ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಬ್ರೆಝಾ ಆವೃತ್ತಿಗೆ ಪೈಪೋಟಿ ನೀಡುತ್ತಿರುವ ಮಹೀಂದ್ರಾ ಎಕ್ಸ್‌ಯುವಿ 300 ಕಾರು ವಿನೂತನ ತಾಂತ್ರಿಕ ವೈಶಿಷ್ಟ್ಯತೆಯಿಂದಾಗಿ ಗಮನಸೆಳೆಯುತ್ತಿದ್ದು, ಆಫ್ ರೋಡ್‌ನಲ್ಲೂ ಹೊಸ ಕಾರಿನ ಪರ್ಫಾಮೆನ್ಸ್ ಉತ್ತಮವಾಗಿರುವುದನ್ನು ಈ ವಿಡಿಯೋದಲ್ಲಿ ನೋಡಿರಿ.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಪೈಪೋಟಿ ನೀಡುತ್ತಿರುವ ಮಹೀಂದ್ರಾ ಎಕ್ಸ್‌ಯುವಿ 300 ಮಾದರಿಯು ಈಗಾಗಲೇ ಟಾಟಾ ನೆಕ್ಸಾನ್ ಕಾರು ಮಾರಾಟ ಪ್ರಮಾಣವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದು, ಹೊಸ ಕಾರಿನಲ್ಲಿ ತಾಂತ್ರಿಕ ಸೌಲಭ್ಯಗಳು ಮತ್ತು ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣವು ಎಸ್‌ಯುವಿ ಪ್ರಿಯರನ್ನು ಸೆಳೆಯದೇ ಇರಲಾರದು.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಜನಪ್ರಿಯ ಟಿವೊಲಿ ಕಾರಿನ ಮಾದರಿಯಲ್ಲೇ ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಕ್ಸ್‌ಯುವಿ 300 ಕಾರನ್ನು ಪರಿಚಯಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಕಾರಿನಲ್ಲಿರುವ ಫೀಚರ್ಸ್‌ಗೆ ಅನುಗುಣವಾಗಿ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತಿ ಕಡಿಮೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ. ಇದಲ್ಲದೇ ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಕೂಡಾ ಎಕ್ಸ್‌ಯುವಿ 300 ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ಆನ್ ರೋಡ್‌ಗಳಲ್ಲಿ ಅಷ್ಟೇ ಅಲ್ಲದೇ ಆಫ್ ರೋಡ್‌ಗಳಲ್ಲೂ ಚಾಲಕರಿಗೆ ಹೊಸ ಅನುಭೂತಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆ ಅನುಗುಣವಾಗಿ ಎಕ್ಸ್‌ಯುವಿ 300 ಕಾರು ಹಲವರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಆಫ್ ರೋಡ್‌ನಲ್ಲಿ ಯಾವುದೇ ಅಡೆತಡೆಯಿಲ್ಲದೇ ಸರಾವಾಗಿ ನುಗ್ಗಬಲ್ಲದೂ ಎನ್ನುವುದಕ್ಕೆ ಈ ವಿಡಿಯೋ ವೀಕ್ಷಿಸಿ.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಇನ್ನು ಹೊಸ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳಿವೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ 300 ಕಾರಿನಲ್ಲಿರಲಿವೆ.

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್‌ಯುವಿ 300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದ್ದು, ಪೆಟ್ರೋಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿವೆ.

MOST READ: ಎಕ್ಸ್‌ಯುವಿ 300 ಪ್ರತಿಸ್ಪರ್ಧಿ ಹ್ಯುಂಡೈ ವೆನ್ಯೂ ಬೆಲೆ ಮಾಹಿತಿ ಸೋರಿಕೆ

ಆಫ್ ರೋಡ್‌‌ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆದ ಮಹೀಂದ್ರಾ ಎಕ್ಸ್‌ಯುವಿ 300

ಈ ಮೂಲಕ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನಕ್ಕೇರಿರುವ ಎಕ್ಸ್‌ಯುವಿ 300 ಮಾದರಿಯು ಇಕೋ ಸ್ಪೋರ್ಟ್ ಮತ್ತು ನೆಕ್ಸಾನ್ ಆವೃತ್ತಿಗಳನ್ನು ಈಗಾಗಲೇ ಹಿಂದಿಕ್ಕಿದ್ದು, ಹ್ಯುಂಡೈ ಬಿಡುಗಡೆ ಮಾಡಲು ನಿರ್ಧರಿಸಿರುವ ವೆನ್ಯೂ ಕಂಪ್ಯಾಕ್ಟ್ ಕಾರು ಎಕ್ಸ್‌ಯುವಿ 300 ಕಾರಿಗೆ ಮುಂಬರುವ ದಿನಗಳಲ್ಲಿ ಹೊಸ ಪೈಪೋಟಿಯಾಗಲಿದೆ ಎನ್ನಲಾಗುತ್ತಿದೆ.

Most Read Articles

Kannada
English summary
Mahindra XUV300 Goes Off-Road. Read in Kannada.
Story first published: Monday, May 20, 2019, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X