ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಮಹೀಂದ್ರಾ ಸಂಸ್ಥೆಯು ಕಳೆದ ಫೆಬ್ರುವರಿಯಲ್ಲಿ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿರುವ ಹೊಸ ಕಾರುಗಳಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯನ್ನು ಮಾತ್ರ ನೀಡಲಾಗಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಇದೀಗ ಹೊಸ ಕಾರಿನಲ್ಲಿ ಎಎಂಟಿ(ಆಟೋಮ್ಯಾಟಿಕ್) ವರ್ಷನ್ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಮಹೀಂದ್ರಾ ಸಂಸ್ಥೆಯು ಸದ್ಯ ಎಕ್ಸ್‌ಯುವಿ300 ಮ್ಯಾನುವಲ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಎಎಂಟಿ ವರ್ಷನ್ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸುತ್ತಿದೆ. ಹೀಗಾಗಿ ಹೊಸ ಕಾರು ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹ್ಯುಂಡೈ ವೆನ್ಯೂ ಅಬ್ಬರವನ್ನು ತಗ್ಗಿಸಲು ಎಎಂಟಿ ವರ್ಷನ್ ಬಿಡುಗಡೆಗಾಗಿ ಮಹೀಂದ್ರಾ ಸಂಸ್ಥೆಯು ತುರ್ತು ತಯಾರಿ ನಡೆಯುತ್ತಿದೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಇನ್ನು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಕ್ಸ್‌ಯುವಿ300 ಕಾರುಗಳು ಒಟ್ಟು ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳನ್ನು ಸಹ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಸಬಹುದಾಗಿದೆ. ಆದರೆ ಇದರಲ್ಲಿ ಯಾವುದೇ ಮಾದರಿಯಲ್ಲೂ ಆಟೋಮ್ಯಾಟಿಕ್ ವರ್ಷನ್ ನೀಡಲಾಗಿಲ್ಲ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಹೀಗಾಗಿ ಕಾರಿನಲ್ಲಿ ನೀಡಲಾಗಿರುವ ಫೀಚರ್ಸ್‌ಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದ್ದು, ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿವೆ. ಇದರಲ್ಲಿ ಇದೀಗ ಬಿಡುಗಡೆಯಾಗುತ್ತಿರುವ ಎಎಂಟಿ ವರ್ಷನ್ ತುಸು ದುಬಾರಿ ಎನ್ನಿಸಲಿದ್ದು, ವ್ಯಯಕ್ತಿಕ ಕಾರು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಲಿದೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ. ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದೆ.

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಇದರಲ್ಲಿ ಪೆಟ್ರೋಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌‌ಯುವಿ300 ಡೀಸೆಲ್ ಆಟೋಮ್ಯಾಟಿಕ್

ಹೀಗಾಗಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ವರ್ಷನ್ ಕೂಡಾ ಈ ಮೇಲಿನ ಬಹುತೇಕ ತಾಂತ್ರಿಕ ಅಂಶಗಳನ್ನೇ ಹೊಂದಿರಲಿದ್ದು, ಆಟೋ ಮ್ಯಾಟಿಕ್ ವರ್ಷನ್ ಇಷ್ಟಪಡುವ ಗ್ರಾಹಕರ ಖರೀದಿಗೆ ಸಹಕಾರಿಯಾಗಲಿದೆ ಎನ್ನುವುದು ಮಹೀಂದ್ರಾ ಲೆಕ್ಕಾಚಾರ.

Most Read Articles

Kannada
English summary
Mahindra XUV300 Diesel AMT Launching By The Third Week Of This Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X