2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌ನ ಪ್ರಮುಖ ಆಕರ್ಷಣೆಯಾಗಿರುವ ಮಹೀಂದ್ರಾ ಸಂಸ್ಥೆಯು ತನ್ನ ಹೊಸ ರೇಸ್ ಆವೃತ್ತಿಯನ್ನು ಬಹಿರಂಗಗೊಳಿಸಿದ್ದು, 2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌‌ಗಾಗಿ ಈ ಬಾರಿ ಎಕ್ಸ್‌ಯುವಿ300 ಮಾದರಿಯನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಚೆನ್ನೈನಲ್ಲಿ ನಡೆಯಲಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌‌ನ 2019ರ ಆವೃತ್ತಿಗೆ ಮುಂದಿನ ವಾರ ಚಾಲನೆ ಸಿಗಲಿದ್ದು, ಇದಕ್ಕೂ ಮುನ್ನ ಮಹೀಂದ್ರಾ ತನ್ನ ರೇಸ್ ಕಾರ್ ಮಾದರಿಯನ್ನು ಬಹಿರಂಗಪಡಿಸಿದೆ. ಈ ಹಿಂದಿನ 2 ಆವೃತ್ತಿಗಳಲ್ಲಿ ಮಿಂಚಿದ್ದ ಎಕ್ಸ್‌ಯುವಿ500 ಮಾದರಿಯನ್ನು ಕೈಬಿಟ್ಟಿರುವ ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಸಬ್ ಕಂಪ್ಯಾಕ್ಟ್ ವೈಶಿಷ್ಟ್ಯತೆಯ ಎಕ್ಸ್‌ಯುವಿ300 ಮಾದರಿಯನ್ನು ಕಣಕ್ಕಿಳಿಸುತ್ತಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ರೇಸ್ ಆವೃತ್ತಿಯಾಗಿರುವ ಎಕ್ಸ್‌ಯುವಿ300 ಮಾದರಿಯು ಸಾಮಾನ್ಯ ಕಾರಿಗಿಂತಲೂ ಸಾಕಷ್ಟು ವಿಭಿನ್ನವಾಗಿದ್ದು, ಸ್ಪರ್ಧಿಗಳ ಆದ್ಯತೆ ಮೇರೆಗೆ ಕಾರಿನ ಒಳಭಾಗ ಮತ್ತು ಹೊರಭಾಗದ ವೈಶಿಷ್ಟ್ಯತೆಗಳನ್ನು ಸಾಕಷ್ಟು ಬದಲಾವಣೆಗೊಳಿಸಲಾಗಿರುವುದು ಮಹೀಂದ್ರಾ ರೇಸಿಂಗ್ ತಂಡಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಜೊತೆಗೆ ಎಕ್ಸ್‌ಯುವಿ300 ರೇಸ್ ಆವೃತ್ತಿಯಲ್ಲಿ ಹೈ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಹಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಈ ಹಿಂದಿನ ಎಕ್ಸ್‌ಯುವಿ500 ಮಾದರಿಗಿಂತಲೂ ಹಗುರವಾಗಿರುವ ಹೊಸ ಕಾರಿನಿಂದಾಗಿ ಮಹೀಂದ್ರಾ ತಂಡವು ಈ ಬಾರಿ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌‌ನಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌ನಲ್ಲಿ ಭಾಗಿಯಾಗುವುದಕ್ಕೂ ಮುನ್ನ ಪರೀಕ್ಷಾರ್ಥವಾಗಿ ಕಾರು ಮಾಡಿದ ಮಹೀಂದ್ರಾ ರೇಸ್ ತಂಡದ ಸದಸ್ಯರಾದ ಗೌರವ್ ಗಿಲ್ ಮತ್ತು ಅರ್ಮಿತ್ಜ್ ಘೋಷ್ ಅವರು ಉತ್ತಮ ಪ್ರದರ್ಶನ ತೊರುವ ವಿಶ್ವಾಸ ವ್ಯಕ್ತಪಡಿಸಿದ್ದು, ರೇಸಿಂಗ್ ಟೆಕ್ನಾಲಜಿಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಆರ್ಕಾ ಮೋಟಾರ್‌ಸ್ಪೋರ್ಟ್ ಸಂಸ್ಥೆಯು ಎಕ್ಸ್‌ಯುವಿ300 ರೇಸ್ ಆವೃತ್ತಿಯನ್ನು ಸಿದ್ದಗೊಳಿಸಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಇದರಲ್ಲಿ ಪೆಟ್ರೋಲ್ ಟರ್ಬೋ ಮಾದರಿಯನ್ನು ಗೌರವ್ ಗಿಲ್ ಚಾಲನೆ ಮಾಡಲಿದ್ದರೆ ಡೀಸೆಲ್ ಆವೃತ್ತಿಯ ಚಾಲನೆಯ ಜವಾಬ್ದಾರಿಯನ್ನು ಅರ್ಮಿತ್ಜ್ ಘೋಷ್ ಅವರಿಗೆ ನೀಡಲಾಗಿದೆ. ಎರಡು ಆವೃತ್ತಿಯು ಸಹ ಒಂದೇ ಮಾದರಿಯ ತಾಂತ್ರಿಕ ಅಂಶಗಳನ್ನು ಹೊಂದಿದ್ದರೂ ಸಹ ಗೌರವ್ ಅವರ ಕಾರು ಜೆಕೆ ಟೈರ್ ಸೌಲಭ್ಯ ಹೊಂದಲಿದ್ದರೆ ಘೋಷ್ ಕಾರಿನಲ್ಲಿ ಎಂಆರ್‌ಎಫ್ ಟೈರ್ ಬಳಕೆ ಮಾಡಲಾಗಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಈ ಬಾರಿ ಮಹೀಂದ್ರಾ ರೇಸ್ ಕಾರುಗಳ ಬಣ್ಣದ ಆಯ್ಕೆಯಲ್ಲಿ ತುಸು ಬದಲಾವಣೆಗಳಾಗಿದ್ದು, ಎರಡು ಕಾರುಗಳಲ್ಲೂ ಒಂದೇ ಮಾದರಿಯ ಸಿಲ್ವರ್ ಮತ್ತು ಆರೇಂಜ್ ಡ್ಯುಯಲ್ ಬಣ್ಣದೊಂದಿಗೆ ರೇಸಿಂಗ್ ಸೀಟು, ಫೋರ್ ಪಾಯಿಂಟ್ ರೇಸಿಂಗ್ ಸಿಲ್ಟ್ ಬೆಲ್ಟ್, ರೋಲ್-ಕೇಸ್, ರೇಸ್ ಸ್ಟಿರಿಂಗ್ ವೀಲ್ಹ್, ಅಲ್ಯುಮಿನಿಯಂ ಕಂಟ್ರೋಲ್ ಪಾಡ್‌ಗಳನ್ನು ಜೋಡಿಸಲಾಗಿದೆ.

