ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಆವೃತ್ತಿಯು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಎರ್ಟಿಗಾ ಮಾದರಿ ಕೂಡಾ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಡೀಸೆಲ್ ಮಾದರಿಯ ಆರಂಭಿಕ ಆವೃತ್ತಿಯಲ್ಲಿ ಕೆಲವು ಬದಲಾವಣೆಯಾಗುತ್ತಿದ್ದು, ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಹೌದು, ಎರ್ಟಿಗಾ ಕಾರು ಮಾದರಿಯಲ್ಲಿ ಸದ್ಯಕ್ಕೆ 4 ಡೀಸೆಲ್ ಆವೃತ್ತಿಗಳು ಮತ್ತು 6 ಪೆಟ್ರೋಲ್ ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೀಸೆಲ್ ಆರಂಭಿಕ ಆವೃತ್ತಿಯಾದ ಎಲ್‌ಡಿಐ ಮಾದರಿಯು ಮುಂದಿನ ತಿಂಗಳು ಏಪ್ರಿಲ್ 1ರಿಂದಲೇ ಮಾರಾಟದಿಂದ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಎಲ್‌ಡಿಐ ಆವೃತ್ತಿಯು ಸ್ಥಗಿತಗೊಂಡಲ್ಲಿ ವಿಡಿಐ ಆವೃತ್ತಿಯೇ ಆರಂಭಿಕ ಮಾದರಿಯಾಗಲಿದ್ದು, ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರಿಗೆ ಇದು ತುಸು ಹೊರೆಯಾಗಿ ಪರಿಣಮಿಸಲಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಎರ್ಟಿಗಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಆರಂಭಿಕ ಪೆಟ್ರೋಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7.44 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಪೆಟ್ರೋಲ್ ಆವೃತ್ತಿಯು ಎಕ್ಸ್‌ಶೊರೂಂ ಪ್ರಕಾರ ರೂ. 9.95 ಲಕ್ಷ ಬೆಲೆ ಹೊಂದಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಹಾಗೆಯೇ ಡೀಸೆಲ್ ಮಾದರಿಗಳಲ್ಲಿ ಆರಂಭಿಕ ಆವೃತ್ತಿಯಾದ ಎಲ್‌ಡಿಐ ಕಾರಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.84 ಲಕ್ಷ ಬೆಲೆ ಹೊಂದಿದ್ದಲ್ಲಿ ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಪಡೆದುಕೊಂಡಿದೆ. ಆದ್ರೆ ಮುಂಬರುವ ಏಪ್ರಿಲ್ 1ರಿಂದ ಎಲ್‌ಡಿಐ ಆವೃತ್ತಿಯು ಮಾರಾಟದಿಂದ ಸ್ಥಗಿತಗೊಂಡಲ್ಲಿ ವಿಡಿಐ ಕಾರನ್ನು ಆರಂಭಿಕ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಹೀಗಾಗಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿಯನ್ನು ಖರೀದಿ ಬಯಸುವ ಗ್ರಾಹಕರು ಅನಿವಾರ್ಯವಾಗಿ ರೂ. 9.56 ಲಕ್ಷ ಪಾವತಿ ವಿಡಿಐ ಆವೃತ್ತಿಯನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆಗಳಿದ್ದು, ಸ್ಥಗಿತಗೊಳ್ಳಲಿರುವ ಎಲ್‌ಡಿಐ ಆವೃತ್ತಿಗಿಂತಲೂ ವಿಡಿಐ ಆವೃತ್ತಿಯು ರೂ.72 ಸಾವಿರ ದುಬಾರಿ ಎನ್ನಿಸಲಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಇನ್ನು ಎರ್ಟಿಗಾ ಎಲ್‌ಡಿಐ ಆವೃತ್ತಿಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ಮಾರುತಿ ಸುಜುಕಿ ತನ್ನ ಅಧಿಕೃತ ಡೀಲರ್ಸ್‌ಗಳಿಗೆ ಮಾಹಿತಿ ರವಾನೆ ಮಾಡಿದ್ದು, ಮಾರ್ಚ್ 1ರಿಂದಲೇ ಎಲ್‌ಡಿಐ ಆವೃತ್ತಿಯ ಖರೀದಿಗಾಗಿ ಬುಕ್ಕಿಂಗ್ ಸ್ವಿಕರಿಸದಂತೆ ಸೂಚನೆ ನೀಡಿದೆ. ಇದರಿಂದ ಈ ಹಿಂದೆ ಬುಕ್ ಮಾಡಿರುವ ಗ್ರಾಹಕರಿಗೆ ಮಾತ್ರವೇ ಎಲ್‌ಡಿಐ ಲಭ್ಯವಾಗಲಿದ್ದು, ವಾಣಿಜ್ಯ ಬಳಕೆಗಾಗಿ ಈ ಆವೃತ್ತಿಯು ಅತಿ ಹೆಚ್ಚು ಬೇಡಿಕೆ ಪಡೆದಿತ್ತು.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಹೀಗಿದ್ದರೂ ಕೂಡಾ ಎಲ್‌ಡಿಐ ಆವೃತ್ತಿಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡದ ಮಾರುತಿ ಸುಜುಕಿ ಸಂಸ್ಥೆಯು ಕೇವಲ ಸ್ಥಗಿತಗೊಳಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಕೆಲವು ಮಾಹಿತಿಗಳ ಪ್ರಕಾರ ಎರ್ಟಿಗಾದಲ್ಲಿಯೇ ಮತ್ತೊಂದು ಸಿಕ್ಸ್ ಸೀಟರ್ ಬಿಡುಗಡೆಯ ಉದ್ದೇಶ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಇನ್ನು ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಎರ್ಟಿಗಾ ಎಲ್‌ಡಿಐ ಡೀಸೆಲ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

Most Read Articles

Kannada
English summary
Maruti Suzuki Ertiga base (LXi/LDi) variants discontinued in India. Read in Kannada.
Story first published: Friday, March 15, 2019, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X