ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ 2019ರ ಬೊಲೆರೊ ಪವರ್ ಪ್ಲಸ್ ದೀಪಾವಳಿ ಹಬ್ಬಕ್ಕಾಗಿ ವಿಶೇಷ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ 2019ರ ಮಹೀಂದ್ರಾ ಬೊಲೆರೊ ಪವರ್ ಪ್ಲಸ್ ವಿಶೇಷ ಆವೃತ್ತಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.68 ಲಕ್ಷವಾಗಿದೆ.

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದಾ ಬೊಲೆರೊ ದೀಪಾವಳಿ ಆವೃತ್ತಿಯು ಕಾಸ್ಮೆಟಿಕ್ ನವೀಕರಣಗಳು ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸಿದೆ. ಆದರೆ ಹೊಸ ಬೊಲೆರೊ ಯಾವುದೇ ಮ್ಯಾಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ.

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೊ ಪವರ್ ಪ್ಲಸ್ ದೀಪಾವಳಿ ಹಬ್ಬಕ್ಕೆ ವಿಶೇಷ ಆವೃತ್ತಿಯ ಕಾಸ್ಮೆಟಿಕ್ ಬದಲಾವಣೆಯನ್ನು ಮಾಡಿದ್ದಾರೆ. ಪ್ರಮುಖ ಬದಲಾವಣೆಗಳು ಅಂದರೆ ವಿಶೇಷ ಡೆಕಲ್ಸ್, ಸೀಟ್ ಕವರ್, ಕಾರ್ಪೆಟ್ ಮ್ಯಾಟ್ ಸ್ಕಫ್ ಪ್ಲೇಟ್‍‍ಗಳು, ಫ್ರಂಟ್ ಬಂಪರ್‍‍ನಲ್ಲಿ ಫಾಗ್ ಲ್ಯಾಂಪ್‍‍ಗಳು, ಸ್ಟಾಪ್ ಲ್ಯಾಂಪ್‍‍ನೊಂದಿಗೆ ಸ್ಪಾಯ್ಲರ್ ಮತ್ತು ಸ್ಟೀರಿಂಗ್ ಕವರ್ ಅನ್ನು ಅಳವಡಿಸಿದ್ದಾರೆ.

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಬೊಲೆರೊ ಪವರ್ ಪ್ಲಸ್‍‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಹೊಸ ಸುರಕ್ಷತಾ ಉಪಕರಣಗಳನ್ನು ಅಳವಡಿಸಿದ್ದಾರೆ. ಹೊಸ ಸುರಕ್ಷತಾ ಮಾನದಂಡಕ್ಕೆ ಹೊಸ ಬೊಲೆರೊ ಪವರ್ ಪ್ಲಸ್ ಅನುಗುಣವಾಗಿದೆ. ಬೊಲೆರೊ ದೇಶೀಯ ಮಾರಕಟ್ಟೆಯ ತನ್ನದೆ ಆದ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿದೆ.

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

2019ರ ಮಹೀಂದ್ರಾ ಬೊಲೆರೊ ಪವರ್ ಪ್ಲಸ್‍‍ನಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍‍ಗಳು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎ‍‍ಬಿಎಸ್) ಅನ್ನು ಅಳವಡಿಸಿದ್ದಾರೆ. ಸುರಕ್ಷತೆಯ ಜೊತೆ ಕಾಸ್ಮೆಟಿಕ್ ಬದಲಾವಣೆಯಿಂದ ಬೊಲೆರೊ ಪವರ್ ಪ್ಲಸ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಬೊಲೆರೊ ಎಸ್‍‍ಯು‍ವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಗಳಲ್ಲಿ ಒಂದಾಗಿದೆ. ಬೊಲೆರೊ ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೊ ಪವರ್ ಪ್ಲಸ್ 1.5 ಲೀಟರ್ ಎಮ್ಹಾಕ್ ಡಿ 70 ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 3600 ಆರ್‍‍ಪಿಎಂನಲ್ಲಿ 70 ಬಿಎಚ್‍ಪಿ ಮತ್ತು 1400-2200 ಆರ್‍‍ಪಿಎಂನಲ್ಲಿ 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍ನ್‍‍ನೊಂದಿಗೆ ಸ್ಟ್ಯಾಡಂರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ದೇಶಿಯ ಮಾರುಕಟ್ಟೆಗಾಗಿ ಹೊಸ ಆವೃತ್ತಿಯ ಬೊಲೆರೊವನ್ನು ಉತ್ಪಾದಿಸುತ್ತಿದೆ. ಹೊಸ ಬೊಲೆರೊ ಮುಂದಿನ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ಬೊಲೆರೊ ಕಾಸ್ಮೆಟಿಕ್ ಬದಲಾವಣೆ ಜೊತೆ ಹೊಸ ವೈಶಿಷ್ಟ್ಯಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕೇಂದ್ರ ಸರ್ಕಾರವು ಜಾರಿಗೆ ತರಲಿರುವ ಬಿಎಸ್-6 ಮಾಲಿನ ನಿಯಮಕ್ಕೆ ತಕ್ಕಂತೆ ಇದರ ಎಂಜಿನ್ ಹೊಂದಿರಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದೀಪಾವಳಿಗಾಗಿ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೊಳಿಸಿದ ಮಹೀಂದ್ರಾ

ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಬೊಲೆರೊ ಪವರ್ ಪ್ಲಸ್ ಬಹುನಿರೀಕ್ಷಿತ ಎಸ್‍‍ಯು‍ವಿಯಾಗಿತ್ತು. ಹಬ್ಬದ ವೇಳೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಬೊಲೆರೊ ಪವರ್ ಪ್ಲಸ್ ದೀಪಾವಳಿ ಹಬ್ಬಕ್ಕಾಗಿ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದಾರೆ. ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಿಗೆ ದೀಪಾವಳಿ ಉಡುಗೊರೆ ರೀತಿಯಲ್ಲಿ ಹೊಸ ಬೊಲೆರೊ ಪವರ್ ಪ್ಲಸ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದಾರೆ.

Most Read Articles

Kannada
English summary
Mahindra Bolero Power Plus Special Edition Launched In India: Priced At Rs 7.68 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X