ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಕಳೆದ ಹಿಂದಷ್ಟೇ ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಆಫ್ ರೋಡ್ ಕಾರು ಮಾದರಿಯಾದ ಥಾರ್ ಲಿಮಿಟೆಡ್ ಎಡಿಷನ್ ಮಾದರಿಯಾದ ಥಾರ್ 700 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಸ್ಪೆಷಲ್ ಎಡಿಷನ್ ಮಾದರಿಯು 700 ಯನಿಟ್ ಉತ್ಪಾದನಾ ಗುರಿ ತಲುಪಿದ ಹಿನ್ನೆಲೆಯಲ್ಲಿ ಸ್ಪೆಷಲ್ ಎಡಿಷನ್ ಕಾರಿನ ಉತ್ಪಾದನೆಗೆ ಬಿಳ್ಕೊಡುಗೆ ನೀಡಲಾಗಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಮಹೀಂದ್ರಾ ಸಂಸ್ಥೆಯು ಸದ್ಯ ತನ್ನ ಕಾರು ಮಾರಾಟ ವಿಭಾಗದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಥಾರ್ ಸೇರಿದಂತೆ ಹಲವು ಕಾರು ಮಾದರಿಗಳನ್ನು ನೆಕ್ಸ್ಟ್ ಜನರೇಷನ್ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮುನ್ನ ಥಾರ್ 700 ಎನ್ನುವ ಲಿಮಿಟೆಡ್ ಎಡಿಷನ್ ಆವೃತ್ತಿಯನ್ನು ರಸ್ತೆಗಿಳಿಸಿತ್ತು. ಸಿಮಿತ ಅವಧಿಗೆ ಮಾತ್ರವೇ ಬಿಡುಗಡೆಗೊಂಡಿದ್ದ ಥಾರ್ ಲಿಮಿಟೆಡ್ ಎಡಿಷನ್ ಕಾರು ಕೇವಲ 700 ಯುನಿಟ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.99 ಲಕ್ಷ ಬೆಲೆ ಪಡೆದುಕೊಂಡಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಇದೀಗ ಥಾರ್ 700 ಲಿಮಿಟೆಡ್ ಎಡಿಷನ್ ಮಾದರಿಯು ಉತ್ಪಾದನಾ ಗುರಿಹೊಂದಿದ ಹಿನ್ನೆಲೆ ಮಹೀಂದ್ರಾ ಸಂಸ್ಥೆಯು ವಿಶೇಷ ಆತಿಥ್ಯದೊಂದಿಗೆ ಲಿಮಿಟೆಡ್ ಎಡಿಷನ್ ಉತ್ಪಾದನಾ ಪ್ರಕ್ರಿಯೆಗೆ ಬಿಳ್ಕೊಡುಗೆ ನೀಡಿದ್ದು, ಸ್ಪೆಷಲ್ ಎಡಿಷನ್ ಉತ್ಪಾದನಾ ತಂಡವನ್ನು ಮಹೀಂದ್ರಾ ಸಂಸ್ಥೆಯು ಅಭಿನಂದನೆ ಸಲ್ಲಿಸಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಇನ್ನು ಮಹೀಂದ್ರಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ 70 ವರ್ಷಗಳನ್ನು ಪೂರೈಸುತ್ತಿದ್ದು, ಇದರ ಸವಿನೆನಪಿಗಾಗಿ ಆಫ್ ರೋಡ್ ಕಿಂಗ್ ಥಾರ್ ಕಾರಿನ 700 ಯನಿಟ್‌ಗಳನ್ನು ಲಿಮಿಟೆಡ್ ಎಡಿಷನ್ ಮಾದರಿಗಾಗಿ ಪರಿಚಯಿಸಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

