ಮಾಡಿಫೈನಲ್ಲಿ ಮಿಂಚಿದ ಮಹೀಂದ್ರಾ ರೊಕ್ಸರ್

ಭಾರತದ ಕಾರು ತಯಾರಕ ಕಂಪನಿ ಮಹೀಂದ್ರಾ ತನ್ನ ಆಫ್ ರೋಡ್ ಎಟಿವಿ ವಾಹನವಾದ ರೊಕ್ಸರ್ ಅನ್ನು ಅಮೇರಿಕಾದಲ್ಲಿ ಪರಿಚಯಿಸಿದೆ. ಅಮೇರಿಕಾದಲ್ಲಿ ಅದನ್ನು ಪರಿಚಯಿಸಿದ ನಂತರ ಜನರು ಅದರ ಗೀಳಿನಲ್ಲಿ ಬಿದಿದ್ದು ವಾಹನವನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಿಸಿ ಕೊಳ್ಳಲು ಶುರುಮಾಡಿದ್ದಾರೆ.

ಮಾಡಿಫೈನಲ್ಲಿ ಮಿಂಚಿದ ಮಹೀಂದ್ರಾ ರೊಕ್ಸರ್

ಯೂಟ್ಯೂಬ್ ಚಾನೆಲ್ ಆದ ಡೀಸೆಲ್ ಫ್ರೀಕ್ ಮಾಡಿಫೈ ಮಾಡಲಾದ ಮಹೀಂದ್ರ ರೊಕ್ಸರ್ ನ ಬಗ್ಗೆ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ ಮಾಡಿಫೈ ಮಾಡಲಾದ ಮಹೀಂದ್ರ ರೊಕ್ಸರ್ ಹಿಮಚ್ಛೇದಿತ ಅಲಾಸ್ಕ ಇಳಿಜಾರು ಪರ್ವತವನ್ನು ಏರುತ್ತಿರುವುದನ್ನು ಕಾಣಬಹುದು. ಟ್ಯಾಂಕ್ ಟ್ರಾಕ್ಸ್ ಗಳನ್ನು ಹೊಂದಿರುವ ಈ ವೆಹಿಕಲ್ ಪರ್ವತದ ತುಂಬೆಲ್ಲಾ ಹಿಮವಿದ್ದರೂ ಅದ್ಯಾವುದನ್ನು ಲೆಕ್ಕಿಸದೇ ಇಳಿಜಾರಿನ ಪರ್ವತವನ್ನು ಆರಾಮಾಗಿ ಏರುತ್ತಿದ್ದು ಕಾರುಗಳಿಂದ ಸಾಧ್ಯವಾಗದೇ ಇರುವುದನ್ನು ಮಾಡಿ ತೋರಿಸಿದೆ.

ಮಾಡಿಫೈ ಮಾಡಿರುವ ರೊಕ್ಸರ್ ಕಾರು ಮಹೀಂದ್ರ ಗ್ರೂಪಿನ ಅಧ್ಯಕ್ಷ ಆನಂದ್ ಮಹೀಂದ್ರರವರ ಗಮನಸೆಳೆದಿದ್ದು ಅವರು ಟ್ವೀಟ್ ಮಾಡುವ ಮೂಲಕ ಮಾಡಿಫೈ ಮಾಡಿರುವ ಆಫ್ ರೋಡರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮಾಡಿಫೈ ಆಗಿರುವ ರೊಕ್ಸರ್ ಕಾರಿನ ನಾಲ್ಕು ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ.