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿ ಹೊಸ ಎಕ್ಸ್‌ಯುವಿ300 ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯು 1.2-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಎಂಜಿನ್ ಹೊಂದಿದರೆ ಡಿಸೇಲ್ ಕಾರು ಮಾದರಿಯು 1.5-ಲೀಟರ್ ಟರ್ಬೋ ಎಂಜಿನ್ ವೈಶಿಷ್ಟ್ಯತೆಯೊಂದಿಗೆ ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್ ಹಿಂದಿರುಗಿಸಬಲ್ಲದು.

MOST READ: ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

2019ರ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌‌ಗೆ ಮಹೀಂದ್ರಾ ಎಕ್ಸ್‌ಯುವಿ300 ರೆಡಿ..!

ಈ ಮೂಲಕ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಷ್‌‌ನ 2019ರ ಆವೃತ್ತಿಗೆ ಮೊದಲ ಬಾರಿಗೆ ಲಗ್ಗೆಯಿಡುತ್ತಿರುವ ಎಕ್ಸ್‌ಯುವಿ300 ಮಾದರಿಯು ಈ ಬಾರಿ ಉತ್ತಮ ಪ್ರದರ್ಶನ ತೊರುವ ವಿಶ್ವಾಸದಲ್ಲಿದ್ದು, ಈ ಹಿಂದಿನ ಸ್ಪರ್ಧೆಗಳಲ್ಲಿ ಭಾರೀ ಸದ್ದು ಮಾಡಿದ್ದ ಸೂಪರ್ ಎಕ್ಸ್‌ಯುವಿ500 ಮತ್ತು ಸೂಪರ್ ಥಾರ್‌ಗಿಂತಲೂ ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಗೆ ಟಕ್ಕರ್ ನೀಡಲು ಸಜ್ಜಾಗಿದೆ.

Source: Sirish Chandran FB page

Most Read Articles

Kannada
English summary
Check Out Gaurav Gill's Rally-Spec Mahindra XUV300. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X