1949ರಲ್ಲಿ ತನ್ನ ಮೊದಲ ವಾಹನ ಮಾದರಿಯನ್ನು ರಸ್ತೆಗಿಳಿಸಿ ಯಶಸ್ವಿಯಾದ ಮಹೀಂದ್ರಾ ಅಂದಿನಿಂದ ಇದುವರೆಗೂ ದೇಶಿಯ ಮಾರುಕಟ್ಟೆಯ ವಾಹನ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಹಲವು ಕಾರು ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದುವ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಕಾರು ಮಾರಾಟದಲ್ಲಿ ನಂ.1 ಸ್ಥಾನದತ್ತ ಮುನ್ನುಗ್ಗುವ ಗುರಿಹೊಂದಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಕಾರು ಮಾರಾಟದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ವಾಹನಗಳ ಎಂಜಿನ್, ಪರ್ಫಾಮೆನ್ಸ್, ಗ್ರಾಹಕರ ಸೇವೆಗಳು, ಮಾರುಕಟ್ಟೆ ನಿರ್ವಹಣೆಯಲ್ಲಿ ಗುರುತರ ಬದಲಾವಣೆಗೆ ಕಾರಣವಾಗಿದೆ.

ಇದರಿಂದಾಗಿಯೇ ಕಳೆದ 2 ವರ್ಷಗಳಲ್ಲಿ ಮಹೀಂದ್ರಾ ಸಂಸ್ಥೆಯ ಪ್ರಯಾಣಿಕ ಬಳಕೆಯ ವಾಹನಗಳ ಮಾರಾಟ ಪ್ರಮಾಣವು ದುಪ್ಪಟ್ಟಾಗಿದ್ದು, ಅದರಲ್ಲೂ ಮಹೀಂದ್ರಾ ಸಂಸ್ಥೆಗೆ ಬಹುದಿನಗಳಿಂದಲೂ ಉತ್ತಮ ಹೆಸರು ತಂದುಕೊಟ್ಟಿರುವ 4x4 ಥಾರ್ ಕಾರನ್ನು 70ನೇ ಸಂಭ್ರಮಕ್ಕಾಗಿ ಲಿಮಿಟೆಡ್ ಎಡಿಷನ್ ಮಾದರಿಯಾಗಿ ಆಯ್ಕೆ ಮಾಡಲಾಗಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಲಿಮಿಟೆಡ್ ಎಡಿಷನ್ ಮಾದರಿಯು ಈ ಹಿಂದಿನಂತೆಯೇ 2.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲೇ ಬಿಡುಗಡೆ ಮಾಡಲಾಗಿದ್ದು, ಕಾರಿನ ಹೊರಭಾಗದ ವಿನ್ಯಾಸಗಳಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಸ್ಪೆಷಲ್ ಎಡಿಷನ್ ಥಾರ್ 700 ಕಾರು ಉತ್ಪಾದನೆಗೆ ಮಹೀಂದ್ರಾ ಬಿಳ್ಕೊಡುಗೆ

ಹೊಸ ಕಾರಿನ ಹೊರಭಾಗದಲ್ಲಿ ಜೋಡಿಸಲಾಗಿರುವ ಲಿಮಿಟೆಡ್ ಎಡಿಷನ್ ಬ್ಯಾಡ್ಜ್‌ನಲ್ಲಿ 700 ಸಂಖ್ಯೆಯ ಜೊತೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಹಿ ಕೂಡಾ ಇದ್ದು, ಹೊಸ ಕಾರು ಹೆಚ್ಚುವರಿಯಾಗಿ ಎರಡು ವಿನೂತನ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಮಾಹಿತಿಗಳ ಪ್ರಕಾರ, ಈಗಲಾಗಲೇ ಈ ಸಿಮಿತ ಅವಧಿಯ ಆವೃತ್ತಿಯು ಪೂರ್ಣ ಪ್ರಮಾಣದಲ್ಲಿ ಬುಕ್ಕಿಂಗ್ ಪಡೆದುಕೊಂಡಿದ್ದು, ಖರೀದಿಗೆ ಸಾಮಾನ್ಯ ಥಾರ್ ಮಾತ್ರ ಲಭ್ಯವಿವೆ.

Most Read Articles

Kannada
English summary
Mahindra Stops Production of The Thar With The Special Edition Thar 700.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X