ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ದಿನಂಪ್ರತಿ ರಸ್ತೆಯಲ್ಲಿ ಅಪಘಾತಗಳನ್ನು ಕಾಣುತ್ತಿದ್ದೇವೆ ಮತ್ತು ಆ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇಲ್ಲವಾದ ಕಾರಣ ಪ್ರಯಾಣಿಕರು ಸ್ಥಳದಲ್ಲಿಯೆ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಸಹ ನಾವು ಕಂಡಿದ್ದೆವೆ. ಇದರಿಂದಾಗಿ ಎಚ್ಚೆತ್ತುಕೊಂಡ ಕೆಂದ್ರ ಸರ್ಕಾರವು ಹೊಸದಾಗಿ ಬಿಡುಗಡೆಗೊಳ್ಳಲಿರುವ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇರಬೇಕೆಂಬ ಆದೇಶವನ್ನು ನೀಡಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಲೇಖನದ ವಿಚಾರ ಏನಪ್ಪಾ ಅಂದ್ರೆ ನಮ್ಮ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಟ್ರಕ್ ಒಂದಕ್ಕೆ ಮಹೀಂದ್ರಾ ಸಂಸ್ಥೆಯ ಮರಾಜೊ ಕಾರು ಗುದ್ದಿದ್ದು, ಪ್ರಯಾಣಿಕರಿಗೆ ಏನೂ ಆಗದೆಯೆ ಹೊರ ಬಂದಿದ್ದಾರೆ. ಹೌದು, ಇಂತಹ ವಿಪರ್ಯಾಸವನ್ನ ಕೇವಲ ಟಾಟಾ ಮೋಟಾರ್ಸ್‍ನ ಕಾರುಗಳಲ್ಲಿ ಮಾತ್ರವೆ ಕಂಡಿದ್ದೆವು. ಆದರೆ ಇದೀಗ ಮಹೀಂದ್ರಾ ಸಂಸ್ಥೆಯ ಮರಾಜೋ ಕಾರಿನಲ್ಲಿ ನೀಡಲಾದ ಸುರಕ್ಷಾ ಸಾಧನಗಳಿಂದ ಪ್ರಯಾಣಿಕರು ಸುರಕ್ಷಿತವಾಗಿ ಹೊರ ಬಂದಿದ್ದಾರೆ.

ಅಪಘಾತದ ಕುರಿತಾಗಿ ಮನೋಜ್ ಎಸ್‍ಜಿ ರಾವ್ ಎಂಬುವವರು ಸಣ್ಣದಾದ ವಿಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸ್ಥಳೀಯರ ಮಾಹಿತಿಗಳ ಪ್ರಕಾರ ಮರಾಜೊ ಕಾರಿನಲ್ಲಿ ನೀಡಲಾದ ಏರ್‍‍ಬ್ಯಾಗ್‍‍ಗಳು ಪ್ರಯಾಣಿಕರ ಪ್ರಾಣ ಊಳಿಸಿದೆ. ಡ್ರೈವರ್ ಮತ್ತು ಕೋ ಪ್ಯಾಸೆಂಜರ್‍‍ಗೆ ಮಾತ್ರ ಮುಖದ ಮೇಲೆ ಗಾಯಗಳಾಗಿವೆ ಎನ್ನಲಾಗಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ನೈಸ್ ರಸ್ತೆಯಲ್ಲಿ ಎಷ್ಟರ ಮಟ್ಟಿಗೆ ಸ್ಪೀಡ್‍ನಲ್ಲಿ ವಾಹನಗಳು ಪ್ರಯಾಣಿಸುತ್ತಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಯಾವುದೇ ರಸ್ತೆಯಲ್ಲಾಗಲಿ ಅತಿಯಾದ ವೇಗದಲ್ಲಿ ಸಂಚರಿಸುವುದು ಸರಿಯಲ್ಲ. ರಸ್ತೆಯಲ್ಲಿ ನೀಡಲಾದ ಸ್ಪೀಡ್ ಬೋರ್ಡ್ ಫಲಕಗಳನ್ನು ಗಮನಿಸಿ ಅಷ್ಟೆ ವೇಗದಲ್ಲಿ ಡ್ರೈವ್ ಮಾಡುವುದು ಒಳಿತು.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಇನ್ನು ಮಹೀಂದ್ರಾ ಮರಾಜೊ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಮಹೀಂದ್ರಾ ಸಂಸ್ಥೆಯು ಕಳೆದ 6 ತಿಂಗಳ ಹಿಂದೆಯೆ ಬಿಡುಗಡೆ ಮಾಡಲಾಗಿತ್ತು. ಈ ಕಾರಿನಲ್ಲಿ ನೀಡಲಾದ ವೈಶಿಷ್ಟ್ಯತೆಗಳು ಮತ್ತು ಸೌಲತ್ತುಗಳ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮವಾದ ಮಾರಾಟವನ್ನು ಕಾಣುತ್ತಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಕ್ರ್ಯಾಷ್ ಟೆಸ್ಟಿಂಗ್‍ನಲ್ಲಿ ಉತ್ತಮ ಪ್ರದರ್ಶನ

ಮಹೀಂದ್ರಾ ಮರಾಜೋ ಕಾರು ಬಿಡುಗಡೆಗೊಂಡಾಗಿನಿಂದಲೂ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಗ್ರಾಹಕರು ಈ ಕಾರನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ದೇಶದಲ್ಲಿನ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನಂಪ್ರತಿ 200ಕ್ಕು ಹೆಚ್ಚು ಬುಕ್ಕಿಂಗ್‍‍ಗಳನ್ನು ಪಡೆಯುತ್ತಿರುವ ಮರಾಜೊ ಕಾರು, ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5ಕ್ಕೆ 4 ಅಂಕಗಳನ್ನು ಪಡೆದು, ಮಾರುಕಟ್ಟೆಯಲ್ಲಿರುವ ಎಂಪಿವಿ ಕಾರುಗಳಲ್ಲಿ ಸುರಕ್ಷಿತವಾದದ್ದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಎಂ2, ಎಂ4, ಎಂ6 ಮತ್ತು ಎಂ8 ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮರಾಜೊ ಕಾರುಗಳು ಆರಂಭಿಕವಾಗಿ ರೂ. 9.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.13.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಸದ್ಯದಲ್ಲೇ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವರ್ಷನ್‌ಗಳು ಬಿಡುಗಡೆಯಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಕಾರಿನ ಮೇಲೆ ಗರಿಷ್ಠ ವಾರಂಟಿ

ಹೊಸ ಮರಾಜೊ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಸದ್ಯ ಹೊಸ ಮರಾಜೊ ಕಾರುಗಳಿಗಾಗಿ ದಾಖಲಾಗುತ್ತಿರುವ ಬುಕ್ಕಿಂಗ್‌ಗಳಲ್ಲಿ ಶೇ.80ಕ್ಕೂ ಹೆಚ್ಚು ಗ್ರಾಹಕರು ಟಾಪ್ ಎಂಡ್ ಮಾದರಿಯಾದ ಎಂ8 ವೆರಿಯೆಂಟ್‌ಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರು ಮರಾಜೊ ಖರೀದಿಗೆ ಒಲವು ತೋರುತ್ತಿದ್ದಾರೆ.

Source: Rushlane

Most Read Articles

Kannada
English summary
Mahindra Marazzo rear ends a truck – Airbags deploy, passengers safe. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X