ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಪವರ್+ ಈಗ ಬಿಎಸ್6 ಎಂಜಿನ್‍ನೊಂದಿಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸಿದ್ಧತೆ ಪ್ರಮಾಣೀಕರಣವನ್ನು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ(ಐಸಿಎಟಿ) ನೀಡಿದ್ದು, ಮಹೀಂದ್ರಾ ಬೊಲೆರೊ ಬಿಎಸ್‌6 2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಹೊಸ ನಿಯಮಾವಳಿಗಳು ಜಾರಿಯಾಗುವ ಮುನ್ನವೇ ಬಿಎಸ್6 ಎಂಜಿನ್ ಆಧಾರಿತ ಬೊಲೆರೊ ಕಾರುಗಳು ಬಿಡುಗಡೆಯಾಗಲಿದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಕಂಪನಿಯ ಪೋರ್ಟ್‍‍ಫೋಲಿಯೋನಲ್ಲಿ ಬಿಎಸ್6 ಅನುಸರಣೆಗಾಗಿ ಸಿದ್ಧರಾಗಿರುವ ಏಕೈಕ ವಾಹನ ಮಹೀಂದ್ರಾ ಬೊಲೆರೊ ಅಲ್ಲ. ಕಂಪನಿಯು ಪರಿಗಣಿಸಿದ ಹಾಗೆ, ಬಿಎಸ್6 ಸ್ವಿಚ್ ತಯಾರಿಸುವಲ್ಲಿ ಯಾವ ವಾಹನಗಳು ವೆಚ್ಚದ ಲೆಕ್ಕಾಚಾರಕ್ಕೆ ಯೋಗ್ಯವಾಗಿರುತ್ತದೆ ಮತ್ತು ನಿಗದಿತ ಸಮಯದೊಳಗೆ ಅದರ ಸಂಪೂರ್ಣ ವ್ಯಾಪ್ತಿಯಲ್ಲಿ ಮಾಡುತ್ತದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಇದಲ್ಲದೆಯೆ ಮಹೀಂದ್ರಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ಹೊಸ ಸುರಕ್ಷಾ ಸಾಧನಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಬೊಲೆರೊ ಕಾರಿನ ಖರರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಸಹ ಪ್ರಾರಂಭವಾಗಿದ್ದು, ಮಹೀಂದ್ರಾ ಸಂಸ್ಥೆಯ ಅಧಿಕೃತ ವೆಬ್‍ಸೈಟ್ನಲ್ಲಿ ಅಥವಾ ನಿಮ್ಮ ಸಮೀಪದಲ್ಲಿರುವ ಡೀಲರ್‍‍ನ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಹೊಸ ಸುರಕ್ಷಾ ಸಾಧನಗಳು

ಬಿಡುಗಡೆಯಾದ ನವೀಕೃತ ಮಹೀಂದ್ರಾ ಬೊಲೊರೊ ಎಸ್‍ಯುವಿ ಕಾರು ಈ ಬಾರಿ ಎಬಿಎಸ್, ಡ್ರೈವರ್‍‍ಸೈಡ್ ಏರ್‍‍ಬ್ಯಾಗ್, ಓವರ್ ಸ್ಪೀಡಿಂಗ್ ಅಲಾರ್ಮ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಹಾಗು ಡ್ರೈವರ್ ಮತ್ತು ಕೋ ಪ್ಯಾಸೆಂಜರ್‍‍ಗಳಿಗೆ ಸೀಟ್ ಬೆಲ್ಟ್ ವಾರ್ನಿಂಗ್ ಎಂಬ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿದೆ. ಹೊಸ ಸುರಕ್ಷಾ ಸಾಧನಗಳ ನಿಯಮಾವಳಿಗಳ ಅನುಸಾರ ಮಹೀಂದ್ರಾ ಸಂಸ್ಥೆಯು ಮೇಲೆ ನೀಡಲಾಗಿರುವ ಸುರಕ್ಷಾ ಸಾಧನಗಳನ್ನು ನೀಡು ಬಿಡುಗಡೆ ಮಾಡಲಾಗಿದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಎಬಿಎಸ್ ಆಧಾರಿತ ಮಹೀಂದ್ರಾ ಬೊಲೊರೊ ಕಾರು ಈ ಹಿಂದೆಯೆ ಡೀಲರ್‍‍ಗಳಾ ಬಳಿ ಶೋಕೇಸ್ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಸಂಸ್ಥೆಯ ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡುವ ಮೂಲದ ಬಿಡುಗಡೆ ಮಾಡಲಾಗಿದೆ. ಮಹೀಂದ್ರಾ ಸಂಸ್ಥೆಯು ಬಿಡುಗಡೆ ಮಾಡಲಾದ ಅಪ್ಗ್ರೇಡೆಡ್ ಬೊಲೆರೊ ಕಾರಿನ ಬೆಲೆಯನ್ನು ಇನ್ನು ಬಹಿರಂಗವಾಗಿಲ್ಲ. ಆದರೆ ಸಧ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಹೀಂದ್ರಾ ಬೊಲೆರೊ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.56 ಲಕ್ಷದಿಂದ ರೂ. 9.42 ಲಕ್ಷದವರೆಗು ಮಾರಾಟವಾಗುತ್ತಿದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇಷ್ಟೆ ಅಲ್ಲದೆಯೆ ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂದಿನ ತಲೆಮಾದರಿನ ಬೊಲೆರೊ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನಲ್ಲಿ ಕೇಂದ್ರ ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಕೆಲವು ಮಹತ್ಪದ ಬದಲಾವಣೆಗಳನ್ನು ತರಲಾಗುತ್ತಿದೆ. 2020ರ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್ 6 ಕಾಯ್ದೆಯು ಜಾರಿಯಾಗುವ ಮುನ್ನವೇ ಹೊಸ ಕಾರುಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನಲ್ಲಿ ಗುಣಮಟ್ಟದ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಎಂಜಿನ್ ಸಾಮರ್ಥ್ಯ

