ನೀಡು ಬಿಡುಗಡೆ ಮಾಡಲಾಗಿದೆ.
ಎಬಿಎಸ್ ಆಧಾರಿತ ಮಹೀಂದ್ರಾ ಬೊಲೊರೊ ಕಾರು ಈ ಹಿಂದೆಯೆ ಡೀಲರ್ಗಳಾ ಬಳಿ ಶೋಕೇಸ್ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಸಂಸ್ಥೆಯ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲದ ಬಿಡುಗಡೆ ಮಾಡಲಾಗಿದೆ. ಮಹೀಂದ್ರಾ ಸಂಸ್ಥೆಯು ಬಿಡುಗಡೆ ಮಾಡಲಾದ ಅಪ್ಗ್ರೇಡೆಡ್ ಬೊಲೆರೊ ಕಾರಿನ ಬೆಲೆಯನ್ನು ಇನ್ನು ಬಹಿರಂಗವಾಗಿಲ್ಲ.
ಆದರೆ ಸಧ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಹೀಂದ್ರಾ ಬೊಲೆರೊ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.56 ಲಕ್ಷದಿಂದ ರೂ. 9.42 ಲಕ್ಷದವರೆಗು ಮಾರಾಟವಾಗುತ್ತಿದೆ.
ಇಷ್ಟೆ ಅಲ್ಲದೆಯೆ ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂದಿನ ತಲೆಮಾದರಿನ ಬೊಲೆರೊ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನಲ್ಲಿ ಕೇಂದ್ರ ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಕೆಲವು ಮಹತ್ಪದ ಬದಲಾವಣೆಗಳನ್ನು ತರಲಾಗುತ್ತಿದೆ. 2020ರ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್ 6 ಕಾಯ್ದೆಯು ಜಾರಿಯಾಗುವ ಮುನ್ನವೇ ಹೊಸ ಕಾರುಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನಲ್ಲಿ ಗುಣಮಟ್ಟದ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ.
ಎಂಜಿನ್ ಸಾಮರ್ಥ್ಯ
ಬೊಲೆರೊ ಕಾರುಗಳು ಎರಡು ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 2.5-ಲೀಟರ್ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63-ಬಿಎಚ್ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಬೊಲೆರೊ ಪವರ್ ಪ್ಲಸ್ ಮಾದರಿಯು 1.5-ಲೀಟರ್ ಎಂಹ್ವಾಕ್ಡಿ70 ಡೀಸೆಲ್ ಎಂಜಿನ್ ಮಾದರಿಯು 71-ಬಿಎಚ್ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.
ಕಳೆದ 19 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬೊಲೆರೊ ಕಾರುಗಳು ಅಂದಿನಿಂದ ಈ ವರೆಗೂ ಒಂದೇ ಪ್ರಮಾಣದಲ್ಲಿ ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ ಹುಟ್ಟುಹಾಕಿತ್ತು.
ಅಗಸ್ಟ್ 10, 2000ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಹೊಂದುತ್ತಲೇ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಬೊಲೆರೊ ಕಾರುಗಳು ಇಲ್ಲಿಯವರೆಗು ಸುಮಾರು 10 ಲಕ್ಷಕ್ಕು ಯುನಿಟ್ಗಳು ಮಾರಾಟಗೊಂಡಿದ್ದು, ಎಸ್ಯುವಿ ಕಾರುಗಳ ವಿಭಾಗದಲ್ಲಿನ ಬೊಲೆರೊ ಜನಪ್ರಿಯತೆಗೆ ಮತ್ತೊಂದು ಹೆಗ್ಗಳಿಕೆ ಎನ್ನಬಹುದು.
ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಆಟೊಮೊಬೈಲ್ ವಿಭಾಗದ ಅಧ್ಯಕ್ಷ ಪವನ್ ಗೋಯಂಕಾ ಅವರು, ದೇಶಿಯ ಮಾರುಕಟ್ಟೆಯಲ್ಲಿ ಕಳೆದ 19 ವರ್ಷಗಳಿಂದ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಬೊಲೆರೊ ಮಾದರಿಯು ಮುಂಬರುವ ದಿನಗಳಲ್ಲಿ ಹಲವು ಹೊಸತನಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ ಎಂದಿದ್ದಾರೆ.
ಇನ್ನು ಜಾರಿಯಾಗಲಿರುವ ಬಿಎಸ್ 6 ನಿಯಮದಿಂದಾಗಿ ಎಂಜಿನ್ ವಿಭಾಗದಲ್ಲೂ ಹೆಚ್ಚಿನ ಬದಲಾವಣೆಗಳಾಗಲಿದ್ದು, ಬಿಎಸ್ 6 ಎಂಜಿನ್ನಿಂದಾಗಿ ಹೊಗೆ ಉಗುಳುವ ಪ್ರಮಾಣವು ತಗ್ಗುವ ಮೂಲಕ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ. ಈಗಾಗಲೇ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮಕ್ಕೆ ಸರಿಸಮನಾದ ಕೆಲವು ಹೊಸ ಕಾಯ್ದೆಗಳನ್ನು ಜಾರಿಗೊಳಿಸಿದ್ದು, 2017ರಲ್ಲೇ ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಾಗಿರುವ ಯುರೋ 6 ನಿಯಮದಿಂದಾಗಿ ವಾಹನಗಳು ಹೊರಸೂಸುವ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.