ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಕಾರು ಮಾರಾಟದಲ್ಲಿ ಹೊಸ ಮುನ್ನಡೆ ಬರೆಯುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆ ಹೊಸ ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಹೊಸ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಬಿಡುಗಡೆಗೂ ಮುನ್ನವೇ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ದೇಶದ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತಷ್ಟು ವಿನೂತನ ಎಲೆಕ್ಟ್ರಿಕ್ ಕಾರುಗಳನ್ನು ಹೊರತರುವ ಯೋಜನೆಯಲ್ಲಿದ್ದು, ದಕ್ಷಿಣ ಕೊರಿಯಾದ ಆಟೋ ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಒಂದನ್ನು ಸಿದ್ದಗೊಳಿಸಿದೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಮಹೀಂದ್ರಾ 2019ರ ಏಪ್ರಿಲ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ವರ್ಷನ್ ಪರಿಚಯಿಸುವ ಯೋಜನೆಯಲ್ಲಿದ್ದು. ತದನಂತರವಷ್ಟೆ ಸ್ಯಾಂಗ್‌ಯ್ಯಾಂಗ್ ಜೊತೆಗೂಡಿ ನಿರ್ಮಾಣ ಮಾಡಲಾಗಿರುವ ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಎಲೆಕ್ಟ್ರಿಕ್ ಮಾದರಿಯನ್ನು ಹೊರತರಲಿದೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಸಂಸ್ಥೆಯು ಸದ್ಯ ಹೊಸ ಕಾರಿನ ಹೆಸರನ್ನು ಬಹಿರಂಗ ಮಾಡಿಲ್ಲವಾದರೂ ಹೊಸ ಕಾರಿಗೆ ಎಸ್201 ಎನ್ನುವ ಕೋಡ್‍‌ನೆಮ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಕಳೆದ ವಾರ ಬಿಡುಗಡೆಯಾದ ಎಕ್ಸ್‌ಯುವಿ300 ಹೆಸರನ್ನೇ ಹೊಸ ಎಲೆಕ್ಟ್ರಿಕ್ ಕಾರಿಗೂ ಮುಂದುವರಿಸುವ ಸಾಧ್ಯತೆಗಳಿವೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆಯೆಂತೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಇದರಲ್ಲಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ನಂತರ ಸ್ಯಾಂಗ್‌ಯಾಂಗ್ ಎಸ್201 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗಾಗಿ ಆಯ್ದುಕೊಂಡಿದ್ದು, 5 ಸೀಟರ್ ಮಾದರಿಯಲ್ಲಿ ಹೊಸ ಕಾರಿನ ಕ್ಯಾಬಿನ್ ಅಭಿವೃದ್ಧಿ ಮಾಡಿದೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಬ್ಯಾಟರಿ ವೈಶಿಷ್ಟ್ಯತೆ

ಈ ಹಿಂದೆ ಹೊಸ ಎಸ್201 ಹೆಸರಿನ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಮಾಹಿತಿಯನ್ನು ಹಂಚಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು 380ವಿ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 250ಕಿ.ಮಿ ಮೈಲೇಜ್ ರೇಂಜ್ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಮತ್ತೊಮ್ಮೆ ಹೊಸ ಕಾರಿನ ಬ್ಯಾಟರಿ ಬಳಕೆ ಕುರಿತಾಗಿ ಮತ್ತಷ್ಟು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, 250ಕಿ.ಮಿ ಬದಲಾಗಿ 350ಕಿ.ಮಿ ಮತ್ತು400 ಕಿ.ಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿ ಒದಗಿಸುವ ಬಗ್ಗೆ ಸುಳಿವು ನೀಡಿದೆ.

ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಕಾರಿನ ಬೆಲೆಗಳು(ಅಂದಾಜು)

ಭಾರತದಲ್ಲಿ ಸದ್ಯ 437ಕಿ.ಮಿ ಮೈಲೇಜ್ ರೇಂಜ್ ಸಾಮರ್ಥ್ಯದ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ರೂ. 20 ಲಕ್ಷದಿಂದ ರೂ. 22 ಲಕ್ಷ ಬೆಲೆಯೊಂದಿಗೆ ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಅದಕ್ಕಿಂತಲೂ ತುಸು ಕಡಿಮೆ ಮೈಲೇಜ್ ರೇಂಜ್ ಹೊಂದಿರುವ ಮಹೀಂದ್ರಾ ಎಸ್201 ಎಲೆಕ್ಟ್ರಿಕ್ ಕಾರು ರೂ. 14 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Mahindra XUV300 Electric (S210) Promises A Range Of 400km — Details Out! Read in Kannada.
Story first published: Tuesday, February 19, 2019, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X