ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಮಹೀಂದ್ರಾ ನಿರ್ಮಾಣದ ಜನಪ್ರಿಯ ಎಸ್‌ಯುವಿ ಮಾದರಿಯಾದ ಬೊಲೆರೊ ಕಾರು ಗ್ರಾಹಕರ ಆಯ್ಕೆಯಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್ ಸೇರಿದಂತೆ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ರಸ್ತೆಗಿಳಿಯಲು ಸಜ್ಜಾಗುತ್ತಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಹೌದು, 2019ರ ಮಹೀಂದ್ರಾ ಬೊಲೆರೊ ಮಾದರಿಯು ಮುಂದಿನ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನಲ್ಲಿ ಕೇಂದ್ರ ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಕೆಲವು ಮಹತ್ಪದ ಬದಲಾವಣೆಗಳನ್ನು ತರಲಾಗುತ್ತಿದೆ. 2020ರ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್ 6 ಕಾಯ್ದೆಯು ಜಾರಿಯಾಗುವ ಮುನ್ನವೇ ಹೊಸ ಕಾರುಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಕಾರುಗಳಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡುತ್ತಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಆಟೊಮೊಬೈಲ್ ವಿಭಾಗದ ಅಧ್ಯಕ್ಷ ಪವನ್ ಗೋಯಂಕಾ ಅವರು, ದೇಶಿಯ ಮಾರುಕಟ್ಟೆಯಲ್ಲಿ 19 ವರ್ಷಗಳಿಂದಲೂ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಬೊಲೆರೊ ಮಾದರಿಯು ಮುಂಬರುವ ದಿನಗಳಲ್ಲಿ ಹಲವು ಹೊಸತನಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ ಎಂದಿದ್ದಾರೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಕಾರಿನ ವಿನ್ಯಾಸಕ್ಕೂ ಮತ್ತು ಹೊಸ ಬೊಲೆರೊ ಕಾರಿನ ವಿನ್ಯಾಸಕ್ಕೂ ತುಸು ಬದಲಾವಣೆಗಳಾಗಲಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಿಯಮಕ್ಕೆ ಅನುಗುಣವಾಗಿ ಮುಂಭಾಗದ ವಿನ್ಯಾಸಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಇನ್ನು ಜಾರಿಯಾಗಲಿರುವ ಬಿಎಸ್ 6 ನಿಯಮದಿಂದಾಗಿ ಎಂಜಿನ್ ವಿಭಾಗದಲ್ಲೂ ಹೆಚ್ಚಿನ ಬದಲಾವಣೆಗಳಾಗಲಿದ್ದು, ಬಿಎಸ್ 6 ಎಂಜಿನ್‌ನಿಂದಾಗಿ ಹೊಗೆ ಉಗುಳುವ ಪ್ರಮಾಣವು ತಗ್ಗುವ ಮೂಲಕ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಈಗಾಗಲೇ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮಕ್ಕೆ ಸರಿಸಮನಾದ ಕೆಲವು ಹೊಸ ಕಾಯ್ದೆಗಳನ್ನು ಜಾರಿಗೊಳಿಸಿದ್ದು, 2017ರಲ್ಲೇ ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಾಗಿರುವ ಯುರೋ 6 ನಿಯಮದಿಂದಾಗಿ ವಾಹನಗಳು ಹೊರಸೂಸುವ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಸಹ ಬಿಎಸ್ 4 ನಂತರ ಬಿಎಸ್ 6 ವಾಹನಗಳನ್ನ ಕಡ್ಡಾಯಗೊಳಿಸುತ್ತಿದ್ದು, ಹೊಸ ನಿಯಮದ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ವಾಹನಗಳು ಹೆಚ್ಚಿನ ಮಟ್ಟದ ಸುರಕ್ಷೆ ಮತ್ತು ಗುಣಮಟ್ಟದ ಎಂಜಿನ್ ಒದಗಿಸಬೇಕಾಗುತ್ತೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಮಹೀಂದ್ರಾ ಸಹ ಇದೇ ನಿಟ್ಟಿನಲ್ಲಿ ಹೊಸ ನಿಯಮಕ್ಕೆ ಅನುಗುಣವಾಗಿ ಬೊಲೆರೊ ಸೇರಿದಂತೆ ತನ್ನ ಎಲ್ಲ ಪ್ರಮುಖ ಕಾರುಗಳನ್ನು ಉನ್ನತಿಕರಣ ಮಾಡುತ್ತಿದ್ದು, ಹೊಸ ಬೊಲೆರೊ ಕಾರಿನಲ್ಲಿ ಈ ಬಾರಿ ಎಬಿಎಸ್, ಇಬಿಡಿ, ಡ್ಯುಯಲ್ ಏರ್‌ಬ್ಯಾಗ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಅಲರ್ಟ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದೆ.

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಎಂಜಿನ್ ಸಾಮರ್ಥ್ಯ

ಬೊಲೆರೊ ಕಾರುಗಳು ಎರಡು ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 2.5-ಲೀಟರ್ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಬೊಲೆರೊ ಪವರ್ ಪ್ಲಸ್ ಮಾದರಿಯು 1.5-ಲೀಟರ್ ಎಂಹ್ವಾಕ್‌ಡಿ70 ಡೀಸೆಲ್ ಎಂಜಿನ್ ಮಾದರಿಯು 71-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

MOST READ: ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಬಿಎಸ್ 6 ಎಂಜಿನ್ ಜೊತೆ ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ ಬೊಲೆರೊ ನ್ಯೂ ವರ್ಷನ್

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಸ ಬಿಎಸ್ 6 ಎಂಜಿನ್‌ನಿಂದಾಗಿ ಹೊಗೆಯ ಪ್ರಮಾಣ ಕಡಿಮೆಯಾಗುವುದಲ್ಲದೇ ಮೈಲೇಜ್ ಪ್ರಮಾಣದಲ್ಲಿ ಗ್ರಾಹಕರಿಗೆ ವರದಾನವಾಗಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯ ಎಂಜಿನ್‌ನಿಂದಾಗಿ ಕಾರುಗಳ ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿವೆ.

Most Read Articles

Kannada
English summary
Mahindra Bolero To Be Updated Soon — Will Comply With Upcoming BS-VI And Safety Norms. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X