ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಮಹೀಂದ್ರಾ ಸಂಸ್ಥೆಯು ಈಗಾಗಲೇ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಈ ಕುರಿತು ಅಧಿಕೃತ ಮಾಹಿತಿ ಬಿಚ್ಚಿಟ್ಟಿರುವ ಮಹೀಂದ್ರಾ ಸಂಸ್ಥೆಯು 7 ಸೀಟರ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಸ್ಯಾಂಗ್‌ಯಾಂಗ್ ಕಾರುಗಳ ಡಿಸೈನ್ ಕುರಿತಾಗಿ ಇತ್ತೀಚೆಗೆ ಯುರೋಪಿನ್ ಮಾಧ್ಯಮ ಸಂಸ್ಥೆಗಳು ಮಾಡಿದ ವರದಿಯಲ್ಲಿ ಮಾತೃಸಂಸ್ಥೆಯಾದ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ಹೊಂದಲಿದೆ ಎಂದು ವರದಿ ಮಾಡಲಾಗಿದ್ದು, ಹೊಸ ಕಾರು 7 ಸೀಟರ್ ವೈಶಿಷ್ಟ್ಯತೆಯೊಂದಿಗೆ ಎಕ್ಸ್‌ಯುವಿ300 ಪ್ಲಸ್ ಅಥವಾ ಎಕ್ಸ್‌ಯುವಿ400 ಹೆಸರಿನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ ಎನ್ನಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ300 ಮಾದರಿಯು 5-ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, 7-ಸೀಟರ್ ಮಾದರಿಗಾಗಿ ಹೊಸ ಕಾರಿನಲ್ಲಿ 3 ನೇ ಸಾಲನ್ನು ವಿಸ್ತರಿಸಲು ಕಾರಿನ ಉದ್ದಳತೆ ಮಹತ್ವದ ಬದಲಾವಣೆ ತರಲಾಗುತ್ತಿದೆಯೆಂತೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಸಬ್ 4 ಮೀಟರ್ ಇರುವ ಎಕ್ಸ್‌ಯುವಿ300 ಕಾರು 7 ಸೀಟರ್ ಮಾದರಿಗಾಗಿ 4.44 ಮೀಟರ್‌ಗೆ ವಿಸ್ತರಿಸಲಾಗುತ್ತಿದ್ದು, ಸ್ಯಾಂಗ್‌ಯಾಂಗ್ ಸಂಸ್ಥೆಯ ಟಿವೊಲಿ ಎಕ್ಸ್ಎಲ್‌ವಿ ಮಾದರಿಯಲ್ಲಿ 3ನೇ ಸಾಲಿನ ಆಸನ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಹ್ಯುಂಡೈ ಕೂಡಾ ತನ್ನ ಜನಪ್ರಿಯ ಆವೃತ್ತಿಯಲ್ಲೂ ಸಹ 7 ಸೀಟರ್ ವರ್ಷನ್ ಅಭಿವೃದ್ದಿಗೊಳಿಸಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಕ್ರೆಟಾ ಕಾರು 5 ಸೀಟರ್ ಮತ್ತು 7 ಸೀಟರ್ ಆಯ್ಕೆಯನ್ನು ಹೊಂದಿರಲಿದೆ. ಇದೇ ಪರಿಕಲ್ಪನೆ ಮೇಲೆ ಎಕ್ಸ್‌ಯುವಿ300 ಮಾದರಿಯನ್ನು 7 ಸೀಟರ್ ಆವೃತ್ತಿಯಾಗಿ ಅಭಿವೃದ್ದಿಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳನ್ನು ಮಾರಾಟ ಮಾಡಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಮಾಹಿತಿಗಳ ಪ್ರಕಾರ ಎಕ್ಸ್‌ಯುವಿ 300 5ಸೀಟರ್ ಆವೃತ್ತಿಗೂ ಮತ್ತು 7 ಸೀಟರ್ ಆವೃತ್ತಿಗೂ ರೂ.1 ಲಕ್ಷದಿಂದ ರೂ.1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಹೊಸ 7 ಸೀಟರ್ ಕಾರು ಬಿಎಸ್-6 ಪ್ರೇರಿತ 1.5-ಲೀಟರ್ ಜಿಡಿಐ ಟರ್ಬೋ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿ ಲಭ್ಯವಾಗಲಿಯೆಂತೆ.

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಆದರೆ 5 ಸೀಟರ್ ಎಕ್ಸ್‌ಯುವಿ300 ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಬಿಡುಗಡೆಯ ಸನಿಹದಲ್ಲಿರುವ ಕಿಯಾ ಸೆಲ್ಟೊಸ್ 7 ಸೀಟರ್, ಹ್ಯುಂಡೈ ಕ್ರೆಟಾ 7 ಸೀಟರ್ ಮತ್ತು ಎಂಜಿ ಹೆಕ್ಟರ್ 7 ಸೀಟರ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಭರ್ಜರಿ ಆಫರ್

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಕ್ಸ್‌ಯುವಿ300 ಕಾರುಗಳು ಒಟ್ಟು ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳನ್ನು ಸಹ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಸಬಹುದಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಇದರಲ್ಲಿ ಟಾಪ್ ಎಂಡ್ ಆವೃತ್ತಿಯಲ್ಲಿ ಮಾತ್ರವೇ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇನ್ನುಳಿದ ಎರಡು ವೆರಿಯೆಂಟ್‌ಗಳಲ್ಲಿ 6 -ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್

ಕಾರಿನಲ್ಲಿ ನೀಡಲಾಗಿರುವ ಫೀಚರ್ಸ್‌ಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದ್ದು, ಮ್ಯಾನುವಲ್ ಕಾರುಗಳು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿವೆ. ಇದರಲ್ಲಿ ಮೊನ್ನೆಯಷ್ಟೇ ಉನ್ನತೀಕರಣ ಹೊಂದಿರುವ ಎಎಂಟಿ ವರ್ಷನ್ ತುಸು ದುಬಾರಿ ಎನ್ನಿಸಲಿದ್ದು, ಆರಂಭಿಕವಾಗಿ ರೂ.11.05 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.12.70 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Mahindra S204 7-seater SUV Confirmed. Read in Kannada.
Story first published: Saturday, September 21, 2019, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X