ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಮಾರುತಿ ಸುಜುಕಿ ವಿಟಾರಾ ಬ್ರಿಝಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಅತ್ಯಧಿಕವಾಗಿ ಮಾರಾಟವಾಗುವ ವಾಹನಗಳ ಪೈಕಿ ಮುಂಚೂಣಿಯಲ್ಲಿದೆ. ಸದ್ಯ ವಿಟಾರಾ ಬ್ರಿಝಾ ಡೀಸೆಲ್ ಎಂಜಿನ್ ಅವೃತ್ತಿಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್ ಅವೃತ್ತಿ ಕೂಡಾ ಖರೀದಿಗೆ ಲಭ್ಯವಿರಲಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಮಾರುತಿ ಸುಜುಕಿಯು ವಿಟಾರಾ ಬ್ರಿಝಾ ಎಸ್‍ಯುವಿಯ ಪೆಟ್ರೊಲ್ ಅವೃತ್ತಿಯ ಉತ್ಪಾದನೆಯಲ್ಲಿ ತೊಡಗಿದ್ದು, ಸಿಯಾಝ್ ಸೆಡಾನ್ ನಂತೆ ವಿಟಾರಾ ಬ್ರಿಝಾ ಸಹ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ 1.5 ಲೀಟರ್ ಪೆಟ್ರೊಲ್ ಎಂಜಿನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಳೆದ ವರ್ಷದ ಕೊನೆಯಲ್ಲಿ ದೇಶಿಯವಾಗಿ ನಿರ್ಮಿಸಿದ್ದ ಪೆಟ್ರೋಲ್ ಎಂಜಿನನ್ನು ಮೊದಲ ಬಾರಿಗೆ ಸಿಯಾಝ್ ಸೆಡಾನ್‍ನಲ್ಲಿ ಅಳವಡಿಸಲಾಗಿತ್ತು. ಈಗ ಈ ಎಂಜಿನನ್ನು ವಿಟಾರಾ ಬ್ರಿಝಾ ಸೇರಿದಂತೆ ಬೇರೆ ಮಾದರಿಯ ವಾಹನಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಆಟೋ ಕಾರ್ ಇಂಡಿಯಾ ವರದಿಯಂತೆ, ವಿಟಾರಾ ಬ್ರಿಝಾವನ್ನು1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನೊಂದಿಗೆ ಪೆಟ್ರೊಲ್ ಎಸ್‍ಯುವಿ ಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಜನಪ್ರಿಯ ಮಾದರಿಯ ಎಸ್‍ಯುವಿ ಇಂಧನದ ವಿಷಯದಲ್ಲಿ ದುಬಾರಿಯಾಗಬಹುದೆಂಬ ಕಾರಣದಿಂದ ಈ ಯೋಜನೆಯನ್ನು ಕೈಬಿಡಲಾಯಿತು.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಮಾರುತಿ ಸುಜುಕಿ ಕಂಪನಿಯು ಹೊಸ ಪೆಟ್ರೋಲ್ ಎಂಜಿನನ್ನು ವಿಟಾರಾ ಬ್ರಿಝಾದಲ್ಲಿ ಅಳವಡಿಸುವ ಮೊದಲು ಎರಡನೇ ತಲೆಮಾರಿನ ಎರ್ಟಿಗಾ ಎಂಪಿವಿಯಲ್ಲಿ ಅಳವಡಿಸುವುದು. ನಾಲ್ಕು ಸಿಲಿಂಡರ್ ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್, 1,462 ಸಿಸಿ ಹೊಂದಿದ್ದು 105 ಬಿಹೆಚ್‍ಪಿ ಮತ್ತು138 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಪೆಟ್ರೋಲ್ ಇಂಜಿನ್ ಜೊತೆಯಲ್ಲಿ ಮಾರುತಿ ವಿಟಾರಾ ಬ್ರಿಝಾ ಮಾರುತಿಯ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರಲಿದೆ. ಮಾರುತಿಯ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿಯು ಸ್ಟಾಂಡರ್ಡ್ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಭವಿಷ್ಯದ ಯೋಜನೆಗಳಿಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್‍‍ಗಳನ್ನು ನೀಡಲಾಗಿದೆ. ಇದೇ ರೀತಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಿಯಾಜ್ ಸೆಡಾನ್ ನಲ್ಲೂ ಅಳವಡಿಸಲಾಗಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಪೆಟ್ರೋಲ್ ಎಂಜಿನನ್ನು ಅಳವಡಿಸುವ ಹೊರತಾಗಿ ಮಾರುತಿ ವಿಟಾರಾ ಬ್ರಿಝಾದಲ್ಲಿ ಇನ್ನೂ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ನೋಡಬಹುದು, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

MOST READ: ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಮಾರುತಿ ಸುಜುಕಿಯು ಇದೇ ವಿಧಾನವನ್ನು ವಿಟಾರಾ ಬ್ರಿಝಾ ಡೀಸೆಲ್ ಅವೃತ್ತಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದೆ. ಮಾಲಿನ್ಯ ತಡೆಗೆ ಸಂಬಂಧಪಟ್ಟಂತೆ ಏಪ್ರಿಲ್ 2020ರ ಗಡುವು ನೀಡಲಾಗಿದ್ದು, ಮಾರುತಿ ಸುಜುಕಿ ಈಗ ಚಾಲ್ತಿಯಲ್ಲಿರುವ 1.3 ಲೀಟರ್ ಡೀಸೆಲ್ ಯೂನಿಟನ್ನು ಹೊಸ ವಿಟಾರಾ ಬ್ರಿಝಾ 1.5 ಲೀಟರ್ ಡಿಡಿಐಎಸ್ 225 ಯೂನಿಟ ಮೂಲಕ ಬದಲಾಯಿಸುವ ಸಾಧ್ಯತೆ ಇದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಿದೆ. ಈ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚು ಮಾರಾಟವಾಗುತ್ತಿದ್ದು, ಮಾರುತಿಯು ಪೆಟ್ರೋಲ್ ಇಂಜಿನ್ ಪರಿಚಯಿಸಿ ಇನ್ನಷ್ಟು ಸುಧಾರಿಸಲು ನಿರ್ಧರಿಸಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿ

ಈ ಮೂಲಕ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾದ ನಂತರ ಫೋರ್ಡ್ ನ 1.5 ಲೀಟರ್ ಪೆಟ್ರೋಲ್ ಸಾಮರ್ಥ್ಯದ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ನ 1.2 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಮತ್ತು ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್ ಯುವಿ300 1.2 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ವಾಹನಗಳಿಗೆ ಪ್ರಮುಖ ಸ್ಪರ್ಧಿಯಾಗಲಿದೆ.

Most Read Articles

Kannada
English summary
Maruti Vitara Brezza Petrol — Expected Launch Date, Price, Mileage, Specifications, Features & More - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X