ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಆರ್ಥಿಕ ಹಿಂಜರಿತದಿಂದಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವರ್ಷದ ಆರಂಭದಿಂದಲೂ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸಿದ್ದು, ಇದೀಗ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದ್ದು, ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸಂಸ್ಥೆಯು ನವೆಂಬರ್ ಅವಧಿಯಲ್ಲಿ ಒಟ್ಟು 14,238 ಕಾರುಗಳನ್ನು ಮಾರಾಟ ಮಾಡುವ ಮೂಲಕ ಕಳೆದ ವರ್ಷದ ನವೆಂಬರ್ ಅವಧಿಗಿಂತ ಶೇ.6.05ರಷ್ಟು ಹಿನ್ನಡೆ ಅನುಭವಿಸಿದ್ದು, ಸ್ಕಾರ್ಪಿಯೋ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. 2018ರ ನವೆಂಬರ್ ಅವಧಿಯಲ್ಲಿ 2,906 ಯುನಿಟ್ ಸ್ಕಾರ್ಪಿಯೋ ಮಾರಾಟ ಮಾಡಿದ್ದ ಮಹೀಂದ್ರಾ ಸಂಸ್ಥೆಯು 2019ರ ನವೆಂಬರ್ ಅವಧಿಯಲ್ಲಿ 3,878 ಯುನಿಟ್ ಸ್ಕಾರ್ಪಿಯೋ ಮಾರಾಟ ಮಾಡುವ ಮೂಲಕ ಶೇ.33.45ರಷ್ಟು ಮುನ್ನಡೆ ಸಾಧಿಸಿದೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಇನ್ನುಳಿದಂತೆ ಪ್ರಮುಖ ಎಸ್‌ಯುವಿ ಮಾದರಿಗಳಾದ ಬೊಲೆರೊ, ಎಕ್ಸ್‌ಯುವಿ500, ಅಲ್ಟುರಾಸ್ ಜಿ4, ಎಕ್ಸ್‌ಯುವಿ300, ಮರಾಜೋ ಎಂಪಿವಿ, ಜೈಲೋ ಮತ್ತು ಥಾರ್ ಕಾರುಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಬಿಎಸ್-6 ಮಾದರಿಗಳ ಖರೀದಿಗೆ ಗ್ರಾಹಕರು ಎದುರು ನೋಡುತ್ತಿದ್ದಾರೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಇನ್ನು ಮಹೀಂದ್ರಾ ಸಂಸ್ಥೆಯು ಬಿಎಸ್-6 ಎಕ್ಸ್‌ಯುವಿ300 ಪೆಟ್ರೋಲ್ ಕಾರು ಬಿಡುಗಡೆ ಮಾಡುವ ಮೂಲಕ ಹೊಸ ಕಾರು ಮಾದರಿಗಳ ಮಾರಾಟ ಚಾಲನೆ ನೀಡಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹೊಸ ತಲೆಮಾರಿನ ಸ್ಕಾರ್ಪಿಯೋ ಸೇರಿದಂತೆ ಒಟ್ಟು ಆರು ಬಿಎಸ್-6 ಕಾರು ಆವೃತ್ತಿಗಳನ್ನು ರಸ್ತೆಗಿಳಿಸಲಿದೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದ್ದು, ಮಹೀಂದ್ರಾ ಕೂಡಾ ನೆಕ್ಸ್ಟ್ ಜನರೇಷನ್ ಕಾರು ಮಾದರಿಗಳ ಜೊತೆಗೆ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಇದರಲ್ಲಿ ಮಹೀಂದ್ರಾ ನಿರ್ಮಾಣದ ಟಿಯುವಿ300 ಪ್ಲಸ್, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ನ್ಯೂ ಜನರೇಷನ್ ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಾರುಗಳು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಬಿಎಸ್-6 ನಿಂದಾಗಿ ಕಾರುಗಳಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ಕಾರುಗಳ ಎಲ್ಲಾ ಆವೃತ್ತಿಯಲ್ಲೂ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಹಾಗೆಯೇ 6 ಏರ್‌ಬ್ಯಾಗ್‌ಗಳು(ಟಾಪ್ ಎಂಡ್‌ಗಳಲ್ಲಿ), ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

ಆಟೋ ಮಾರುಕಟ್ಟೆ ಕುಸಿತ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

Most Read Articles

Kannada
English summary
Mahindra Scorpio Sales Up By 33%, New-Gen Launching Early Next Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X