ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳಿಗಾಗಿ ಹೊಸ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್‍ ಅನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಬಿ‍ಎಸ್6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಹೊಸ ನಿಯಮಗಳು ಜಾರಿಗೆ ಬರುವ ಮುನ್ನ ಮಹೀಂದ್ರಾ ತನ್ನ ಬಿ‍ಎಸ್6 ಎಂಜಿನ್ ಹೊಂದಿರುವ ಟಿ‍‍ಯು‍‍ವಿ300 ವಾಹನವನ್ನು ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಸ್ಪಾಟ್ ಟೆಸ್ಟ್ ಮಾಡುತ್ತಿರುವುದನ್ನು ರಹಸ್ಯವಾಗಿ ಚಿತ್ರಿಸಲಾಗಿದೆ. ಈ ರಹಸ್ಯ ಚಿತ್ರಗಳಲ್ಲಿ ಪೂರ್ತಿಯಾಗಿ ಮರೆಮಾಡಿರುವ ಟಿ‍‍ಯು‍‍ವಿ300 ವಾಹನದಲ್ಲಿರುವ ವೈಟ್ ರೂಫ್ ಹಾಗೂ ವೈಟ್ ಒ‍ಆರ್‍‍ವಿ‍ಎಂಗಳನ್ನು ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಬಿ‍ಎಸ್6 ಎಂಜಿನ್ ಹೊಂದಿರುವ ಟಿಯುವಿ300 ವಾಹನದಲ್ಲೂ ಹಿಂದಿನ ಮಾದರಿಯಲ್ಲಿದ್ದ ಎಂ‍‍ಹಾಕ್100 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗುವುದು. 1.5 ಲೀಟರ್‍‍ನ ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಹಾಗೂ 240 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗೆ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಕೆಲ ತಿಂಗಳ ಹಿಂದೆ ಟಿಯು‍‍ವಿ300ಯನ್ನು ನವೀಕರಿಸಲಾಗಿತ್ತು. ಇದರಲ್ಲಿ ಹಲವಾರು ಕಾಸ್ಮೆಟಿಕ್ ಅಂಶಗಳನ್ನು ಹಾಗೂ ಹಲವು ಹೆಚ್ಚುವರಿ ಫೀಚರ್‍‍ಗಳನ್ನು ಸೇರಿಸಲಾಗಿತ್ತು. ಟಿಯು‍‍ವಿ300ಯಲ್ಲಿ ಮಾಡಲಾದ ಕಾಸ್ಮೆಟಿಕ್ ಬದಲಾವಣೆಗಳೆಂದರೆ, ಮುಂಭಾಗದಲ್ಲಿರುವ ಗ್ರಿಲ್ ಅನ್ನು ಪಿಯಾನೊ ಬ್ಲಾಕ್‍‍ನಲ್ಲಿ ಕ್ರೋಮ್ ಇನ್ಸರ್ಟ್‍‍ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಮೆಟಾಲಿಕ್ ಗ್ರೇನಲ್ಲಿ ಹೊಂದಿರುವ ಸ್ಪೋರ್ಟಿಯಾದ 10 ಸ್ಪೋಕ್ ಅಲಾಯ್ ವ್ಹೀಲ್‌ಗಳು ಹಾಗೂ ಎಸ್‍‍ಯು‍‍ವಿ ಸುತ್ತಲೂ ಬಾಡಿ ಕ್ಲಾಡಿಂಗ್‍‍ಗಳಿದ್ದು, ವಾಹನಕ್ಕೆ ಒರಟಾದ ನೋಟವನ್ನು ನೀಡುತ್ತವೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಬಿ‍ಎಸ್6 ಎಂಜಿನ್ ಹೊಂದಿರುವ ಟಿಯು‍‍ವಿ300 ಮಾದರಿಯಲ್ಲಿ ಪ್ರೀಮಿಯಂ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಲೆದರ್‍ ಸೀಟುಗಳ ಅಪ್‍‍ಹೊಲೆಸ್ಟರಿ, ಎತ್ತರಿಸಿದ ಡ್ರೈವರ್ ಸೀಟ್, ಲುಂಬರ್ ಅಡ್ಜಸ್ಟ್ ಮೆಂಟ್, ಎಲೆಕ್ಟ್ರಿಕ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಒ‍ಆರ್‍‍ವಿ‍‍ಎಂಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಇದರ ಜೊತೆಗೆ ರಿಮೋಟ್ ಲಾಕ್, ಕೀಲೆಸ್ ಎಂಟ್ರಿ, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಸ್ಟೀರಿಂಗ್-ಮೌಂಟೆಡ್ ಆಡಿಯೋ, ಕಾಲ್ ಕಂಟ್ರೋಲ್‍‍ಗಳು ಹಾಗೂ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂಗಳಿರಲಿವೆ.

MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಹೊಸ ಟಿಯು‍‍ವಿ300 ನಲ್ಲಿರುವ ಸುರಕ್ಷತಾ ಫೀಚರ್‍‍ಗಳೆಂದರೆ ಇಬಿಡಿ ಹೊಂದಿರುವ ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌, ಎಂಜಿನ್ ಇಮೊಬೈಲೈಸರ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಡ್ಯುಯಲ್ ಏರ್‌ಬ್ಯಾಗ್, ಆಟೋ ಡೋರ್ ಲಾಕ್, ಸೀಟ್-ಬೆಲ್ಟ್ ರಿಮ್ಯಾಂಡರ್ ಹಾಗೂ ಹೈ ಸ್ಪೀಡ್ ವಾರ್ನಿಂಗ್‍‍ಗಳಿರಲಿವೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಸ್ಟ್ಯಾಂಡರ್ಡ್ ಮಾದರಿಯ ಟಿಯುವಿ 300ಯನ್ನು ಹೊರತುಪಡಿಸಿ, ಮಹೀಂದ್ರಾ ಕಂಪನಿಯು ಇತ್ತೀಚೆಗೆ ಟಿಯುವಿ 300 ಪ್ಲಸ್ ಬಿಎಸ್ 6 ಮಾದರಿಯನ್ನು ಸಹ ಪರೀಕ್ಷಿಸಿದೆ. ಮಹೀಂದ್ರಾ ಟಿಯುವಿ 300 ಪ್ಲಸ್ ಭಾರತದಲ್ಲಿ ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‌ಯುವಿಯು (ಟಿಯುವಿ 300) ಏಳು ಸೀಟುಗಳ ಮಾದರಿಯಾಗಿದೆ. ಬಿ‍ಎಸ್6 ನಿಯಮಗಳಿಗೆ ತಕ್ಕಂತೆ ತಯಾರಿಸಲಾಗಿರುವ ಹೊಸ ಮಹೀಂದ್ರಾ ಟಿಯುವಿ 300ಯನ್ನು 2019ರ ಕೊನೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಎಸ್6 ಎಂಜಿನ್ ಹೊಂದಿರುವ ಮಹೀಂದ್ರಾ ಟಿಯುವಿ 300ಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ಸರಣಿಯ ಎಲ್ಲಾ ವಾಹನಗಳನ್ನು ಅಪ್‍‍ಡೇಟ್ ಮಾಡಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಮಹೀಂದ್ರಾ ಟಿ‍‍ಯುವಿ300

ಇದರ ಜೊತೆಗೆ ಭಾರತದಲ್ಲಿ ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ವಾಹನಗಳನ್ನು ಅಭಿವೃದ್ಧಿಪಡಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಿದ್ಧತೆ ನಡೆಸಿದೆ. ಬಿಡುಗಡೆಯಾದ ನಂತರ ಹೊಸ ಮಹೀಂದ್ರಾ ಟಿಯುವಿ 300 ಫೋರ್ಡ್ ಇಕೋಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New Mahindra TUV300 BS-VI Spied Testing Ahead Of Launch In India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X