ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮರಾಜೋ ಕಾರಿನಲ್ಲಿ ಮಾಡಿಫೈ ಮಾಡಲಾದ ಡಿಸಿ ಡಿಸೈನ್ ಐಷಾರಾಮಿ ಆವೃತ್ತಿಯ ಮಾರಾಟಕ್ಕೆ ಮಹೀಂದ್ರಾ ಸಂಸ್ಥೆಯೇ ಅಧಿಕೃತವಾಗಿ ಚಾಲನೆ ನೀಡಿದ್ದು, ಆಸಕ್ತ ಗ್ರಾಹಕರು ಇದೀಗ ನೇರವಾಗಿ ಮಹೀಂದ್ರಾ ಡೀಲರ್ಸ್‌ಗಳಲ್ಲೇ ಮಾಡಿಫೈ ವಿನ್ಯಾಸಕ್ಕಾಗಿ ಸಂಪರ್ಕಿಸಬಹುದಾಗಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಕಾರುಗಳ ಒಳಾಂಗಣ ವಿನ್ಯಾಸವನ್ನು ಗ್ರಾಹಕರ ಆದ್ಯತೆ ಮೇರೆಗೆ ವಿನೂತನ ಮಾದರಿಯಲ್ಲಿ ಮಾಡಿಫೈ ಮಾಡುವ ಡಿಸಿ ಡಿಸೈನ್ ಸಂಸ್ಥೆಯು ಸಾಮಾನ್ಯ ಕಾರುಗಳನ್ನು ಸಹ ಐಷಾರಾಮಿ ಕಾರಗಳ ಮಾದರಿಯಲ್ಲೇ ಬದಲಿಸುವುದರಲ್ಲಿ ಜನಪ್ರಿಯವಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯ ಮರಾಜೋ ಕಾರಿನಲ್ಲೂ ಸಹ ಗ್ರಾಹಕರ ಬೇಡಿಕೆಯೆಂತೆ ಅತ್ಯುತ್ತಮ ಮಾಡಿಫೈ ಡಿಸೈನ್‌ಗಳನ್ನು ಒದಗಿಸಿತ್ತು. ಇದೀಗ ಮಹೀಂದ್ರಾ ಸಂಸ್ಥೆಯು ಡಿಸಿ ಡಿಸೈನ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಮಾಡಿಫೈ ವಿನ್ಯಾಸಗಳನ್ನು ಅಧಿಕೃತವಾಗಿಯೇ ಆರಂಭಿಸಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಇದರಿಂದ ಡಿಸಿ ಡಿಸೈನ್ ಮಾಡಿಫೈ ವಿನ್ಯಾಸವು ಇನ್ಮುಂದೆ ಮಹೀಂದ್ರಾ ಸಂಸ್ಥೆಯೇ ಆಸಕ್ತ ಗ್ರಾಹಕರಿಗೆ ಒದಗಿಸಲಿದ್ದು, ನೇರವಾಗಿ ಡಿಸಿ ಡಿಸೈನ್ ಸಂಪರ್ಕಿಸಿ ಮಾಡಿಫೈ ಮಾಡಿಸಿದ್ದಲ್ಲಿ ಆಗುತ್ತಿದ್ದ ಅಧಿಕ ವೆಚ್ಚವು ಇದೀಗ ಮಹೀಂದ್ರಾ ಮೂಲಕ ಮಾಡಿಫೈ ಸೇವೆ ಪಡೆದಲ್ಲಿ ರಿಯಾಯ್ತಿ ದರದಲ್ಲಿ ಸೇವೆ ದೊರೆಯಲಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಸದ್ಯ ಎಂಪಿವಿ ಕಾರುಗಳಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಟಕ್ಕರ್ ನೀಡುತ್ತಿರುವ ಮಾರಾಜೋ ಕಾರು ಮಧ್ಯಮ ವರ್ಗದ ಎಂಪಿವಿ ಕಾರು ಖರೀದಿದಾರರ ಪಟ್ಟಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಡಿಸಿ ಡಿಸೈನ್ ಸಂಸ್ಥೆಯು ಪರಿಚಯಿಸಿರುವ ಮಾಡಿಫೈ ಹೊಸ ವಿನ್ಯಾಸವು ಐಷಾರಾಮಿ ಲುಕ್ ನೀಡುತ್ತಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮುಂಬೈ ಮೂಲದ ಜನಪ್ರಿಯ ಮಾಡಿಫೈ ಸಂಸ್ಥೆಯಾದ ಡಿಸಿ ಡಿಸೈನ್ ಸಂಸ್ಥೆಯು ತನ್ನ ವಿನೂತನ ವಿನ್ಯಾಸ ತಂತ್ರಜ್ಞಾನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳತ್ತಿದ್ದು, ಮಾರುಕಟ್ಟೆಗೆ ಪ್ರವೇಶಿಸುವ ಬಹುತೇಕ ಹೊಸ ಕಾರುಗಳಲ್ಲಿ ತನ್ನದೆ ವಿಶಿಷ್ಟ್ಯ ಶೈಲಿಯ ಮಾಡಿಫೈ ವಿನ್ಯಾಸವನ್ನು ಪರಿಚಯಿಸುವ ಮೂಲಕ ಮಾಡಿಫೈ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಈಗಾಗಲೇ ಸಾವಿರಾರು ವಾಹನಗಳನ್ನು ವಿಶೇಷ ಡಿಸೈನ್‌ನೊಂದಿಗೆ ಮಾಡಿಫೈ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಡಿಸಿ ಡಿಸೈನ್ ಸಂಸ್ಥೆಯು ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಮಹೀಂದ್ರಾ ಮರಾಜೋ ಕಾರಿಗೂ ಹೊಸ ಮಾಡಿಫೈ ಡಿಸೈನ್ ಒಂದನ್ನು ಪರಿಚಯಿಸಿತ್ತು.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮಾಡಿಫೈಗೊಂಡಿರುವ ಡಿಸಿ ಡಿಸೈನ್ ಮರಾಜೋ ಕಾರು ಮೂಲ ಕಾರಿಗಿಂತಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಕೋಟಿಗೂ ಅಧಿಕ ಬೆಲೆಯ ಐಷಾರಾಮಿ ಕಾರಗಳನ್ನು ಹಿಂದಿಕ್ಕುವ ರೀತಿಯಲ್ಲಿ ಸಿದ್ದಗೊಂಡಿತ್ತು. ಇದಕ್ಕೆ ಕಾರಣ, ಡಿಸಿ ಡಿಸೈನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರೇ ವಿಶೇಷ ಆಸಕ್ತಿ ವಹಿಸಿ ಮಾರಾಜೋ ಕಾರಿಗೆ ಹೊಸ ವಿನ್ಯಾಸದ ಡಿಸೈನ್ ಸಿದ್ದಪಡಿಸಿದ್ದರು.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ದಿಲೀಪ್ ಅವರ ಪ್ರಕಾರ, ವಿನೂತನ ಮಾಡಿಫೈ ವಿನ್ಯಾಸ ಹೊಂದಿರುವ ಮಾರಾಜೋ ಕಾರನ್ನು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಆಡಿ ಎ8 ವಿನ್ಯಾಸಕ್ಕೆ ಹೋಲಿಕೆ ಮಾಡಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಗರಿಷ್ಠ ಮಟ್ಟದ ಮಾಡಿಫೈ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಮಹೀಂದ್ರಾ ಕೂಡಾ ಮೆಚ್ಚಗೆ ವ್ಯಕ್ತಪಡಿಸಿ ಡಿಸಿ ಡಿಸೈನ್ ಮಾಡಿಫೈ ವಿನ್ಯಾಸವನ್ನು ಅಧಿಕೃತವಾಗಿಯೇ ಆರಂಭಿಸಿದೆ.

