ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಭಾರತದಲ್ಲಿ ಮಾರುತಿ ಸುಜುಕಿ ಜನಪ್ರಿಯ ಒಮ್ನಿ ವ್ಯಾನ್ ಮಾರಾಟ ಸ್ಥಗಿತದ ನಂತರ ಇಕೋ ವಾಹನ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಕಳೆದ ವರ್ಷದ ಮಾರಾಟಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ವಾಹನ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಪ್ರಯಾಣಿಕರಿಗೆ ಕನಿಷ್ಠ ಪ್ರಮಾಣದ ಸುರಕ್ಷತೆ ಇಲ್ಲದ ಹಿನ್ನಲೆಯಲ್ಲಿ ಒಮ್ನಿ ವ್ಯಾನ್ ಮಾರಾಟವನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಇದರಿಂದ ಒಮ್ನಿ ನಂತರದ ಸ್ಥಾನದಲ್ಲಿರುವ ಇಕೋ ವಾಹನಕ್ಕೆ ಭರ್ಜರಿ ಬೇಡಿಕೆ ಬಂದಿದ್ದು, ಕಳೆದ ಅಕ್ಟೋಬರ್ ಅವಧಿಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಹೌದು, ಇಕೋ ವಾಹನವು ಇದೇ ಮೊದಲ ಬಾರಿಗೆ ಗ್ರಾಹಕರ ಬೇಡಿಕೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಅಕ್ಟೋಬರ್ ಅವಧಿಯಲ್ಲಿ 10,011 ಯುನಿಟ್ ಮಾರಾಟಗೊಳ್ಳುವ ಮೂಲಕ ಟಾಪ್ 10 ಎಂಟ್ರಿ ಲೆವೆಲ್ ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಲ್ಟಿ ಪರ್ಪಸ್ ವೆಹಿಕಲ್‌ಗಳಲ್ಲಿ ಇಕೋ ವಾಹನವು ಭಾರೀ ಬೇಡಿಕೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.54 ಲಕ್ಷ ಬೆಲೆ ಹೊಂದಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಗ್ರಾಹಕರ ಬೇಡಿಕೆಯೆಂತೆ ಪ್ರಮುಖ 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇಕೋ ವಾಹನವು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮದ ಪ್ರಕಾರ ಸುರಕ್ಷತೆಯಲ್ಲಿ ಅತಿ ಕಡಿಮೆ ಗುಣಮಟ್ಟ ಹೊಂದಿದ್ದ ಓಮ್ನಿ ಮಾರಾಟವನ್ನು ಸ್ಥಗಿತಗೊಳಿಸಿದ ಪರಿಣಾಮ ಇಕೋ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಸದ್ಯಕ್ಕೆ ಮಾರುತಿ ಸುಜುಕಿ ಬಹುತೇಕ ಕಾರು ಮಾದರಿಗಳ ಪೆಟ್ರೋಲ್ ವರ್ಷನ್‌ಗಳನ್ನು ಬಿಎಸ್-6 ನಿಯಮದಂತೆ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಇಕೋ ವಾಹನವನ್ನು ಸಹ ಮಹತ್ವದ ಬದಲಾವಣೆಯೊಂದಿಗೆ ಮಾರಾಟಕ್ಕೆ ಚಾಲನೆ ನೀಡಲಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇಕೋ ಎಂ‍‍ಪಿವಿ ವಾಹನವು ರಿಯರ್ ವ್ಹೀಲ್ ಡ್ರೈವ್ ತಂತ್ರಜ್ಞಾನ ಹೊಂದಿದ್ದು, ಮಾರುತಿ ಸುಜುಕಿ ಕಂಪನಿಯ ಆಧುನಿಕ ಕೆ ಸರಣಿಯ ಯಾವುದೇ ಎಂಜಿನ್‍‍ಗಳು ರಿಯರ್ ವ್ಹೀಲ್ ಡ್ರೈವ್‍‍ಗೆ ಹೊಂದಿಕೊಳ್ಳುವುದಿಲ್ಲ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಹೀಗಾಗಿ ಹೊಸ ತಲೆಮಾರಿನ ಇಕೊ ಕಾರ್ ಅನ್ನು ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಹೊಸ ಕ್ರ್ಯಾಶ್ ನಿಯಮಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತಿದ್ದು, ಸೈಡ್ ಕ್ರ್ಯಾಶ್ ಪ್ರೊಟೆಕ್ಷನ್ ಹಾಗೂ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಮಾರುತಿ ಇಕೋ 1.2 ಲೀಟರಿನ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 72 ಬಿ‍‍ಹೆಚ್‍‍ಪಿ ಪವರ್ ಹಾಗೂ 101 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಇಕೊ ಸಿಎನ್‍‍ಜಿ ಎಂಜಿನ್ 62 ಬಿ‍‍ಹೆಚ್‍‍ಪಿ ಪವರ್ ಹಾಗೂ 85 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಪೆಟ್ರೋಲ್ ಎಂಜಿನ್ ಎ‍ಆರ್‍ಎ‍ಐ ಪ್ರಮಾಣ ಪತ್ರದಂತೆ ಪ್ರತಿ ಲೀಟರಿಗೆ 15.37 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಸಿ‍ಎನ್‍‍ಜಿ ಎಂಜಿನ್ ಪ್ರತಿ ಕೆ.ಜಿಗೆ 21.94 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಬಿಡುಗಡೆಯಾಗಲಿರುವ ಹೊಸ ಇಕೋ ಸಹ ಮಾರುಕಟ್ಟೆಯಲ್ಲಿರುವ ಕಾರು ನೀಡುತ್ತಿರುವ ಮೈಲೇಜ್ ಪ್ರಮಾಣವನ್ನೇ ಮುಂದುವರಿಸುವ ಸಾಧ್ಯತೆಗಳಿವೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಮಾರುತಿ ಸುಜುಕಿಯು ಇಕೋ ಎಂ‍‍ಪಿ‍‍ವಿಯನ್ನು ಇತ್ತೀಚಿಗಷ್ಟೇ ಹಲವಾರು ಸುರಕ್ಷಾ ಫೀಚರ್‍‍ಗಳೊಂದಿಗೆ ಅಪ್‍‍ಡೇಟ್‍‍ಗೊಳಿಸಿದೆ. ಇದರಲ್ಲಿ ಸ್ಟಾಂಡರ್ಡ್ ಫಿಟ್ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎ‍‍ಬಿ‍ಎಸ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳು ಸೇರಿವೆ. ಹಾಗೆಯೇ ಇಂಟಿರಿಯರ್‍‍ನಲ್ಲಿರುವ ಡ್ಯಾಶ್ ಬೋರ್ಡ್‍‍ನಲ್ಲಿ ಏರ್ ಕಂಡಿಷನ್ ಕಂಟ್ರೋಲ್‍‍ಗಳನ್ನು ನೀಡಲಾಗಿದ್ದು, ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿಲ್ಲ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಆದರೆ ಹೊಸ ತಲೆಮಾರಿನ ಇಕೋ ಕಾರಿನ ಇಂಟಿರಿಯರ್‍‍ನಲ್ಲಿ ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿರುವ ಇನ್ಫೋಟೈನ್‍‍ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಅಳವಡಿಸಲಾಗಿದ್ದು, ಆರಾಮದಾಯಕವೆನಿಸುವ ಕ್ಯಾಬಿನ್ ಸೌಲಭ್ಯವನ್ನು ನೀಡಲಿದೆ.

ಒಮ್ನಿ ವ್ಯಾನ್ ಮಾರಾಟ ಸ್ಥಗಿತ ನಂತರ ಇಕೋ ಖರೀದಿಗೆ ಭರ್ಜರಿ ಬೇಡಿಕೆ

ಈ ಹಿಂದಿನ ತಲೆಮಾರಿನ ವೆರ್ಸಾ ಕಾರು ಹೆಚ್ಚು ಮಾರಾಟವಾಗದೇ ಇದ್ದರೂ ಆ ಕಾರಿನ ಉತ್ತರಾಧಿಕಾರಿಯಂದೇ ಪರಿಗಣಿತವಾಗಿದ್ದ ಇಕೋ ವಾಹನವು ಕಳೆದ ಒಂಭತ್ತು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಯುನಿಟ್‍ಗಳು ಮಾರಾಟವಾಗಿದ್ದು, ಈಗ ಈ ಎಂಪಿವಿಯನ್ನು ನವೀಕರಿಸುತ್ತಿರುವ ಮಾರುತಿ ಸುಜುಕಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Maruti Eeco Sales Up 50 Percent In October. Read in Kannada.
Story first published: Saturday, November 16, 2019, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X