ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಯಾವುದೇ ಕಾರ್ ಆಗಲಿ ಪ್ರತಿದಿನ ಬೆಂಕಿಗೆ ತುತ್ತಾಗುವುದಿಲ್ಲ. ಅದರಲ್ಲೂ ಟೆಸ್ಟ್ ಮಾಡಲಾಗುತ್ತಿರುವ ವಾಹನಗಳಿಗೆ ಬೆಂಕಿ ಬೀಳುವುದು ಅಪರೂಪ. ಆದರೆ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದ್ದ 2020ರ ಮಹೀಂದ್ರಾ ಸ್ಕಾರ್ಪಿಯೋಗೆ ಬೆಂಕಿ ಬಿದ್ದಿದೆ. ಸದ್ಯಕ್ಕೆ ಈ ಮಹೀಂದ್ರಾ ಸ್ಕಾರ್ಪಿಯೋಗೆ ಹೇಗೆ ಬೆಂಕಿ ಬಿದ್ದಿತು ಎಂಬುದು ತಿಳಿದು ಬಂದಿಲ್ಲ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಅಂದ ಹಾಗೆ ಈ ಘಟನೆ ನಡೆದಿರುವುದು ಚೆನ್ನೈನ ಹೊರವಲಯದಲ್ಲಿ. ಈ ವೀಡಿಯೊದಲ್ಲಿ ಸ್ಕಾರ್ಪಿಯೊಗೆ ಬೆಂಕಿ ಬಿದ್ದಿರುವುದನ್ನು ಮಾತ್ರ ತೋರಿಸಲಾಗಿದೆ. ಹೇಗೆ ಬೆಂಕಿ ಬಿತ್ತು ಎಂಬುದನ್ನು ಹೇಳಿಲ್ಲ. ಬಿಎಸ್ 6 ಎಂಜಿನ್‍‍‍ಗಳನ್ನು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸುತ್ತಿವೆ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಬೆಂಕಿ ಬಿದ್ದಿರುವ ಮಹೀಂದ್ರಾ ಸ್ಕಾರ್ಪಿಯೋ ಟೆಸ್ಟ್ ಮಾದರಿ ಎಸ್‍‍ಯುವಿ ಪೂರ್ತಿಯಾಗಿ ಸುಟ್ಟು ಹೋಗಿದೆ. ದಟ್ಟ ಹೊಗೆಯ ಅಡಿಯಲ್ಲಿ, ವಾಹನದ ಮುಂಭಾಗವು ಪೂರ್ತಿಯಾಗಿ ಹಾಳಾಗಿದೆ. ಆದರೆ ಈ ದುರಂತಕ್ಕೆ ಕಾರಣವೇನೆಂದು ಮಹೀಂದ್ರಾ ಕಂಪನಿಯವರು ತಿಳಿದುಕೊಳ್ಳುವುದು ಮುಖ್ಯ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ವರದಿಗಳ ಪ್ರಕಾರ, ಈ ಮಹೀಂದ್ರಾ ಸ್ಕಾರ್ಪಿಯೊ ಟೆಸ್ಟ್ ಮಾದರಿಯನ್ನು ಎಂದಿನಂತೆ ಸ್ಪಾಟ್ ಟೆಸ್ಟ್ ಮಾಡುತ್ತಿದ್ದಾಗ ಎಂಜಿನ್ ಬೇಯಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ತಕ್ಷಣವೇ ಆತ ಕಾರ್ ಅನ್ನು ರಸ್ತೆ ಬದಿ ಪಾರ್ಕ್ ಮಾಡಿದ್ದಾನೆ. ಯಾರಾದರೂ ಸಹಾಯಕ್ಕೆ ಬರುವ ಮೊದಲೇ ಇಡೀ ಕಾರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಪರೀಕ್ಷಾ ಕಾರುಗಳಿಗೆ ಬೆಂಕಿ ಬೀಳುವುದು ಅಪರೂಪ. ಎರಡು ವರ್ಷಗಳ ಹಿಂದೆ, ಆಸ್ಟ್ರಿಯನ್ ಆಲ್ಪ್ಸ್ ನಲ್ಲಿ ಟ್ರೈಲರ್ ಎಳೆಯುತ್ತ ಪರೀಕ್ಷೆ ಮಾಡಲಾಗುತ್ತಿದ್ದ ಪ್ರಸ್ತುತ ತಲೆಮಾರಿನ ಆಡಿ ಎ 7 ಬೆಂಕಿಗಾಹುತಿಯಾಗಿತ್ತು. ಚಾಲಕನಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಕಾರು ಪೂರ್ತಿಯಾಗಿ ಸುಟ್ಟು ಹೋಗಿತ್ತು.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಈ ವರ್ಷದ ಆರಂಭದಲ್ಲಿ ಮೆಕ್ಲಾರೆನ್ ಸ್ಪೀಡ್‌ಟೇಲ್ ವಾಹನದ ಪರೀಕ್ಷೆ ನಡೆಸುತ್ತಿದ್ದಾಗ, ಬೆಂಕಿಗಾಹುತಿಯಾಗಿತ್ತು. ಇದಕ್ಕೆ ಎಲೆಕ್ಟ್ರಿಕ್ ದೋಷ ಕಾರಣವೆಂದು ನಂತರ ಕಂಡು ಬಂತು. ಹೊಸ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೋ ಕಾರ್ ಅನ್ನು ಹಲವು ತಿಂಗಳುಗಳಿಂದ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಈ ಕಾರು ಜಾಗತಿಕವಾಗಿ ಪಾದಾರ್ಪಣೆ ಮಾಡುವ ನಿರೀಕ್ಷೆಗಳಿವೆ. ಹೊಸ ಎಸ್‍‍ಯುವಿಯನ್ನು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಹೊಸ ಪ್ಲಾಟ್‌ಫಾರ್ಮ್‌ನಿಂದಾಗಿ, ಕ್ಯಾಬಿನ್‌ನೊಳಗೆ ಈಗಿರುವ ಕಾರಿಗಿಂತ ಹೆಚ್ಚಿನ ಸ್ಪೇಸ್ ಸಿಗಲಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

