ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಮಹೀಂದ್ರಾ ಒಡೆತನದ ಸ್ಯಾಂಗ್‍‍ಯಾಂಗ್‍ನ ಹೊಸ ವಿನ್ಯಾಸದಲ್ಲಿರುವ ಟಿವೊಲಿ ವಾಹನವನ್ನು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಈ ಎಸ್‍‍ಯು‍‍ವಿಯ ಹೊರಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದರೆ, ವಾಹನದ ಒಳಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಸ್ಯಾಂಗ್‍‍ಯೊಂಗ್ ಟಿವೊಲಿ ಹೊಸ ಆವೃತ್ತಿಯ ವಾಹನವನ್ನು ಭಾರತದಲ್ಲಿ ಹಲವು ತಿಂಗಳ ಹಿಂದೆ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ, ಹೊಸ ಸ್ಯಾಂಗ್‍‍ಯಾಂಗ್ ಟಿವೊಲಿ ವಾಹನದ ಮುಂಭಾಗದಲ್ಲಿ ಹೊಸ ವಿನ್ಯಾಸದಲ್ಲಿರುವ ಬಂಪರ್‍‍ಯಿದ್ದು ಅದರ ಕೆಳಗಡೆ ದೊಡ್ಡ ಏರ್ ಇನ್‍‍ಟೇಕ್‍‍ಗಳಿದ್ದು, ಹೊಸ ವಿನ್ಯಾಸದ ಗ್ರಿಲ್ ಹಾಗೂ ಹೆಡ್‍‍ಲೈಟ್‍‍ಗಳಿವೆ. ಹಿಂಭಾಗದಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ಟೇಲ್‍‍ಗೇಟ್‍‍ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಹಿಂಭಾಗದಲ್ಲಿರುವ ಲೈಟ್ ಹಾಗೂ ಬಂಪರ್‍‍ಗಳಲ್ಲೂ ಸ್ವಲ್ಪ ಮಟ್ಟಿಗೆ ಬದಲಾವಣೆಗಳಾಗಿವೆ. ಹೊಸ ಸ್ಯಾಂಗ್‍‍ಯಾಂಗ್ ಟಿವೊಲಿ ವಾಹನದಲ್ಲಿ 10.25 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಡ್ಯಾಶ್‍‍ಬೋರ್ಡ್, 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಅಪ್‍‍ಹೊಲ್‍‍ಸ್ಟರಿಯಲ್ಲಿ ಮೆದುವಾದ ಉಪಕರಣಗಳಿವೆ.

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಹೊಸ ಟಿವೊಲಿ ವಾಹನವು 1.5 ಲೀಟರಿನ ಟರ್ಬೊ‍‍ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 160 ಬಿಹೆ‍‍ಚ್‍‍‍ಪಿ ಹಾಗೂ 280 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇದರ ಹೊರತಾಗಿ ಅಧಿಕೃತವಾಗಿ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಮಹೀಂದ್ರಾ ಕಂಪನಿಯು ಸ್ಯಾಂಗ್‍‍ಯಾಂಗ್ ಬ್ರಾಂಡಿನ ಹೆಸರಿನಲ್ಲಿ ಭಾರತದಲ್ಲಿ ಯಾವುದೇ ವಾಹನಗಳನ್ನು ಮಾರಾಟ ಮಾಡುತ್ತಿಲ್ಲ, ಆದರೆ ಅದೇ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿರುವ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಮಹೀಂದ್ರಾ ಅಲ್ಟುರಾಸ್ ಜಿ4 ಕಾರನ್ನು ಮಾರಾಟ ಮಾಡುತ್ತಿದೆ, ಈ ವಾಹನವು ಸ್ಯಾಂಗ್‍‍ಯಾಂಗ್ ಜಿ4 ರೆಕ್ಸ್ ಟಾನ್ ವಾಹನದ ಮೇಲೆ ಆಧಾರಿತವಾಗಿದ್ದರೆ, ಎಕ್ಸ್ ಯುವಿ 300 ವಾಹನವು ಸ್ಯಾಂಗ್‍‍ಯಾಂಗ್ ಟಿವೊಲಿ ವಾಹನದ ಮೇಲೆ ಆಧಾರಿತವಾಗಿದೆ.

MOST READ: ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ವಿನ್ಯಾಸದ ಟಿವೊಲಿ ವಾಹನವು ಈಗಿರುವ ಮಾದರಿಗಿಂತ ಹೆಚ್ಚು ದಕ್ಷತೆಯನ್ನು ಹೊಂದಿರುವ ಸಾಧ್ಯತೆಗಳಿವೆ. ಒಳಭಾಗದಲ್ಲಿ ಮಾಡಲಾಗಿರುವ ವಿನ್ಯಾಸಗಳು ಈ ವಾಹನಕ್ಕೆ ಪ್ರಿಮೀಯಂ ಫೀಲ್ ನೀಡುತ್ತವೆ. ಸ್ಯಾಂಗ್‍‍ಯಾಂಗ್ ಟಿವೊಲಿಯು ಅದ್ಭುತವಾದ ವಾಹನವಾಗಿದೆ. ನೋಟದಲ್ಲಿಯೇ ಗಮನವನ್ನು ತನ್ನತ್ತ ಸೆಳೆಯಲಿದೆ. ಹೊಸ ವಿನ್ಯಾಸದಲ್ಲಿ ವಾಹನವು ಈಗಿರುವ ವಾಹನಕ್ಕಿಂತ ಆಕರ್ಷಕವಾಗಿದೆ. ಈ ವಾಹನವನ್ನು ಭಾರತದಲ್ಲಿ ಮಾರಾಟ ಮಾಡಿದರೆ ಜನಪ್ರಿಯವಾಗುವ ಸಾಧ್ಯತೆಗಳಿವೆ. ಆದರೆ ಮಹೀಂದ್ರಾ ಕಂಪನಿಯು ಈ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Ssangyong Tivoli Facelift Unveiled In South Korea — Features A New Engine And Tweaked Interiors - Read in kannada
Story first published: Saturday, May 25, 2019, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X