ಬೊಲೆರೊ ಕಾರುಗಳು ಎರಡು ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 2.5-ಲೀಟರ್ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಬೊಲೆರೊ ಪವರ್ ಪ್ಲಸ್ ಮಾದರಿಯು 1.5-ಲೀಟರ್ ಎಂಹ್ವಾಕ್‌ಡಿ70 ಡೀಸೆಲ್ ಎಂಜಿನ್ ಮಾದರಿಯು 71-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಕಳೆದ 19 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬೊಲೆರೊ ಕಾರುಗಳು ಅಂದಿನಿಂದ ಈ ವರೆಗೂ ಒಂದೇ ಪ್ರಮಾಣದಲ್ಲಿ ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ ಹುಟ್ಟುಹಾಕಿತ್ತು.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಅಗಸ್ಟ್ 10, 2000ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಹೊಂದುತ್ತಲೇ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಬೊಲೆರೊ ಕಾರುಗಳು ಇಲ್ಲಿಯವರೆಗು ಸುಮಾರು 10 ಲಕ್ಷಕ್ಕು ಯುನಿಟ್‌ಗಳು ಮಾರಾಟಗೊಂಡಿದ್ದು, ಎಸ್‌ಯುವಿ ಕಾರುಗಳ ವಿಭಾಗದಲ್ಲಿನ ಬೊಲೆರೊ ಜನಪ್ರಿಯತೆಗೆ ಮತ್ತೊಂದು ಹೆಗ್ಗಳಿಕೆ ಎನ್ನಬಹುದು.

ಬಿಎಸ್-6 ಪ್ರಮಾಣೀಕರಣವನ್ನು ಪಡೆದ ಮಹೀಂದ್ರಾ ಬೊಲೆರೊ

ಇನ್ನು ಜಾರಿಯಾಗಲಿರುವ ಬಿಎಸ್ 6 ನಿಯಮದಿಂದಾಗಿ ಎಂಜಿನ್ ವಿಭಾಗದಲ್ಲೂ ಹೆಚ್ಚಿನ ಬದಲಾವಣೆಗಳಾಗಲಿದ್ದು, ಬಿಎಸ್ 6 ಎಂಜಿನ್‌ನಿಂದಾಗಿ ಹೊಗೆ ಉಗುಳುವ ಪ್ರಮಾಣವು ತಗ್ಗುವ ಮೂಲಕ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ. ಈಗಾಗಲೇ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮಕ್ಕೆ ಸರಿಸಮನಾದ ಕೆಲವು ಹೊಸ ಕಾಯ್ದೆಗಳನ್ನು ಜಾರಿಗೊಳಿಸಿದ್ದು, 2017ರಲ್ಲೇ ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಾಗಿರುವ ಯುರೋ 6 ನಿಯಮದಿಂದಾಗಿ ವಾಹನಗಳು ಹೊರಸೂಸುವ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

Most Read Articles

Kannada
English summary
Mahindra Bolero Is Now Ready With BS6 Recieves ICAT Certificartion. Read In Kannada
Story first published: Friday, July 26, 2019, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X