ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ತನ್ನ ಪ್ರಮುಖ ಕಾರುಗಳ ಮಾರಾಟದ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದ್ದರೂ ಸಹ ಇಕೋ ವಾಹನದ ಬೆಲೆಗಳಲ್ಲಿ ತುಸು ಏರಿಕೆ ಮಾಡಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಇಕೋ ಬೆಲೆಗಳು ರೂ. 6 ಸಾವಿರದಿಂದ ರೂ. 9 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಲ್ಟಿ ಪರ್ಪಸ್ ವೆಹಿಕಲ್‌ಗಳಲ್ಲಿ ಇಕೋ ವಾಹನವು ಭಾರೀ ಬೇಡಿಕೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.54 ಲಕ್ಷ ಬೆಲೆ ಹೊಂದಿದೆ. ಗ್ರಾಹಕರ ಬೇಡಿಕೆಯೆಂತೆ ಪ್ರಮುಖ 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇಕೋ ವಾಹನವು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮದ ಪ್ರಕಾರ ಸುರಕ್ಷತೆಯಲ್ಲಿ ಅತಿ ಕಡಿಮೆ ಗುಣಮಟ್ಟ ಹೊಂದಿದ್ದ ಓಮ್ನಿ ಮಾರಾಟವನ್ನು ಸ್ಥಗಿತಗೊಳಿಸಿದ ಪರಿಣಾಮ ಇಕೋ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಸದ್ಯಕ್ಕೆ ಮಾರುತಿ ಸುಜುಕಿ ಬಹುತೇಕ ಕಾರು ಮಾದರಿಗಳ ಪೆಟ್ರೋಲ್ ವರ್ಷನ್‌ಗಳನ್ನು ಬಿಎಸ್-6 ನಿಯಮದಂತೆ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಇಕೋ ವಾಹನವನ್ನು ಸಹ ಮಹತ್ವದ ಬದಲಾವಣೆಯೊಂದಿಗೆ ಮಾರಾಟಕ್ಕೆ ಚಾಲನೆ ನೀಡಲಿದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇಕೋ ಎಂ‍‍ಪಿವಿ ವಾಹನವು ರಿಯರ್ ವ್ಹೀಲ್ ಡ್ರೈವ್ ತಂತ್ರಜ್ಞಾನ ಹೊಂದಿದ್ದು, ಮಾರುತಿ ಸುಜುಕಿ ಕಂಪನಿಯ ಆಧುನಿಕ ಕೆ ಸರಣಿಯ ಯಾವುದೇ ಎಂಜಿನ್‍‍ಗಳು ರಿಯರ್ ವ್ಹೀಲ್ ಡ್ರೈವ್‍‍ಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಹೊಸ ತಲೆಮಾರಿನ ಇಕೊ ಕಾರ್ ಅನ್ನು ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಹೊಸ ಕ್ರ್ಯಾಶ್ ನಿಯಮಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತಿದ್ದು, ಸೈಡ್ ಕ್ರ್ಯಾಶ್ ಪ್ರೊಟೆಕ್ಷನ್ ಹಾಗೂ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಮಾರುತಿ ಇಕೋ 1.2 ಲೀಟರಿನ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 72 ಬಿ‍‍ಹೆಚ್‍‍ಪಿ ಪವರ್ ಹಾಗೂ 101 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಇಕೊ ಸಿಎನ್‍‍ಜಿ ಎಂಜಿನ್ 62 ಬಿ‍‍ಹೆಚ್‍‍ಪಿ ಪವರ್ ಹಾಗೂ 85 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಪೆಟ್ರೋಲ್ ಎಂಜಿನ್ ಎ‍ಆರ್‍ಎ‍ಐ ಪ್ರಮಾಣ ಪತ್ರದಂತೆ ಪ್ರತಿ ಲೀಟರಿಗೆ 15.37 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಸಿ‍ಎನ್‍‍ಜಿ ಎಂಜಿನ್ ಪ್ರತಿ ಕೆ.ಜಿಗೆ 21.94 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಬಿಡುಗಡೆಯಾಗಲಿರುವ ಹೊಸ ಇಕೋ ಸಹ ಮಾರುಕಟ್ಟೆಯಲ್ಲಿರುವ ಕಾರು ನೀಡುತ್ತಿರುವ ಮೈಲೇಜ್ ಪ್ರಮಾಣವನ್ನೇ ಮುಂದುವರಿಸುವ ಸಾಧ್ಯತೆಗಳಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಇಕೋ ಎಂ‍‍ಪಿ‍‍ವಿಯನ್ನು ಇತ್ತೀಚಿಗಷ್ಟೇ ಹಲವಾರು ಸುರಕ್ಷಾ ಫೀಚರ್‍‍ಗಳೊಂದಿಗೆ ಅಪ್‍‍ಡೇಟ್‍‍ಗೊಳಿಸಿದೆ. ಇದರಲ್ಲಿ ಸ್ಟಾಂಡರ್ಡ್ ಫಿಟ್ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎ‍‍ಬಿ‍ಎಸ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳು ಸೇರಿವೆ. ಹಾಗೆಯೇ ಇಂಟಿರಿಯರ್‍‍ನಲ್ಲಿರುವ ಡ್ಯಾಶ್ ಬೋರ್ಡ್‍‍ನಲ್ಲಿ ಏರ್ ಕಂಡಿಷನ್ ಕಂಟ್ರೋಲ್‍‍ಗಳನ್ನು ನೀಡಲಾಗಿದ್ದು, ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿಲ್ಲ.

MOST READ: ಬಜಾಜ್ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಆದರೆ ಹೊಸ ತಲೆಮಾರಿನ ಇಕೋ ಕಾರಿನ ಇಂಟಿರಿಯರ್‍‍ನಲ್ಲಿ ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿರುವ ಇನ್ಫೋಟೈನ್‍‍ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಅಳವಡಿಸಲಾಗಿದ್ದು, ಆರಾಮದಾಯಕವೆನಿಸುವ ಕ್ಯಾಬಿನ್ ಸೌಲಭ್ಯವನ್ನು ನೀಡಲಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಇಕೋ ಎಂಪಿವಿ ವಾಹನದ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ

ಈ ಹಿಂದಿನ ತಲೆಮಾರಿನ ವೆರ್ಸಾ ಕಾರು ಹೆಚ್ಚು ಮಾರಾಟವಾಗದೇ ಇದ್ದರೂ ಆ ಕಾರಿನ ಉತ್ತರಾಧಿಕಾರಿಯಂದೇ ಪರಿಗಣಿತವಾಗಿದ್ದ ಇಕೋ ವಾಹನವು ಕಳೆದ ಒಂಭತ್ತು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಯುನಿಟ್‍ಗಳು ಮಾರಾಟವಾಗಿದ್ದು, ಈಗ ಈ ಎಂಪಿವಿಯನ್ನು ನವೀಕರಿಸುತ್ತಿರುವ ಮಾರುತಿ ಸುಜುಕಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Maruti Eeco Prices Increased Latest Price Specifications Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X