ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಸತತ ಕುಸಿತದಿಂದ ಕಂಗೆಟ್ಟಿರುವ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಹೊರೆ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ಕಾರುಗಳ ಬೆಲೆಗಳನ್ನು ಇಳಿಕೆ ಮಾಡಿ ಹೊಸ ದರ ಪಟ್ಟಿ ಪ್ರಕಟಿಸಿದೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಶೇ.21.55ರಿಂದ ಶೇ.17.16ಕ್ಕೆ ಇಳಿಕೆ ಮಾಡಲಾಗಿದ್ದು, ಇದು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವ ಆಟೋ ಬಿಡಿಭಾಗಗಳ ಬೆಲೆ ಇಳಿಕೆ ಸಾಕಷ್ಟು ಸಹಕಾರಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ತೆರಿಗೆ ವಿನಾಯ್ತಿಯ ಲಾಭವನ್ನು ಗ್ರಾಹಕರಿಗೂ ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಆಯ್ದ ಕಾರುಗಳ ಮೇಲೆ ನಿರ್ದಿಷ್ಟ ಪ್ರಮಾಣದ ದರ ಇಳಿಕೆ ಮಾಡಿದೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು ಹೆಚ್ಚಾಗಿ ವಿದೇಶಿ ಮಾರುಕಟ್ಟೆಗಳಿಂದ ಲೀಥಿಯಂ ಅಯಾನ್ ಬ್ಯಾಟರಿ, ಏರ್‌ಬ್ಯಾಗ್, ಸೆನ್ಸಾರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ಬಿಡಿಭಾಗಗಳ ಮೇಲೆ ವಿಧಿಸಲಾಗುತ್ತಿದ್ದ ಕಾರ್ಪೊರೇಟ್ ತೆರಿಗೆ ಇಳಿಕೆಯಿಂದಾಗಿ ವಾಹನ ಬೆಲೆಯಲ್ಲೂ ಕಡಿತಗೊಳ್ಳಬಹುದು ಎಂದು ನೀರಿಕ್ಷಿಸಲಾಗಿತ್ತು.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ನೀರಿಕ್ಷೆಯಂತೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಆಯ್ದ ಕಾರುಗಳ ಬೆಲೆಯಲ್ಲಿ ರೂ. 5 ಸಾವಿರ ತನಕ ಬೆಲೆ ಇಳಿಕೆ ಮಾಡಿದ್ದು, ಹೊಸ ದರಗಳ ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದರ ಪಟ್ಟಿ ಪ್ರಕಟಿಸಿದ್ದು, ಹೊಸ ದರ ಪಟ್ಟಿಯಲ್ಲಿ ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡೀಸೆಲ್, ಬಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್ ಮತ್ತು ಎಸ್-ಕ್ರಾಸ್ ಕಾರುಗಳ ಎಕ್ಸ್‌ಶೋರೂಂ ದರಗಳನ್ನು ಕಡಿತಗೊಳಿಸಲಾಗಿದೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಅಕ್ಬೋಬರ್ 1ರಿಂದ ಕಾರ್ಪೊರೇಟ್ ತೆರಿಗೆ ಹೊಸ ಆದೇಶ ಜಾರಿಗೆ ಮುನ್ನವೇ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆ ಕಡಿತಗೊಳಿಸಿದೆ. ಕಳೆದ ಹತ್ತು ತಿಂಗಳಿನಿಂದ ಸತತವಾಗಿ ಕಾರು ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಶೇ.34 ರಷ್ಟು ಹೊಸ ವಾಹನಗಳ ಮಾರಾಟದಲ್ಲಿ ಹಿಂದೆಬಿದ್ದಿದ್ದು, ನಷ್ಟದಲ್ಲಿರುವ ಆಟೋ ಉದ್ಯಮ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸುವಂತೆ ಒತ್ತಡ ಹಾಕಿತ್ತು.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಆದರೆ ಜಿಎಸ್‌ಟಿ ಇಳಿಕೆ ನೀರಿಕ್ಷೆಯಲ್ಲಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆಯಲ್ಲಿ ಇಳಿಕೆ ಮಾಡುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಇದಲ್ಲದೇ ಸ್ಥಳೀಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣ ಮಾಡುವ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆ ಇಳಿಕೆ ಹೆಚ್ಚಿನ ಅನುಕೂಲವಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳನ್ನು ಮತ್ತಷ್ಟು ಆಕರ್ಷಿಸಲಿದೆ.

MOST READ: ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಹೊಸ ತೆರಿಗೆ ಪದ್ದತಿಯಿಂದ ಇಂಧನ ಆಧರಿತ ವಾಹನಗಳಿಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ಸ್ಥಳೀಯವಾಗಿಯೇ ಬಿಡಿಭಾಗಗಳನ್ನು ಉತ್ಪಾದನೆಯನ್ನು ಉತ್ತೇಜಿಸಲು ಈ ಕ್ರಮ ಅಗತ್ಯವಾಗಿತ್ತು.

MOST READ: ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಶೇ.80 ರಷ್ಟು ಅಗ್ಗ ಹ್ಯುಂಡೈ ಕೊನಾ ರನ್ನಿಂಗ್ ಕಾಸ್ಟ್..!

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಇನ್ನು ಕೇಂದ್ರ ಸರ್ಕಾರವು ಇಂಧನ ಆಧರಿತ ವಾಹನಗಳ ಮಾರಾಟವನ್ನು ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಂಬಂಧ ಕಾರ್ಪೊರೇಟ್ ತೆರಿಗೆ ಸೇರಿದಂತೆ ಇನ್ನು ಹಲವಾರುವ ವಿನೂತನ ಯೋಜನೆಗಳನ್ನು ಜಾರಿಗೆ ಮಾಡಿದೆ.

MOST READ: ಸೆಲ್ಟೊಸ್ ಕಾರಿಗೆ ಭರ್ಜರಿ ಬೇಡಿಕೆ- ಮತ್ತೈದು ಹೊಸ ಕಾರುಗಳ ಬಿಡುಗಡೆಗೆ ಸಜ್ಜಾದ ಕಿಯಾ

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಿರುವುದಲ್ಲದೇ ಗ್ರಾಹಕರಿಗೆ ಸಬ್ಸಡಿ ಯೋಜನೆಯನ್ನು ಸಹ ಜಾರಿಗೆ ತಂದಿದ್ದು, 1.5 ಲಕ್ಷದ ತೆರಿಗೆ ವಿನಾಯ್ತಿ ಕೂಡಾ ದೊರೆಯುತ್ತಿದೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಇಂಧನ ಆಧರಿತ ವಾಹನಗಳನ್ನು ಕಡಿತಗೊಳಿಸಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಪ್ರಕಟಿಸುತ್ತಿರುವ ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಮೂಲಕ ಹಲವು ಹೊಸ ಬದಲಾವಣೆಗೆ ಕಾರಣವಾಗಿದೆ.

ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಫೇಮ್ 2 ಯೋಜನೆಯನ್ನು 2018ರಿಂದ 2022ರ ಅವಧಿಗೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಸುಮಾರು 10 ಸಾವಿರ ಕೋಟಿ ಹಣ ಮಿಸಲಿಟ್ಟಿದ್ದು, ಎಲೆಕ್ಕ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳಿಗೆ ಮಾತ್ರವಲ್ಲದೇ ಇವಿ ಖರೀದಿದಾರರಿಗೂ ಸಬ್ಸಡಿ, ತೆರಿಗೆ ವಿನಾಯ್ತಿ ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ.

Most Read Articles

Kannada
English summary
Maruti Suzuki Announces Price Cuts On Popular Models In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X