ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಮಾರುತಿ ಸುಜುಕಿ ಸಂಸ್ಥೆಯು ಇದೇ ತಿಂಗಳು ತಮ್ಮ ನ್ಯೂ ಜನರೇಷನ್ ವ್ಯಾಗನಾರ್ ಹ್ಯಾಚ್‍‍ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಲಿದ್ದು, ಈ ಕಾರು ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇಷ್ಟೆ ಅಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಕಾರಾಗಿ ವ್ಯಾಗನಾರ್ ಕಾರಿನ ಲೆಕ್ಟ್ರಿಕ್ ಮಾದರಿಯನ್ನು ಸಹ ಪರಿಚಯಿಸಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಕಳೆದ ವರ್ಷ ನಡೆದ ಮೂವ್ ಸಮ್ಮಿತ್ 2018 ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಈ ಕಾರು ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದೀಗ ದೆಹಲಿಯ ಹೆದ್ದಾರಿಗಳಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಸೋಲಿಯೊ ಕಾರಿನ ವಿನ್ಯಾಸವನ್ನು ಆಧರಿಸಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಕೆಲವು ಸುದ್ದಿ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಇ-ವರ್ಷನ್ ವ್ಯಾಗನ್ ಆರ್ ಕಾರನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದನೆ ಮಾಡುತ್ತಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಸ್ಪರ್ಧಾತ್ಮಕವಾಗಿ ಇರಲಿದೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಲೀಥಿಯಂ ಅಯಾನ್ ಬ್ಯಾಟರಿಗಳ ಬೆಲೆ ಅಧಿಕವಿರುವ ಕಾರಣ ರೆಗ್ಯೂಲರ್ ಮಾಡೆಲ್ ವ್ಯಾಗನ್ ಆರ್ ಮಾದರಿಗಿಂತಲೂ ಬೆಲೆ ಎರಡರಷ್ಟು ಜಾಸ್ತಿ ಇರಲಿದ್ದು, ಪ್ರತಿ ಚಾರ್ಜಿಂಗ್‌ಗೆ ಕನಿಷ್ಠ 200ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ಸಾಮರ್ಥ್ಯದ ಬ್ಯಾಟರಿ ಜೋಡಣೆ ಹೊಂದಿರಲಿವೆಯೆಂತೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ವ್ಯಾಗನ್ ಆರ್ ಇವಿ ಕಾರುಗಳು 2020ರ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು, ಹೊಸ ಎಲೆಕ್ಟ್ರಿಕ್ ಕಾರನ್ನು ದೆಹಲಿ ಬಳಿ ಇರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಲ್ಲೇ ತಯಾರಿಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಜೊತೆಗೆ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರನ್ನು ಸಹ ನಿರ್ಮಾಣ ಮಾಡುವ ಯೋಜನೆಯಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ದೇಶಿಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆ ಮಾಡುವ ಸಂಬಂಧ ಬರೋಬ್ಬರಿ ರೂ.700 ಕೋಟಿ ವೆಚ್ಚದಲ್ಲಿ ಗುಜರಾತ್‌ನಲ್ಲಿ ಬ್ಯಾಟರಿ ಉತ್ಪಾದನಾ ಘಟಕ ತೆರೆಯಲು ಈಗಾಗಲೇ ಕೇಂದ್ರದಿಂದ ಅನುಮತಿ ಪಡೆದಿದ್ದು, ಎಲೆಕ್ಟ್ರಿಕ್ ಕಾರುಗಳ ಬೆಲೆ ತಗ್ಗಿಸಲು ಇದು ಮಹತ್ವದ ಯೋಜನೆ ಎನ್ನಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಕಾರಣ, ಬೆಲೆಯಲ್ಲಿ ದುಬಾರಿ ಎನ್ನಿಸುವ ಲೀಥಿಯಂ ಅಲಾಯ್ ಬ್ಯಾಟರಿಗಳನ್ನು ಸದ್ಯಕ್ಕೆ ವಿದೇಶಿ ಮಾರುಕಟ್ಟೆಗಳಾದ ಚೀನಾ, ತೈವಾನ್ ಮತ್ತು ಥೈಲ್ಯಾಂಡ್‌ನಿಂದಲೇ ಶೇ.100ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಯಾವುದೇ ಕಾರು ಉತ್ಪಾದನಾ ಸಂಸ್ಥೆಯು ಸ್ವಂತ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಎರಡು ಮೂರು ಪಟ್ಟು ಹೆಚ್ಚು ದುಬಾರಿ ದರಗಳಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರಣದಿಂದಲೇ ಬಹುತೇಕ ಕಾರು ಖರೀದಿದಾರರು ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಆಸಕ್ತಿ ಇದ್ದರೂ ದುಬಾರಿ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಇದನ್ನು ಗಂಭೀರವಾಗಿ ಪರಿಣಿಸಿರುವ ಸುಜುಕಿ ಸಂಸ್ಥೆಯು ಭಾರತದಲ್ಲಿ ಸ್ಥಳೀಯವಾಗಿ ಲೀಥಿಯಂ ಬ್ಯಾಟರಿ ಉತ್ಪಾದನೆ ಮಾಡಿ ತನ್ನದೇ ಕಾರುಗಳಿಗೆ ಅಷ್ಟೇ ಅಲ್ಲದೇ ಇತರೆ ಸಂಸ್ಥೆಗಳಿಗೂ ಬ್ಯಾಟರಿ ಪೂರೈಕೆ ಮಾಡುವ ಯೋಜನೆ ರೂಪಿಸಿದ್ದು, 2020ರ ವೇಳೆಗೆ ದೇಶದಲ್ಲಿ ಮಾರಾಟವಾಗುವ ಕಾರುಗಳ ಪ್ರಮಾಣದಲ್ಲಿ ಹೊಸ ಬದಲಾಣೆ ತರುವುದೇ ಇದರ ಮೂಲಉದ್ದೇಶವಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರು..

ಒಟ್ಟಿನಲ್ಲಿ ಬೃಹತ್ ಯೋಜನೆಯೊಂದಿಗೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ಕೈ ಹಾಕಿರುವ ಮಾರುತಿ ಸುಜುಕಿ ಸಂಸ್ಥೆಯು ಸಾಮಾನ್ಯ ಕಾರುಗಳ ಮಾರಾಟದಲ್ಲಿ ಯಶಸ್ಸು ಸಾಧಿಸಿರುವಂತೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಅಧಿಪತ್ಯ ಹೊಂದುವ ತವಕದಲ್ಲಿದ್ದು, ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬ್ಯಾಟರಿ ಬಳಕೆ ಮಾಡಿದ್ದಲ್ಲಿ ಹೊಸ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Maruti WagonR Electric Spied Testing — First Electric Vehicle From Maruti Suzuki. Read In Kannada
Story first published: Saturday, January 12, 2019, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X