ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಮಹೀಂದ್ರಾ ಸಂಸ್ಥೆಯ ಎಕ್ಸ್‌ಯುವಿ500 ಕಾರಿಗೆ ಟಕ್ಕರ್ ನೀಡಲು ತಮ್ಮ ಹ್ಯಾರಿಯರ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಇದೀಗ ಇದೇ ಸೆಗ್ಮೆಂಟ್‍ನಲ್ಲಿ ಹ್ಯಾರಿಯರ್ ಮತ್ತು ಎಕ್ಸ್‌ಯುವಿ500 ಕಾರುಗಳಿಗೆ ಪೈಪೋಟಿ ನೀಡಲು ಎಂಜಿ ಹೆಕ್ಟರ್ ಬಿಡುಗಡೆಯಾಗಿದೆ. ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈಶಿಷ್ಟ್ಯತೆಗಳಿರುವ ಕಾರಣ ಗ್ರಾಹಕರು ಇವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಆದರೆ ಮಹೀಂದ್ರಾ ಎಕ್ಸ್‌ಯುವಿ500 ಕಾರಿನಲ್ಲಿ ಎಲ್ಲಾ ಮಧ್ಯಮ ವರ್ಗದ ಐಷಾರಾಮಿ ಸೌಲತ್ತುಗಳು ಇದ್ದರು ಸಹ ಇದೀಗ ಸಂಸ್ಥೆಯು ಎಕ್ಸ್‌ಯುವಿ500 ಈ ಬಾರಿ ಟಾಪ್ ಎಂಡ್ ಮಾದರಿಯ ವಾಹನಗಳನ್ನು ಮಾತ್ರ ಅಪ್‍‍ಡೇಟ್ ಮಾಡಲಾಗಿದೆ. ಆಪಲ್ ಕಾರ್‍‍ಪ್ಲೇ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಸೌಲಭ್ಯವನ್ನು ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 500 ಕಾರಿನಲ್ಲಿ ಗ್ರಾಹಕರು ಇದೀಗ ಪಡೆಯಬಹುದಾಗಿದೆ. ಈ ಅಪ್ಡೇಟ್ ನೊಂದಿಗೆ ಈ ವಾಹನದಲ್ಲಿರುವ ಟಚ್‍‍ಸ್ಕ್ರೀನ್‍‍ಸಿಸ್ಟಂ ಗಳಿಗಾಗಿ ಆಂಡ್ರಾಯಿಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಎರಡನ್ನೂ ನೀಡಲಾಗಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಆಂಡ್ರಾಯಿಡ್ ಮತ್ತು ಆಪಲ್ ಐಒ‍ಎಸ್ ಈಗ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್‍‍ಗಳಲ್ಲಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂಗಳಾಗಿವೆ. ಇದರ ಜೊತೆಗೆ ಐಫೋನ್ ಗ್ರಾಹಕರು ತಮ್ಮ ಫೋನ್‍‍ಗಳನ್ನು ಬಳಸಿ ಈ ವಾಹನದಲ್ಲಿರುವ ಇನ್ಫೋಟೇನ್ಮೆಂಟ್ ಸಿಸ್ಟಂಗಳನ್ನು ಆಪರೇಟ್ ಮಾಡಬಹುದಾಗಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಆಪಲ್ ಕಾರ್ ಪ್ಲೇನಿಂದ ನ್ಯಾವಿಗೇಶನ್, ಮೆಸೆಜಿಂಗ್, ಆಪ್ ಆಕ್ಸೆಸ್ ಮತ್ತು ಕಾಲಿಂಗ್ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸಬಹುದು. ಮಹೀಂದ್ರಾ ಕಂಪನಿಯು ಆಪಲ್ ಕಾರ್ ಪ್ಲೇ ಸೌಲಭ್ಯವನ್ನುಟಾಪ್ ಮಾದರಿಯ ಡಬ್ಲ್ಯು11 (ಒ) ವಾಹನಗಳಲ್ಲಿ ಮಾತ್ರವೇ ಅಳವಡಿಸಲಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಆಂಡ್ರಾಯಿಡ್ ಆಟೋ ಸೌಲಭ್ಯವನ್ನು ಡಬ್ಲ್ಯು7 ಸರಣಿಯ ಎಲ್ಲಾ ಮಾದರಿಗಳಲ್ಲೂ ಅಳವಡಿಸಲಾಗಿತ್ತು. ಮಹೀಂದ್ರಾ ಎಕ್ಸ್‌ಯುವಿ 500 ವಾಹನವನ್ನು ಭಾರತದಲ್ಲಿ - 11 ಡೀಸೆಲ್, 1 ಪೆಟ್ರೋಲ್ - ಸೇರಿದಂತೆ ಒಟ್ಟು 12 ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 5 ಡೀಸೆಲ್ ಮಾದರಿಗಳು ಆಟೋಮ್ಯಾಟಿಕ್ ಆಗಿದ್ದರೆ, ಉಳಿದ ಡೀಸೆಲ್ ಮಾದರಿಗಳು ಮ್ಯಾನುವಲ್ ಆಗಿವೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಪೆಟ್ರೋಲ್ ಮಾದರಿಯ ಎಕ್ಸ್‌ಯುವಿ 500 ವಾಹನವು ಸಿಂಗಲ್, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯಾಗಿದ್ದರೆ, ಡೀಸೆಲ್ ಮಾದರಿಯ ವಾಹನಗಳು ಫ್ರಂಟ್ ವ್ಹೀಲ್ ಮತ್ತು ಆಲ್ ಫೋರ್ ವ್ಹೀಲ್ ಡ್ರೈವ್ ಸೌಲಭ್ಯಗಳನ್ನು ಹೊಂದಿವೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಮಹೀಂದ್ರಾ ಎಕ್ಸ್‌ಯುವಿ 500 ಡೀಸೆಲ್ ವಾಹನವು 2.2 ಲೀಟರ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಟರ್ಬೊ ಚಾರ್ಜ್ ಯೂನಿಟ್ ನೊಂದಿಗೆ 154 ಬಿ‍‍ಹೆಚ್‍‍ಪಿ ಪೀಕ್ ಪವರ್ ಮತ್ತು 360 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಗಳಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಲೇ‍ಔ‍‍ಟ್‍‍ಗಳನ್ನು ಹೊಂದಿವೆ.

