ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದ್ರಾ ತನ್ನ ಮಿನಿ ಟ್ರಕ್ ಸರಣಿಯ ಜೀಟೊ ಪ್ಲಸ್ ರೂಪಾಂತರವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ಜೀಟೊ ಪ್ಲಸ್ ಮಿನಿ ಪಿಕ್‍ಅಪ್ ಟ್ರಕ್‍ಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.46ಗಳಾಗಿದೆ.

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಹೊಸ ಮಹೀಂದ್ರಾ ಜೀಟೊ ಪ್ಲಸ್ ರೂಪಾಂತರವು 7.8 ಅಡಿ ಉದ್ದದ ಡೆಕ್ ಅನ್ನು ಹೊಂದಿದೆ. ಹೆಚ್ಚಿನ ಪೇಲೋಡ್ ಸಾಗಿಸುವ ಸಾಮಥ್ಯ 715 ಕೆ.ಜಿ ಹೊಂದಿದೆ. ಮಹೀಂದ್ರಾ 3 ವರ್ಷಗಳ ಅಥವಾ 72,000 ಕಿ.ಮೀ ವಾರಂಟಿಯೊಂದಿಗೆ ಜೀಟೊ ಪ್ಲಸ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಜೀಟೋ ಪ್ಲಸ್ ಮಿನಿ ಪಿಕಪ್ ಟ್ರಕ್‍ ಹಲವಾರು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್‍‍ನ ಬ್ಯುಸಿನೆಸ್ ಹೆಡ್, ಸತೀಂದರ್ ಸಿಂಗ್ ಬಜ್ವಾ ಮಾತನಾಡಿ, ಜೀಟೊ ಪ್ಲಸ್ ಬಿಡುಗಡೆಯೊಂದಿಗೆ ಮಹೀಂದ್ರಾ ತನ್ನ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ಮಿನಿ ಟ್ರಕ್‍‍ಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಈ ಮಿನಿ ಟ್ರಕ್ ಕಾರಿನಂತಹ ಸೌಕರ್ಯ ಮತ್ತು ಹೆಚ್ಚಿನ ಸುರಕ್ಷತೆಯನ್ನು ನೀಡಿರುವುದರಿಂದ ಜೀಟೊ ಮಿನಿ ಟ್ರಕ್ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಜೀಟೊ ಪ್ಲಸ್ ಇತರ ಮಿನಿ ಪಿಕಪ್ ಟ್ರಕ್‍‍ಗಳಿಗೆ ಹೆಚ್ಚಿನ ಪೈಪೋಟಿಯನ್ನು ನೀಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ತನ್ನದೆ ಆದ ಗುರುತಿಸುವಿಕೆಯನ್ನು ಹೊಂದಲಿದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದ್ರಾ ಜೀಟೊ ಪ್ಲಸ್ ಸಿಂಗಲ್ ಸಿಲಿಂಡರ್ 625 ಸಿಸಿ ವಾಟರ್ ಕೂಲ್ಡ್ ಎಂಡ್ಯುರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 16 ಬಿ‍‍ಹೆಚ್‍‍ಪಿ ಪವರ್ ಮತ್ತು 38 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಹೀಂದ್ರಾ ಜೀಟೋ ಪ್ಲಸ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಮಿನಿ ಪಿಕಪ್ ಟ್ರಕ್ 715 ಕೆ‍ಜಿ ಪೇಲೋಡ್ ಅನ್ನು ಹೊರತು ಪಡಿಸಿ 1445 ಕೆಜಿ ತೂಕವನ್ನು ಹೊಂದಿದೆ.

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಹೊಸ ಜೀಟೊ ಪ್ಲಸ್ ರೂಪಾಂತರವು ಸ್ಟ್ಯಾಂಡರ್ಡ್ ಆವೃತ್ತಿಗಿಂತ ಶೇ.30 ರಷ್ಟು ಹೆಚ್ಚು ಇಂಧನ ಸಮರ್ಥ್ಯವನ್ನು ಹೊಂದಿದೆ. ಇದರರ್ಥ ಮಹೀಂದ್ರಾ ಜೀಟೊ ಪ್ಲಸ್ ತನ್ನ 10.5 ಲೀಟರ್ ಇಂಧನ ಟ್ಯಾಂಕ್‍ ಅನ್ನು ಹೊಂದಿದ್ದು, ಇದು 29.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದಾ ಜೀಟೊದಲ್ಲಿನ ಸರಕು ಪೆಟ್ಟಿಗೆಯ ಉದ್ದ 7.4 ಅಡಿ(2257 ಎಂಎಂ), 4.9 ಅಡಿ ಅಗಲ(1493 ಎಂಎಂ) ಮತ್ತು 1 ಅಡಿ ಎತ್ತರ(300 ಎಂಎಂ) ಅನ್ನು ಹೊಂದಿದೆ. ಮಹೀಂದ್ರಾ ಜೀಟೊ ಚಾಲಕ ಸೇರಿದಂತೆ ಇಬ್ಬರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದ್ರಾ ಜೀಟೊ ಸಬ್-ಟನ್ ಸಿವಿ ವಿಭಾಗದ ಮೊದಲ ವಾಹನವಾಗಿದೆ. ಇದನ್ನು ಮೊದಲ ಬಾರಿಗೆ 2015ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಮಹೀಂದ್ರಾ ಈಗ ಅದೇ ವಿಭಾಗದಲ್ಲಿ 8 ಮಿನಿ ಟ್ರಕ್‍‍ಗಳನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಯಾಯ್ತು ಮಹೀಂದ್ರಾ ಮಿನಿ ಜೀಟೊ ಪಿಕ್‍ಅಪ್ ಟ್ರಕ್

ಮಹೀಂದ್ರಾ ತನ್ನ ಮಿನಿ ಟ್ರಕ್ ಸರಣಿಯ ಜೀಟೊ ಪ್ಲಸ್ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಿನಿ ಟ್ರಕ್‍ ಸೆಗ್‍‍ಮೆಂಟ್‍‍ನಲ್ಲಿ ಪಾರುಪತ್ಯ ಸಾಧಿಸುವ ಮಹೀಂದ್ರಾ ಕಂಪನಿಯು ಹೊಸ ಮತ್ತೊಂದು ಮಾದರಿಯನ್ನು ಪರಿಚಯಿಸಿದೆ.

Most Read Articles

Kannada
English summary
Mahindra Jeeto Plus Launched In India: Priced At Rs 3.46 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X