ಮಾಡಿಫೈನಲ್ಲಿ ಮಿಂಚಿದ ಮಹೀಂದ್ರಾ ರೊಕ್ಸರ್

ವರ್ಷ ಪೂರ್ತಿ ಹಿಮಪೂರಿತವಾಗಿರುವ ಅಲಾಸ್ಕ ಪರ್ವತವನ್ನು ಏರುತ್ತಿರುವ ಮಾಡಿಫೈಡ್ ವಾಹನದಲ್ಲಿ ಕ್ಯಾಟರ್ ಪಿಲ್ಲರ್ ಟ್ರ್ಯಾಕ್ ಗಳನ್ನು ಕಾಣಬಹುದು. ಮಾಡಿಫೈಡ್ ನಂತರ ಅಳವಡಿಸಿರುವ ಈ ಟ್ರ್ಯಾಕ್ ಗಳು ವಾಹನದ ತೂಕವನ್ನು ವಾಹನದ ಎಲ್ಲಾ ಭಾಗಕ್ಕೂ ಸಮನಾಗಿ ಹಂಚಿ ವಾಹನವು ಹಿಮದಲ್ಲಿ ಸಿಕ್ಕಿ ಕೊಳ್ಳದಂತೆ ನೋಡಿಕೊಳ್ಳುತ್ತವೆ.

ರೊಕ್ಸರ್, ಮಹೀಂದ್ರ ಕಂಪನಿಯು ಅಮೇರಿಕಾದ ಎಟಿವಿ ಮಾರುಕಟ್ಟೆಯಲ್ಲಿ ನೀಡುತ್ತಿರುವ ಏಕೈಕ ವಾಹನವಾಗಿದೆ. ಈ ವಾಹನವನ್ನು ಎಟಿವಿ ಎಂದು ನಮೂದಿಸಿರುವ ಕಾರಣ ಇದು ಕಾನೂನು ಬಾಹಿರವಾಗಿದ್ದು, ಅಮೇರಿಕಾದ ಸಾರ್ವಜನಿಕ ರೋಡುಗಳಲ್ಲಿ ಚಲಾಯಿಸುವಂತಿಲ್ಲ. ಆದರೆ ಆಫ್ ರೋಡ್ ಇಷ್ಟ ಪಡುವ ಗ್ರಾಹಕರು ಅಡ್ವೆಂಚರ್ ಗಳಿಗಾಗಿ ಈ ವೆಹಿಕಲ್ ಅನ್ನು ಖರೀದಿಸುತ್ತಿದ್ದಾರೆ.

ಮಾಡಿಫೈನಲ್ಲಿ ಮಿಂಚಿದ ಮಹೀಂದ್ರಾ ರೊಕ್ಸರ್

ಮಹೀಂದ್ರದಿಂದ ಅಮೇರಿಕಾದಲ್ಲಿ ಪರಿಚಯಿಸಲ್ಪಟ್ಟಿರುವ, 2.5 ಲೀಟರ್ ಡಿಐ ಡೀಸೆಲ್ ಎಂಜಿನ್ ಹೊಂದಿರುವ ಈ ವೆಹಿಕಲ್ 62 ಬಿಹೆಚ್‍ಪಿ ಮತ್ತು 180 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನನ್ನು 5 ಸ್ಪೀಡ್ ಗೇರ್ ಬಾಕ್ಸ್ ಮತ್ತು 4 X 4 ಡ್ರೈವ್ ಗೆ ಜೋಡಿಸಲಾಗಿದೆ. ಮಹೀಂದ್ರ ಈ ವಾಹನದಲ್ಲಿ ಲೋ ರೆಷಿಯೊ ಗೇರ್ ಬಾಕ್ಸನ್ನು ಸಹ ಅಳವಡಿಸಿದೆ. ಭಾರತದಂತೆಯೇ ಅಮೇರಿಕಾದಲ್ಲೂ ಮಹೀಂದ್ರಾ ಬೆಲೆ ಅಧಿಕವಾಗಿದ್ದು, ರೊಕ್ಸರ್ ನ ಆರಂಭಿಕ ಬೆಲೆಯನ್ನು$ 9,000 ಗಳಿಂದ (ರೂ. 6.42 ಲಕ್ಷ ) ನಿಗದಿಪಡಿಸಲಾಗಿದೆ.

Most Read Articles

Kannada
English summary
This Tank Track Roxor Is So Cool That Even Anand Mahindra Is Talking About It -Read in Kannada
Story first published: Friday, April 19, 2019, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X