ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಎಸ್‌ಯುವಿ ಕಾರುಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿರುವುದರಿಂದ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ವಿನೂತನ ಮಾದರಿಯ ಹೊಸ ಎಸ್‌ಯುವಿ ಕಾರುಗಳ ಅಭಿವೃದ್ಧಿಗೆ ಮುಂದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾದಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಕೂಡಾ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಲು ಮುಂದಾಗಿವೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಹೌದು, ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿವೆ. ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಜೊತೆಯಾಗಲಿದ್ದು, ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿವೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿದೆ ಪ್ರಮುಖ ಪ್ರೇರಣೆಯಾಗಿದೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಜೊತೆಗೆ ಮಹೀಂದ್ರಾ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳಿಗೆ ಎಂಜಿನ್ ಮತ್ತು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಪರಸ್ಪರ ಸಹಕರಿಸಲು ನಿರ್ಧರಿಸಿದ್ದು, ಈ ಯೋಜನೆಯ ಭಾಗವಾಗಿ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿವೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಯು ತನ್ನ ಮೊದಲ ಜಂಟಿ ಕಾರು ಆವೃತ್ತಿಯನ್ನು 2020ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ಒಂಬತ್ತು ವಿವಿಧ ನಮೂನೆಯ ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆಯೆಂತೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಫೋರ್ಡ್ ಹೊಸ ಎಸ್‌ಯುವಿ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5 ಸೀಟರ್ ಮತ್ತು 7 ಸೀಟರ್ ಮಾದರಿಯಲ್ಲಿ ಅಭಿವೃದ್ದಿಗೊಳ್ಳಲಿದ್ದು, ಬಿಎಸ್-6 ಪ್ರೇರಣೆಯ 1.5-ಲೀಟರ್ ಮತ್ತು 2.0-ಲೀಟರ್ ಟರ್ಬೋಚಾಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿವೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

2.0-ಲೀಟರ್ ಟರ್ಬೋಚಾಜ್ಡ್ ಎಂಜಿನ್ ಅನ್ನು 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ500 ಮಾದರಿಯಲ್ಲೂ ಬಳಕೆ ಮಾಡಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು ತದನಂತರವಷ್ಟೇ ಫೋರ್ಡ್ ಹೊಸ ಎಸ್‌ಯುವಿ ಕಾರುಗಳಲ್ಲೂ ಜೋಡಣೆ ಮಾಡಿ ಬಿಡುಗಡೆಗೊಳಿಸಲಿದೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಇನ್ನು ಸದ್ಯದ ಮಾರುಕಟ್ಟೆಯ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವದಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಹೊಸ ಯೋಜನೆಯಿಂದ ಮಹೀಂದ್ರಾ ಸಂಸ್ಥೆಗೂ ಇದರಿಂದ ಸಾಕಷ್ಟು ಅನುಕೂಲಕತೆಗಳಿದ್ದು, ಕಾರು ಉತ್ಪಾದನೆಯಿಲ್ಲದೇ ಆರ್ಥಿಕ ಹೊರೆ ಅನುಭವಿಸುತ್ತಿರುವ ಫೋರ್ಡ್ ಮಾಲೀಕತ್ವದ ಗುಜರಾತಿನ ಸನಂದಾ ಮತ್ತು ಚೆನ್ನೈ ಘಟಕಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮಹೀಂದ್ರಾ ಸಂಸ್ಥೆಗೆ ಸಾಕಷ್ಟು ಸಹಕಾರಿಯಾಗಲಿದೆ.

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಜೊತೆಗೆ ಉತ್ತರ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮಹೀಂದ್ರಾ ಸಂಸ್ಥೆಗೂ ಈ ಹೊಸ ಯೋಜನೆ ಸಹಕಾರಿಯಾಗಲಿದ್ದು, ಈ ಮೂಲಕ ಗ್ರಾಹಕರ ಬೇಡಿಕೆ ಕಳೆದುಕೊಳ್ಳುತ್ತಿರುವ ಫೋರ್ಡ್ ಕಾರುಗಳಿಗೆ ಮಹೀಂದ್ರಾದಿಂದಲೂ ಮತ್ತಷ್ಟು ಉತ್ತೇಜನ ಸಿಗಲಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ರಸ್ತೆಗಿಳಿಯಲಿವೆ ಫೋರ್ಡ್-ಮಹೀಂದ್ರಾ ನಿರ್ಮಾಣದ ಒಂಬತ್ತು ಹೊಸ ಎಸ್‌ಯುವಿ ಕಾರುಗಳು

ಇದೇ ಕಾರಣಕ್ಕೆ ಸಹಭಾಗಿತ್ವ ಯೋಜನೆಗಾಗಿ ಎರಡು ಸಂಸ್ಥೆಗಳು ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಯೋಜನೆ ಅಡಿ ನಿರ್ಮಾಣವಾಗುವ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಹೆಸರಿನೊಂದಿಗೆ ಮತ್ತು ವಿದೇಶಿ ಮಾರುಕಟ್ಟೆಗೆ ರಫ್ತುಗೊಳ್ಳುವ ಕಾರುಗಳಿಗೆ ಫೋರ್ಡ್ ಬ್ಯಾಡ್ಜ್ ಬಳಕೆಯೊಂದಿಗೆ ಮಾರಾಟಗೊಳ್ಳಲಿವೆ.

Source: Financial Express

Most Read Articles

Kannada
English summary
Ford and Mahindra to jointly develop 9 new SUVs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X