ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಬಿಎಸ್-6 ಪೆಟ್ರೋಲ್ ಆವೃತ್ತಿಗಳ ಮಾರಾಟವನ್ನು ಆರಂಭಿಸಿರುವುದಲ್ಲದೇ 2 ಲಕ್ಷ ಕಾರು ಮಾರಾಟ ಗುರಿತಲುಪಿದ್ದು, ಶೀಘ್ರದಲ್ಲೇ ಇನ್ನುಳಿದ ಆಲ್ಟೋ ಕೆ10 ಮತ್ತು ಸೆಲೆರಿಯೊ ಕಾರು ಮಾದರಿಗಳನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯು ಸ್ವಿಫ್ಟ್ ಪೆಟ್ರೋಲ್, ಡಿಜೈರ್ ಪೆಟ್ರೋಲ್, ಬಲೆನೊ ಪೆಟ್ರೋಲ್, ಎರ್ಟಿಗಾ ಪೆಟ್ರೋಲ್, ಇಗ್ನಿಸ್, ಆಲ್ಟೋ 800, ವ್ಯಾಗನ್‌ಆರ್ ಪೆಟ್ರೋಲ್ ಮತ್ತು ಹೊಸ ಕಾರು ಮಾದರಿಯಾದ ಎಸ್-ಪ್ರೆಸ್ಸೊ ಕಾರುಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದ್ದು, ಇನ್ನುಳಿದ ಪೆಟ್ರೋಲ್ ಕಾರು ಮಾದರಿಗಳಾದ ಆಲ್ಟೋ ಕೆ10 ಮತ್ತು ಸೆಲೆರಿಯೊ ಮಾದರಿಗಳನ್ನು ಸಹ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಿದ್ದಗೊಂಡಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಈಗಾಗಲೇ ಪೆಟ್ರೋಲ್ ಕಾರುಗಳ ಮಾರಾಟವನ್ನು ಆರಂಭಿಸಿರುವ ಮಾರುತಿ ಸುಜುಕಿಯು ಇತರೆ ಆಟೋ ಉತ್ಪಾದನಾ ಸಂಸ್ಥೆಗಳು ಬಿಎಸ್-6 ಕಾರುಗಳ ಮಾರಾಟ ಆರಂಭಿಸುವುದಕ್ಕೂ ಮುನ್ನವೇ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಆದರೆ ಬಿಎಸ್-6 ಎಂಜಿನ್ ಪ್ರೇರಿತ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಮಾರುತಿ ಸುಜುಕಿಯು ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ಕಾರುಗಳಲ್ಲಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆಯ್ಕೆ ಹೆಚ್ಚಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಕೇವಲ ಹೈಎಂಡ್ ಕಾರುಗಳಲ್ಲಿ ಮಾತ್ರವೇ ಡೀಸೆಲ್ ಎಂಜಿನ್ ಮಾರಾಟ ಮಾಡಲು ಯೋಜನೆ ರೂಪಿಸಿದ್ದು, ಇದೇ ಕಾರಣಕ್ಕೆ ಬಿಎಸ್-6 ಪೆಟ್ರೋಲ್ ಕಾರುಗಳನ್ನು ಅವಧಿಗೂ ಮುನ್ನವೇ ಬಿಡುಗಡೆಗೊಳಿಸಿರುವ ಮಾರುತಿ ಸುಜುಕಿಯು 2020ರ ಏಪ್ರಿಲ್ ನಂತರವಷ್ಟೇ ಬಿಎಸ್-6 ಡೀಸೆಲ್ ಮಾರಾಟಕ್ಕೆ ಚಾಲನೆ ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 1.3-ಲೀಟರ್ ಸಾಮಾರ್ಥ್ಯದ ಡೀಸೆಲ್ ಕಾರುಗಳು ಬಿಎಸ್-6 ಜಾರಿ ನಂತರ ಸ್ಥಗಿತಗೊಳ್ಳಲಿದ್ದು, ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಅಬ್ಬರ ಹೆಚ್ಚಾಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಮೂಲಗಳ ಪ್ರಕಾರ, ಮಾರುತಿ ಸುಜುಕಿಯು ಬಿಎಸ್-6 ಜಾರಿ ನಂತರ ಪೆಟ್ರೋಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾರಾಟವನ್ನು ಮುಂದುವರಿಸಲಿದ್ದರೆ, ಹೈ ಎಂಡ್ ಕಾರುಗಳಿಗೆ ಮಾತ್ರವೇ 1.6-ಲೀಟರ್ ಸಾಮರ್ಥ್ಯದ ಹೊಸ ಡೀಸೆಲ್ ಎಂಜಿನ್ ಅನ್ನು ಅಭಿವೃದ್ದಿಪಡಿಸುತ್ತಿದೆಯೆಂತೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಅಂದರೆ, ಮಾರುತಿ ಸುಜುಕಿ ನಿರ್ಮಾಣದ ಎಕ್ಸ್6, ಎಸ್-ಕ್ರಾಸ್ ಮತ್ತು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ವಿಟಾರಾ ಎಸ್‌ಯುವಿ ಕಾರುಗಳಲ್ಲಿ ಮಾತ್ರವೇ 1.6-ಲೀಟರ್ ಡೀಸೆಲ್ ಎಂಜಿನ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳಲ್ಲೂ ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಒಂದು ವೇಳೆ ಬಿಎಸ್-6 ನಿಯಮದ ಪ್ರಕಾರ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ನಿಯಮಾವಳಿಗಳಿಗೆ ಉನ್ನತೀಕರಿಸಿದರೂ ಸಹ ಬೆಲೆ ಹೆಚ್ಚಳವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯ ಬೆಲೆಗಿಂತ ಹೆಚ್ಚುವರಿಯಾಗಿ ರೂ.90 ಸಾವಿರ ರೂ.1.50 ಲಕ್ಷ ಬೆಲೆ ಹೆಚ್ಚಳವಾಗಲಿದೆ.

MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್-6 ಆಲ್ಟೋ ಕೆ10 ಮತ್ತು ಸೆಲೆರಿಯೊ

ಇದರಿಂದ ಕಾರು ಮಾರಾಟದ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ಮಾರುತಿ ಸುಜುಕಿಯು ರೂ.10 ಲಕ್ಷದೊಳಗಿನ ಕಾರುಗಳಲ್ಲಿನ ಡೀಸೆಲ್ ಎಂಜಿನ್ ಅನ್ನು ಉನ್ನತೀಕರಿಸಲು ಮುಂದಾಗದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಕಾರುಗಳತ್ತ ಹೆಚ್ಚಿನ ಗಮನಹರಿಸುತ್ತದೆ.

Most Read Articles

Kannada
English summary
According to report, Maruti is planning to launch Celerio and Alto K10 with BSVI 1.0-litre petrol engine in India very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X