MOST READ: ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮಾಡಿಫೈ ಮಾರಾಜೋ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿರುವ ಡಿಸಿ ಸಂಸ್ಥೆಯು ಲೆದರ್ ಸೀಟುಗಳೊಂದಿಗೆ ಕ್ರೊಮ್, ವುಡನ್ ಇಂಟಿರಿಯರ್ ಫಿನಿಷಿಂಗ್, ಪ್ರತಿ ಸೀಟುಗಳಲ್ಲೂ ಟಚ್ ಸ್ಕ್ರೀನ್ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಸೀಟುಗಳಲ್ಲೇ ಕತ್ತರಿಸಿದ ಮಾದರಿಯಲ್ಲಿ ಸಿದ್ದಪಡಿಸಲಾಗಿರುವ ಫುಟ್ ರೆಸ್ಟ್, 7-ಸೀಟರ್ ಸಾಮರ್ಥ್ಯದ ರೆಫ್ರಿಜೇಟರ್ ಸೇರಿದಂತೆ ಬೆರಳತುದಿಯಲ್ಲೇ ಕಾರಿನ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಬಟನ್ ಸೌಲಭ್ಯಗಳನ್ನು ನೀಡಲಾಗಿದೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಈ ಮೂಲಕ ಐಷಾರಾಮಿ ಕಾರು ಪ್ರಯಾಣಕ್ಕೆ ಬೇಕಾದ ಹಲವಾರು ಸೌಲಭ್ಯಗಳನ್ನು ಒಂದೇ ಸೂರಿನಡಿ ನೀಡಿರುವ ಡಿಸಿ ಸಂಸ್ಥೆಯು ಮಾಡಿಫೈಗೆ ಅನುಕೂರವಾಗುವ ಮಾದರಿಯಲ್ಲಿ ಕಾರು ಸಿದ್ದಪಡಿಸಿದ ಮಹೀಂದ್ರಾ ಸಂಸ್ಥೆಗೂ ಧನ್ಯವಾದ ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನ್ಯಾಸಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮಾಡಿಫೈ ಕಾರಿನ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಮಾರಾಜೋ ಕಾರು ಮಾದರಿಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.11.50 ಲಕ್ಷ ಆರಂಭಿಕವಾಗಿ ಮತ್ತು ಟಾಪ್ ಎಂಡ್ ಮಾದರಿಗೆ ರೂ.17.06 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಡಿಸಿ ಡಿಸೈನ್ ಸಂಸ್ಥೆಯು ಮಾಡಿಫೈ ಮಾಡಲಾದ ಕಾರನ್ನು ರೂ.20 ಲಕ್ಷದಿಂದ ರೂ.25 ಲಕ್ಷ ಬೆಲೆಗಳಿಗೆ ಮಾರಾಟಮಾಡುತ್ತಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಮಾಡಿಫೈ ಕೇಂದ್ರಗಳ ಮೂಲಕ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಮಾರಾಜೋ ಮಾಡಿಫೈ ಕಾರನ್ನು ಮಾರಾಟ ಮಾಡುತ್ತಿದ್ದು, ಬೇಡಿಕೆ ಸಲ್ಲಿಸಿದ ಒಂದು ವಾರದಲ್ಲಿ ಹೊಸ ಮಾಡಿಫೈ ಕಾರನ್ನು ಸಿದ್ದಪಡಿಸಲಿದೆ.

ಡಿಸಿ ಡಿಸೈನ್ ಪ್ರೇರಿತ ಮರಾಜೋ ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಮಾರಾಜೋ ಕಾರು ಇನೋವಾ ಕ್ರಿಸ್ಟಾಗೂ ಪ್ರತಿಸ್ಪರ್ಧಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಪೆಟ್ರೋಲ್ ಆವೃತ್ತಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿವೆ.

Most Read Articles

Kannada
English summary
Mahindra Marazzo Official Website Now Accepts Enquiries For A DC-Designed Cabin. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X