2020ರ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು 7/8 ಸೀಟರ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಆದರೆ ಪ್ರಯಾಣಿಕರಿಗೆ ಹೆಚ್ಚಿನ ಸ್ಪೇಸ್, ಫೀಚರ್, ಕಂಫರ್ಟ್ ನೀಡಲಾಗುವುದು. ಇಂಟಿರಿಯರ್‍‍ನ ಗುಣಮಟ್ಟವನ್ನು ಸಹ ಗಣನೀಯವಾಗಿ ಹೆಚ್ಚಿಸಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಸುರಕ್ಷತೆಯೂ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಸ್ಕಾರ್ಪಿಯೋ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 0 ಸ್ಟಾರ್ ರೇಟಿಂಗ್ ಗಳಿಸಿತ್ತು. ಹೊಸ ಸ್ಕಾರ್ಪಿಯೋ ಹೆಚ್ಚಿನ ಸುರಕ್ಷತಾ ರೇಟಿಂಗ್ ಪಡೆಯುವ ನಿರೀಕ್ಷೆಯಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಹೊಸ ಎಂಜಿನ್ ಬಗ್ಗೆ ಹೇಳುವುದಾದರೆ, 2020ರ ಸ್ಕಾರ್ಪಿಯೋದಲ್ಲಿ 2 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಇದೇ ಎಂಜಿನ್ ಅನ್ನು ಹೊಸ ತಲೆಮಾರಿನ ಥಾರ್ ಹಾಗೂ ಎಕ್ಸ್‌ಯುವಿ 500ಗಳಲ್ಲಿ ಅಳವಡಿಸಲಾಗಿದೆ.

ಈ ಎಂಜಿನ್ ಅನ್ನು ವಿಭಿನ್ನ ಕಾರುಗಳಲ್ಲಿ ವಿಭಿನ್ನವಾಗಿ ಟ್ಯೂನ್ ಮಾಡಿ ಅಳವಡಿಸಲಾಗುತ್ತದೆ. ಮಹೀಂದ್ರಾದ 2 ಲೀಟರ್ ಬಿಎಸ್ 6 ಎಂಜಿನ್ ಥಾರ್ ಎಸ್‍‍ಯುವಿಯಲ್ಲಿ ಸುಮಾರು 120 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, ಸ್ಕಾರ್ಪಿಯೋದಲ್ಲಿ ಸುಮಾರು 160 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಬೆಂಕಿಗಾಹುತಿಯಾದ ಮಹೀಂದ್ರಾ ಬಿ‍ಎಸ್ 6 ಸ್ಕಾರ್ಪಿಯೊ ಕಾರು

ಹೊಸ ತಲೆಮಾರಿನ ಎಕ್ಸ್‌ಯುವಿ 500ನಲ್ಲಿ ಸುಮಾರು 180 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಬೆಂಕಿಗಾಹುತಿಯಾದ ಟೆಸ್ಟ್ ಮಾದರಿಯ ಸ್ಕಾರ್ಪಿಯೊದಲ್ಲಿ 2 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತೇ ಇಲ್ಲವೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Most Read Articles

Kannada
English summary
Mahindra scorpio on fire new scorpio test mule in flames - Read in Kannada
Story first published: Friday, November 15, 2019, 11:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X