ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ತನ್ನ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವ ಬದಲಾವಣೆ ತಂದಿರುವ ಮಾರುತಿ ಸುಜುಕಿ ಸಂಸ್ಥೆಯು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಇದೀಗ ಬಿಎಸ್-6 ವಾಹನಗಳ ಖರೀದಿ ಮೇಲೂ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಕಳೆದ ತಿಂಗಳು ದಸರಾ ಸಂಭ್ರಮಕ್ಕಾಗಿ ಆಯ್ದು ಕಾರುಗಳ ಮೇಲೆ ಭರ್ಜರಿ ಆಫರ್ ನೀಡಿದ್ದ ಮಾರುತಿ ಸುಜುಕಿಯು ಇದೀಗ ದೀಪಾವಳಿ ಆಫರ್ ಘೋಷಣೆ ಮಾಡಿದ್ದು, ಅದರಲ್ಲೂ ಬಿಎಸ್-6 ವೈಶಿಷ್ಟ್ಯತೆಯ ಆಲ್ಟೊ ಮೇಲಿನ ಆಫರ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಎಂಟ್ರಿ ಲೆವಲ್ ಕಾರುಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ಆಲ್ಟೊ ಖರೀದಿಗೆ ಸುವರ್ಣಾವಕಾಶ ಎನ್ನಬಹುದಾಗಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಬೆಲೆಯು ಲಭ್ಯವಿರಲಿದೆ.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಆಲ್ಟೊ ಖರೀದಿ ಮೇಲೆ ರೂ.40 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.20 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ.5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಇನ್ನು ಹೆಚ್ಚಿನ ಆಫರ್‌ಗಳನ್ನು ಪಡೆದುಕೊಳ್ಳಬಹುದು.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಇನ್ನು ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-6 ಕಾರುಗಳ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಇದುವರೆಗೂ ಸುಮಾರು 2 ಲಕ್ಷ ಬಿಎಸ್-6 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ ಆಲ್ಟೊ ಕೂಡಾ ಒಂದು.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಇನ್ನು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಎಂಜಿನ್ ಕಾರುಗಳನ್ನು ಅಭಿವೃದ್ದಿಪಡಿಸುವತ್ತ ಯೋಜನೆ ರೂಪಿಸಿದ್ದು, ಮಾರುತಿ ಸುಜುಕಿ ಮಾತ್ರ ಬಿಎಸ್-6 ನಿಯಮವನ್ನು ಬಹುಬೇಗ ಜಾರಿಗೆ ತಂದಿರುವುದಲ್ಲದೇ ಅತಿ ಕಡಿಮೆ ಅವಧಿಯಲ್ಲಿ 2 ಲಕ್ಷ ಕಾರುಗಳ ಮಾರಾಟ ಗುರಿ ಸಾಧಿಸಿದೆ. ಹೀಗಾಗಿ ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ನಿಯಮವು ಕಡ್ಡಾಯವಾಗುವ ವೇಳೆಗೆ ಮಾರುತಿ ಸುಜುಕಿಯು 4 ಲಕ್ಷ ಕಾರುಗಳನ್ನು ಮಾಡುವ ವಿಶ್ವಾಸದಲ್ಲಿದೆ.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್ ವರ್ಷನ್‌ಗಳಲ್ಲಿ ಮಾತ್ರವೇ ಬಿಎಸ್-6 ಎಂಜಿನ್ ಒದಗಿಸುತ್ತಿದ್ದು, 2020ರ ಏಪ್ರಿಲ್ 1ರ ನಂತರವೇ ಡೀಸೆಲ್ ಎಂಜಿನ್ ಕಾರುಗಳನ್ನು ಹೊಸ ನಿಯಮ ಅನುಸಾರ ಬಿಡುಗಡೆ ಮಾಡಲಿದೆ.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಬಿಎಸ್-6 ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತಲೂ ರೂ.15 ಸಾವಿರದಿಂದ ರೂ.20 ಸಾವಿರದಷ್ಟು ದುಬಾರಿಯಾಗಿದ್ದರೆ ಡೀಸೆಲ್ ಎಂಜಿನ್ ಮಾತ್ರ ಪ್ರಸ್ತುತ ಮಾರುಕಟ್ಟೆಯಲ್ಲಿನ ಬಿಎಸ್-4 ಕಾರುಗಳಿಂತಲೂ ರೂ.90 ಸಾವಿರದಿಂದ ರೂ.2.50 ಲಕ್ಷದಷ್ಟು ದುಬಾರಿಯಾಗಲಿವೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಇದೇ ಕಾರಣಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಯ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸುವ ಯೋಜನೆಯನ್ನು ಕೈಬಿಡಲು ನಿರ್ಧರಿಸಿದ್ದು, ಕೇವಲ ಪೆಟ್ರೋಲ್, ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಒತ್ತುನೀಡಲು ನಿರ್ಧರಿಸಿದೆ.

MOST READ: ಕೊನೆಗೂ ಭಾರೀ ದಂಡಕ್ಕೆ ಹೆದರಿದ ಬೆಂಗಳೂರಿನ ವಾಹನ ಸವಾರರು

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯು 1.3-ಲೀಟರ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಮಾಹಿತಿಗಳ ಪ್ರಕಾರ 1.3-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ 1.5-ಲೀಟರ್ ಎಂಜಿನ್ ಅನ್ನು ಮಾತ್ರವೇ ಹೊಸ ನಿಯಮದಂತೆ ಉನ್ನತೀಕರಿಸಿ ಹೈ ಎಂಡ್ ಕಾರುಗಳಲ್ಲಿ ಮಾತ್ರವೇ ಮಾರಾಟ ಮಾಡಲಿದೆಯೆಂತೆ.

MOST READ: ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಇದಕ್ಕಾಗಿಯೇ ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಭರ್ಜರಿ ಆಫರ್‌ಗಳನ್ನು ನೀಡುತ್ತಿರುವ ಮಾರುತಿ ಸುಜುಕಿಯು 2020ರ ಮಾರ್ಚ್ ಹೊತ್ತಿಗೆ ಸಂಪೂರ್ಣವಾಗಿ ಬಿಎಸ್-6 ಕಾರುಗಳನ್ನು ಮಾರಾಟ ಮಾಡುವ ಗುರಿಹೊಂದಿದೆ.

ಬಿಎಸ್-6 ಆಲ್ಟೊ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಭರ್ಜರಿ ಆಫರ್‌ಗಳನ್ನು ನೀಡುತ್ತಿರುವ ಮಾರುತಿ ಸುಜುಕಿಯು 2020ರ ಮಾರ್ಚ್ ಹೊತ್ತಿಗೆ ಸಂಪೂರ್ಣವಾಗಿ ಬಿಎಸ್-6 ಕಾರುಗಳನ್ನು ಮಾರಾಟ ಮಾಡುವ ಗುರಿಹೊಂದಿದೆ.

Most Read Articles

Kannada
English summary
Maruti Suzuki Alto BS6 With Rs. 60,000 Discounts In October 2019. Read in Kannada.
Story first published: Tuesday, October 15, 2019, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X