ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಮಾರುತಿ ಸುಜುಕಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ವಾಹನದ ಬಿಡುಗಡೆಯನ್ನು ಖಚಿತಪಡಿಸಿದ್ದು, ವ್ಯಾಗನ್‍ಆರ್ ವಾಹನದ ಮೇಲೆ ಆಧಾರಿತವಾಗಿರುವ ಎಲೆಕ್ಟ್ರಿಕ್ ಕಾರ್ ಅನ್ನು 2020ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದೆಂದು ತಿಳಿಸಿದೆ. ಈಗ ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯಲ್ಲಿ ತೊಡಗಿದೆ.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಲೈವ್‍‍ಮಿಂಟ್ ವರದಿಗಳ ಪ್ರಕಾರ, ಮಾರುತಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಎರಡನೇ ಎಲೆಕ್ಟ್ರಿಕ್ ವಾಹನವು ಜನಪ್ರಿಯವಾಗಿರುವ ಎರ್ಟಿಗಾ ಎಂಪಿವಿ ಕಾರಿನ ಮೇಲೆ ಆಧಾರಿತವಾಗಿರಲಿದೆ. ಹೊಸ ಎರ್ಟಿಗಾ ಕಾರ್ ಅನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ತಯಾರಿಸಿ, ಹೊಸ ವಿನ್ಯಾಸದಲ್ಲಿ, ಹೊಸ ಹೆಸರಿನೊಂದಿಗೆ ಬಿಡುಗಡೆಗೊಳಿಸಲಾಗುವುದು. ಆದರೆ ವರದಿಗಳ ಪ್ರಕಾರ, ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರಿನ ತಯಾರಿಕೆಯ ಬಗೆಗಿನ ಯೋಜನೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿದು ಬಂದಿದೆ.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿ ಉಂಟಾಗುತ್ತಿರುವ ಸ್ಪರ್ಧೆಯನ್ನು ಎದುರಿಸಲು ಸಜ್ಜಾಗಿದೆ. ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರಿನ 50ಕ್ಕೂ ಹೆಚ್ಚು ಮೂಲ ಮಾದರಿಗಳನ್ನು ಪರೀಕ್ಷಿಸುತ್ತಿದೆ. ಎಲೆಕ್ಟ್ರಿಕ್ ಆವೃತ್ತಿಯ ವ್ಯಾಗನ್‍‍ಆರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿನ ವಿವಿಧ ಹಾಗೂ ವಿಶೇಷವಾದ ಸನ್ನಿವೇಶಗಳಲ್ಲಿ ವ್ಯಾಪಕವಾಗಿ ಪರೀಕ್ಷಿಸಲಾಗುತ್ತಿದೆ.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ವ್ಯಾಗನ್ ಆರ್ ಹಾಗೂ ಎರ್ಟಿಗಾ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಹೊರತಾಗಿ, ಮಾರುತಿ ಕಂಪನಿಯು ಗುಜರಾತ್‍‍ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯ ಘಟಕವನ್ನು ಸ್ಥಾಪಿಸಲು ಚಿಂತಿಸಿದೆ. ಮಾರುತಿ ಕಂಪನಿಯ ಪ್ರತಿಸ್ಪರ್ಧಿಯಾದ ಟಾಟಾ ಮೋಟಾರ್ಸ್ ಸಹ ಇತ್ತೀಚಿಗೆ ಗುಜರಾತ್‍‍ನಲ್ಲಿಯೇ ಲಿಥಿಯಂ ಐಯಾನ್ ಬ್ಯಾಟರಿ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಎರ್ಟಿಗಾ ಎಂ‍‍ಪಿ‍‍ವಿಯನ್ನು ಬಿಡುಗಡೆಗೊಳಿಸಿತ್ತು.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಬಿಡುಗಡೆಯಾದ ನಂತರ ಎರ್ಟಿಗಾ ಕಂಪನಿಯು ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು, ಮಾರಾಟದಲ್ಲೂ ಏರಿಕೆಯಾಗಿದೆ. ಈ ಮಲ್ಟಿ ಪರ್ಪಸ್ ವಾಹನದ ಯಶಸ್ಸು ಸಹ ಮಾರುತಿ ಕಂಪನಿಯು ಈ ಕಾರ್ ಅನ್ನು ಎಲೆಕ್ಟ್ರಿಕರಣಗೊಳಿಸುವ ಕಾರಣಗಳಲ್ಲಿ ಒಂದಾಗಿದೆ. ಎರ್ಟಿಗಾ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪೆಟ್ರೋಲ್ ಮಾದರಿಯ ವಾಹನಗಳು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿವೆ.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಡೀಸೆಲ್ ಮಾದರಿಯ ವಾಹನಗಳಲ್ಲಿ 1.3 ಲೀಟರ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಿವೆ. ಇದರ ಜೊತೆಗೆ ಮಾರುತಿ ಕಂಪನಿಯು ಹಲವಾರು ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಿದೆ. ಎರ್ಟಿಗಾ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.7.44 ಲಕ್ಷಗಳಾಗಿದೆ. ಕಂಪನಿಯು ಈಗ ಆರು ಸೀಟರ್‍‍ನ ಪ್ರೀಮಿಯಂ ಎರ್ಟಿಗಾ ಎಂ‍‍ಪಿ‍‍ವಿ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಪ್ರೀಮಿಯಂ ಮಾದರಿಯ ಹೊಸ ಎರ್ಟಿಗಾ ಕಾರು ಆಗಸ್ಟ್ 21ರಿಂದ ಮಾರಾಟವಾಗಲಿದೆ.

ವ್ಯಾಗನ್‍ಆರ್ ಎಲೆಕ್ಟ್ರಿಕ್ ನಂತರ ಬರಲಿದೆ ಎರ್ಟಿಗಾ ಎಲೆಕ್ಟ್ರಿಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನದ ಸೆಗ್‍‍ಮೆಂಟಿಗಾಗಿ ಆಕ್ರಮಣಕಾರಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಎಲೆಕ್ಟ್ರಿಕ್ ವ್ಯಾಗನ್‍‍ಆರ್ 2020ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಎಲೆಕ್ಟ್ರಿಕ್ ಎರ್ಟಿಗಾ ಎಂಪಿವಿ ನಂತರದ ಹಂತದಲ್ಲಿ, ಬಹುಶಃ 2021ರಲ್ಲಿ, ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಆದರೆ, ಮಾರುತಿ ಸುಜುಕಿ ಕಂಪನಿಯು ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ.

Most Read Articles

Kannada
English summary
Maruti Suzuki Working On Electric Version OF The Ertiga MPV — Second EV After The Wagon R - Read in kannada
Story first published: Monday, July 15, 2019, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X