ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಭಾರತದ ಆಟೋಮೊಬೈಲ್ ಕಂಪನಿಯಾದ ಮಹೀಂದ್ರಾ ತನ್ನ ಸರಣಿಯಲ್ಲಿರುವ ಬಿ‍ಎಸ್ 6 ವಾಹನಗಳನ್ನು ಪರೀಕ್ಷಿಸುವಲ್ಲಿ ನಿರತವಾಗಿದೆ. ಮಹೀಂದ್ರಾ ಕಂಪನಿಯು ಇತ್ತೀಚಿಗೆ ಎಕ್ಸ್‌ಯುವಿ 500 ಎಸ್‍‍ಯುವಿಯನ್ನು ಸ್ಪಾಟ್ ಟೆಸ್ಟ್ ಮಾಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಜಿಗ್‍‍ವ್ಹೀಲ್ಸ್ ಬಿಡುಗಡೆಗೊಳಿಸಿರುವ ಚಿತ್ರದಲ್ಲಿ ಬಿ‍ಎಸ್ 6 ಡೀಸೆಲ್ ಎಂದು ಫ್ಯೂಯಲ್ ಟ್ಯಾಂಕ್ ಲಿಡ್ ಮೇಲೆ ಬರೆಯಲಾಗಿರುವ ಎಕ್ಸ್‌ಯುವಿ 500 ವಾಹನವನ್ನು ಸ್ಪಾಟ್ ಟೆಸ್ಟ್ ಮಾಡುತ್ತಿರುವುದನ್ನು ಕಾಣಬಹುದು. ಈ ಪರೀಕ್ಷಾ ಮಾದರಿಯಲ್ಲಿ ಮಹೀಂದ್ರಾ ಕಂಪನಿಯ ಹೊಸ ಬಿ‍ಎಸ್ 6ಗೆ ಹೊಂದಿಕೊಳ್ಳುವ 2.0 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಈ ಹೊಸ ಎಂಜಿನ್ ಅನ್ನು ಮಹೀಂದ್ರಾ ಕಂಪನಿಯ ಇತರ ವಾಹನಗಳಾದ ಹೊಸ ತಲೆಮಾರಿನ ಎಕ್ಸ್‌ಯುವಿ 500, 2020ರ ಥಾರ್ ಹಾಗೂ ಹೊಸ ತಲೆಮಾರಿನ ಸ್ಕಾರ್ಪಿಯೊಗಳಲ್ಲಿ ಅಳವಡಿಸಲಾಗುವುದು. ಮಹೀಂದ್ರಾ ಕಂಪನಿಯು ಅಭಿವೃದ್ಧಿಪಡಿಸಿರುವ ಈ ಹೊಸ 2.0 ಲೀಟರಿನ ಡೀಸೆಲ್ ಎಂಜಿನ್ ಅನ್ನು ವಿವಿಧ ರೀತಿಯಲ್ಲಿ ಟ್ಯೂನ್ ಮಾಡಬಹುದಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 500ನಲ್ಲಿ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 155 ಬಿ‍‍ಹೆಚ್‍‍ಪಿ ಪವರ್ ಹಾಗೂ 360 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ 2.0 ಲೀಟರಿನ ಎಂಜಿನ್ ಈ ಎಂಜಿನ್‍‍ಗಿಂತ ಹೆಚ್ಚಿನ ಪ್ರಮಾಣದ ಪವರ್ ಉತ್ಪಾದಿಸುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಮಹೀಂದ್ರಾ ಬಿ‍ಎಸ್6 ಡೀಸೆಲ್ ಎಂಜಿನ್‍ ಜೊತೆಗೆ 2.0 ಲೀಟರಿನ ಪೆಟ್ರೋಲ್ ಎಂಜಿನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಹೊಸ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಲೆಮಾರಿನ ಎಕ್ಸ್‌ಯುವಿ 500 ಹಾಗೂ ಹೊಸ ಸ್ಕಾರ್ಪಿಯೊ ಕಾರಿನಲ್ಲಿ ಅಳವಡಿಸುವ ಸಾಧ್ಯತೆಗಳಿವೆ. ಆದರೆ ಮಹೀಂದ್ರಾ ಕಂಪನಿಯು ಇತ್ತೀಚಿಗಷ್ಟೇ ಎಕ್ಸ್‌ಯುವಿ 500ನ ಪೆಟ್ರೋಲ್ ಆವೃತ್ತಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರಣಕ್ಕಾಗಿ ಬಿ‍ಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ಪಾಟ್ ಟೆಸ್ಟ್ ಮಾಡುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಎಕ್ಸ್‌ಯುವಿ 500ಯ ಬಿ‍ಎಸ್ 6 ಎಂಜಿನ್ ಅಭಿವೃದ್ಧಿಪಡಿಸುತ್ತಿರುವುದರ ಜೊತೆಗೆ, ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಎಕ್ಸ್‌ಯುವಿ 500 ವಾಹನವನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 500 ಸುಮಾರು 9 ವರ್ಷಗಳಿಂದ ಮಾರುಕಟ್ಟೆಯಲ್ಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಹೊಸ ತಲೆಮಾರಿನ ಎಕ್ಸ್‌ಯುವಿ 500 ಅನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುವುದು. ಹೊಸ ತಲೆಮಾರಿನ ಎಕ್ಸ್‌ಯುವಿ 500 ಕಾರಿನ ಎಕ್ಸ್ ಟಿರಿಯರ್‍‍ನ ಮುಂಭಾಗದಲ್ಲಿ ಹೊಸ ಪರಿಷ್ಕೃತ ಬಂಪರ್‍‍ಗಳು, ಹೆಡ್‍‍ಲೈಟ್ಸ್ ಹಾಗೂ ಹೊಸ ಗ್ರಿಲ್‍‍ಗಳಿರಲಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಹಿಂಭಾಗದಲ್ಲಿಯೂ ಸಹ ಕೆಲವು ಸಣ್ಣ ಪುಟ್ಟ ಬದಲಾವಣೆಗಳಾಗಲಿದ್ದು, ಹೊಸ ಟೇಲ್ ಲ್ಯಾಂಪ್ ಅಳವಡಿಸಲಾಗುವುದು. ಇದರ ಜೊತೆಗೆ ಇಂಟಿರಿಯರ್‍‍ನಲ್ಲಿ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇ ಹೊಂದಿರುವ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಮಹೀಂದ್ರಾ ಕಂಪನಿಯು ಫೋರ್ಡ್ ಕಂಪನಿಯ ಜೊತೆಗೆ ಸಹಭಾಗಿತ್ವವನ್ನು ಹೊಂದಿರಲಿದೆ. ಇದರಿಂದಾಗಿ ಹೊಸ ತಲೆಮಾರಿನ ಎಕ್ಸ್‌ಯುವಿ 500 ಫೋರ್ಡ್ ಸರಣಿಯ ಎಸ್‍‍ಯುವಿಯಾಗಿರಲಿದೆ. ಬಿಡುಗಡೆಯಾದ ನಂತರ ಎಕ್ಸ್‌ಯುವಿ 500 ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್ ಹಾಗೂ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ನಿಧಾನಗತಿಯಲ್ಲಿರುವ ಆಟೋಮೊಬೈಲ್ ಉದ್ಯಮವನ್ನು ಮೇಲೆತ್ತಲು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6ಗೆ ಬದಲಿಸುತ್ತಿವೆ. ಇದರಿಂದಾದರೂ ತಮ್ಮ ಮಾರಾಟದಲ್ಲಿ ಏರಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍ಎಸ್ 6 ಎಕ್ಸ್‌ಯುವಿ 500

ಮಹೀಂದ್ರಾ ಕಂಪನಿಯು ಇದರಲ್ಲಿ ಮುಂಚೂಣಿಯಲ್ಲಿದ್ದು, ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಪರೀಕ್ಷಿಸುತ್ತಿದೆ. ಮಹೀಂದ್ರಾ ಹಾಗೂ ಫೋರ್ಡ್ ಕಂಪನಿಗಳ ನಡುವಿನ ಸಹಭಾಗಿತ್ವದಿಂದಾಗಿ ಮಹೀಂದ್ರಾ ಕಂಪನಿಯ ವಾಹನಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra XUV500 BS-VI Spied Testing Ahead Of Launch Next Year: Spy Pics & Details - Read in Kannada
Story first published: Friday, October 18, 2019, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X