ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ300ನದ್ದೆ ಸದ್ದು

ಜೂನ್ 2019ರ ಕಾರು ಮಾರಾಟದಲ್ಲಿ ಹಲವಾರು ಸಂಸ್ಥೆಗಳು ಲಾಭದ ಅಂಶದಲ್ಲಿ ಮಾರಾಟವನ್ನು ಕಾಣದಿದ್ದಲ್ಲಿ, ಮಹೀಂದ್ರಾ ಸಂಸ್ಥೆಯು ಮಾತ್ರ 2018ರ ಜೂನ್ ತಿಂಗಳಿನಲ್ಲಿ 16,454 ಯೂನಿಟ್ ಮಾರಾಟ ಮಾಡಿ ಈ ವರ್ಷದ ಜೂನ್‍ನಲ್ಲಿ 17,762 ಯೂನಿಟ್ ಮಾರಾಟ ಮಾಡಿದೆ. ಹೀಗಾಗಿ ತಮ್ಮ ಎಸ್‍ಯುವಿ ಕಾರುಗಳಿಂದ ಮಾರಕಟ್ಟೆಯಲ್ಲಿ ಜನಪ್ರೀಯತೆಯನ್ನು ಪಡೆದ ಮಹೀಂದ್ರಾ ಸಂಸ್ಥೆಯು ಈ ಜೂನ್‍ನಲ್ಲಿ ಶೇಕಡ 8ರಷ್ಟು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಜೂನ್ ತಿಂಗಳ ಮಹೀಂದ್ರಾ ಕಾರುಗಳ ಮಾರಾಟದಲ್ಲಿ 5188 ಯೂನಿಟ್ ಬೊಲೆರೊ ಕಾರು ಮಾರಾಟಗೊಂಡು ಮೊದಲನೆಯ ಸ್ಥಾನವನ್ನು ಪಡೆದುಕೊಂದಿದ್ದು, ಎರಡನೆಯ ಸ್ಥಾನದಲ್ಲಿ 4,769 ಯೂನಿಟ್ ಮಾರಾಟವಾದ ಎಕ್ಸ್‌ಯುವಿ 300 ಇದೆ. ಮತ್ತು ಮೂರನೆಯ ಸ್ಥಾನದಲ್ಲಿ 1,700 ಯೂನಿಟ್ ಮಾರಾಟಗೊಂಡ ಸ್ಕಾರ್ಪಿಯೋ ಎಸ್‍ಯುವಿ ಇದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ, ಇದೆ ವರ್ಷದ ಫೆಬ್ರುವರಿ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ 300 ಕಾರುಗಳು ಅತೀ ಬೇಗ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದೆ. ಏಕೆಂದರೆ ಈ ಕಾರು 10,000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಜೂನ್ ತಿಂಗಳ ಕಾರು ಮಾರಾಟದಲ್ಲಿ ತನ್ನ ಎದುರಾಳಿಗಳಾದ ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಒಕೋಸ್ಪೋರ್ಟ್ ಕಾರುಗಳನ್ನು ಹಿಂದಿಕ್ಕಿದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಇನ್ನು ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಕಾರುಗಳು ಸಬ್-4-ಮೀಟರ್ ಎಸ್‍ಯುವಿ ಸೆಗ್ಮೆಂಟ್‍ನಲ್ಲಿ ಮುನ್ನುಗ್ಗುತ್ತಿದ್ದು, ಮಹೀಂದ್ರಾ ಎಕ್ಸ್‌ಯುವಿ 300 ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಹೀಗಿರುವಾಗ ಮಹೀಂದ್ರಾ ತಮ್ಮ ಸಂಸ್ಥೆಯಲ್ಲಿನ ಕಾರುಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರುಗಳ ಪೈಕಿ ಕಾರುಗಳು ಕಾರು ಮೊದಲನೆಯ ಸ್ಥಾನವನ್ನು ಪಡೆಯಲಿದೆ ಎಂಬ ಭರವಸೆಯಲ್ಲಿದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ದೇಶಿಯ ಮಾರುಕಟ್ಟೆಯಲ್ಲಿ ಎಎಂಟಿ ವರ್ಷನ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಅನುಸಾರ ಮಹೀಂದ್ರಾ ಸಂಸ್ಥೆಯು ಎಕ್ಸ್‌‌ಯುವಿ300 ಕಾರಿನ ಡೀಸೆಲ್ ಮಾದರಿಯಲ್ಲಿ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಮ್ಯಾನುವಲ್ ವರ್ಷನ್ ಎಕ್ಸ್‌‌ಯುವಿ300 ಕಾರಿಗಿಂತಲೂ ಬೆಲೆಯಲ್ಲಿ ರೂ. 55,000 ಹೆಚ್ಚಾಗಿದೆ. ಹಾಗೆಯೆ ಎಎಂಟಿ ಮಾದರಿಯ ಎಕ್ಸ್‌‌ಯುವಿ300 ಕಾರುಗಳು ಈ ಕಾರಿನ ಡಬ್ಲ್ಯೂ8 ಹಾಗು ಡಬ್ಲ್ಯೂ8 (ಆಪ್ಷನಲ್ ಪ್ಯಾಕ್) ಎಂಬ ವೇರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಬೆಲೆ ಮತ್ತು ಬಣ್ಣಗಳು

ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರುಗಳು ರೂ. 11.05 ಲಕ್ಷ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಪರ್ಲ್ ವೈಟ್, ಆಕ್ವಾಮರಿನ್ ಮತ್ತು ರೆಡ್ ರೇಂಜ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಕಾರಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಮಹೀಂದ್ರಾ ಡೀಲರ್‍‍ಗಳ ಬಳಿ ಬುಕ್ಕಿಂಗ್ ಅನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕೇವಲ ಗೇರ್‍‍ಬಾಕ್ಸ್ ನಲ್ಲಿ ಮಾತ್ರ ಬದಲಾವಣೆಯನ್ನು ಪಡೆದಿರುವ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದೆ. ಹೀಗಾಗಿ ಡ್ರೈವಿಂಗ್ ವೇಳೆ ಈ ಕಾರು ಉತ್ತಮ ಆಕ್ಸಿಲರೇಷನ್ ಮತ್ತು ಓವರ್‍‍ಟೇಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ.

ಇವುಗಳ ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಬೊಲೆರೊ ನಂತರ ಮಹೀಂದ್ರಾ ಸಂಸ್ಥೆಯ ಕಾರುಗಳಲ್ಲಿ ಎಕ್ಸ್‌ಯುವಿ 300ನದ್ದೆ ಸದ್ದು

ಮಹೀಂದ್ರಾ ಎಕ್ಸ್‌‌ಯುವಿ300 ಎಎಂಟಿ ವರ್ಷನ್ ಕಾರು ಟ್ರಾಫಿಕ್ ಭರಿತ ನಗರ ಪ್ರದೇಶಗಳಲ್ಲಿ ಡ್ರೈವಿಂಗ್ ಮಾಡಲು ಬಹು ಸುಲಭವಾಗಿದ್ದು, ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು ನಗರ ನಿವಾಸಿಗಳು, ಮತ್ತು ಮಹಿಳೆಯರಿಗೆ ಡ್ರೈವಿಂಗ್ ಉತ್ತಮ ಅನುಭವ ನೀಡುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

Most Read Articles

Kannada
English summary
Mahindra XUV300 To Be Best Selling Model In Brand Soon. Read In Kannada
Story first published: Saturday, July 20, 2019, 14:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X