ಇನ್ನು ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ವಾಹನವು 2.2 ಲೀಟರ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಟರ್ಬೊ ಚಾರ್ಜ್ ಯೂನಿಟ್ ನೊಂದಿಗೆ 140 ಬಿ‍‍ಹೆಚ್‍‍ಪಿ ಪೀಕ್ ಪವರ್ ಮತ್ತು 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್‍‍ಗಳಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಹೊಂದಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

2011ರಲ್ಲಿ ಬಿಡುಗಡೆಯಾದ ಈ ವಾಹನವು ಕಳೆದ ವರ್ಷ ಹೊಸ ವಿನ್ಯಾಸವನ್ನು ಪಡೆದಿತ್ತು. ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗಿ ಜನಪ್ರಿಯತೆಯನ್ನು ಪಡೆದಿದೆ. ಈಗ ಜೀಪ್ ಕಾಂಪಸ್ ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಟಾಟಾ ಹ್ಯಾರಿಯರ್ ವಾಹನಗಳಿಂದ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಮಹೀಂದ್ರಾ ಕಂಪನಿಯು ಎರಡನೇ ತಲೆಮಾರಿನ ಹೊಸ ಎಕ್ಸ್‌ಯುವಿ 500 ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಎರಡನೇ ತಲೆಮಾರಿನ ವಾಹನವು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ತನ್ನ ಪ್ಲಾಟ್‍‍ಫಾರಂ ಅನ್ನು ಸ್ಯಾಂಗ್‍‍ಯೊಂಗ್ ಕೊರಾಂಡೊ ಕಂಪನಿಯ ಜೊತೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಹೊಸ ಅಪ್ಡೇಟ್ ಪಡೆದ ಮಹೀಂದ್ರಾ ಎಕ್ಸ್‌ಯುವಿ500 ಕಾರು

ಎರಡನೇ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ವಾಹನದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ಅನುಸಾರವಾಗಿ ಅಭಿವೃದ್ಧಿಪಡಿಸಲಾಗುವುದು. ಮಹೀಂದ್ರಾ ತನ್ನ ಮೊದಲ ಮೊನೊಕಾಕ್ ವಾಹನದ ವಿನ್ಯಾಸವನ್ನು ಬದಲಾಯಿಸದೆ, ಹಾಗೆಯೇ ಮುಂದುವರೆಸುವ ನಿರೀಕ್ಷೆಯಿದ್ದು, ಹೆಚ್ಚು ಗಾತ್ರವನ್ನು ಹೊಂದುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra XUV500 Apple CarPlay Feature Available On W11 Variant. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X