ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಕಳೆದ ವಾರವಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಹೊಚ್ಚ ಹೊಸ ಕಾರು ಮಾದರಿಯಾದ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿಯು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರಿನಲ್ಲಿ ಶೀಘ್ರದಲ್ಲೇ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ನೀಡುವುದು ಬಹುತೇಕ ಖಚಿತವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಸಣ್ಣ ಗಾತ್ರದ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲು ನಿರ್ಧರಿಸಿರುವ ಮಾರುತಿ ಸುಜುಕಿಯು ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಸ್-ಪ್ರೆಸ್ಸೊ ಮಾದರಿಯಲ್ಲೂ ಸಿಎನ್‌ಜಿ ಕಿಟ್ ಅಳವಡಿಕೆ ಮಾಡುತ್ತಿದೆ. ಸಿಎನ್‌ಜಿ ಕಿಟ್ ಜೋಡಣೆಯ ಎಸ್-ಪ್ರೆಸ್ಸೊ ಬಿಡುಗಡೆಗೂ ಮುನ್ನ ರೋಡ್ ಟೆಸ್ಟ್ ನಡೆಸಲಾಗಿದ್ದು, ಹೊಸ ಕಾರು ಡೀಸೆಲ್ ಎಂಜಿನ್‌ಗೆ ಸರಿಸಮನಾದ ಮೈಲೇಜ್ ಮತ್ತು ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆಯ ವೈಶಿಷ್ಟ್ಯತೆ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಬಿಎಸ್-6 ನಿಯಮದಂತೆ ಸಣ್ಣ ಗಾತ್ರದ ಡೀಸೆಲ್ ಎಂಜಿನ್‌ಗಳನ್ನು ಹೊಸ ಮಾಲಿನ್ಯ ನಿಯಂತ್ರಣ ಕಾಯ್ದೆ ಅನುಸಾರ ಉನ್ನತೀಕರಣ ಸಾಧ್ಯವಾಗದ ಕಾರಣಕ್ಕೆ ಸಣ್ಣ ಕಾರುಗಳಲ್ಲಿ ಡೀಸೆಲ್ ಆಯ್ಕೆ ತೆಗೆದುಹಾಕುತ್ತಿರುವ ಮಾರುತಿ ಸುಜುಕಿ ಪರಿಸರ ಸ್ನೇಹಿ ವಾಹನಗಳತ್ತ ಮಹತ್ವದ ಹೆಜ್ಜೆಯಿರಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಇನ್ನು ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.69 ಲಕ್ಷ ಖರೀದಿಗೆ ಲಭ್ಯವಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ಬೆಲೆಯನ್ನು ರೂ. 4.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಆಲ್ಟೊ ಕೆ10 ಮತ್ತು ವ್ಯಾಗನ್ಆರ್ ಕಾರು ಮಾದರಿಯ ಮಧ್ಯದ ಆವೃತ್ತಿಯಾಗಿ ಎಸ್-ಪ್ರೆಸ್ಸೊ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಹೊಂದಿದೆ. ಬಿಎಸ್-6 ನಿಯಮದಂತೆ ಎಸ್ ಪ್ರೆಸ್ಸೊ ಕಾರಿನ ಎಂಜಿನ್ ಅನ್ನು ಅಭಿವೃದ್ದಿಗೊಳಿಸಲಾಗಿದ್ದು, ಆರಂಭಿಕ ಆವೃತ್ತಿಗಳಲ್ಲಿ ಮ್ಯಾನುವಲ್ ಮತ್ತು ಹೈ ಎಂಡ್ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಎಂಜಿನ್ ಸಾಮಾರ್ಥ್ಯ ಮತ್ತು ಮೈಲೇಜ್

ಎಸ್-ಪ್ರೆಸ್ಸೊ ಕಾರು 998 ಸಿಸಿ ತ್ರಿ-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ‌68-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದಿದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆ ಲಭ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 21.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಹಾಗೆಯೇ ಹೊಸ ಕಾರು ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಆಯತಾಕಾರದ ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಇದರೊಂದಿಗೆ ಎಸ್-ಪ್ರೆಸ್ಸೊ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಿಸಲಾಗಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಚೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಾರುತಿ ನಿರ್ಮಾಣದ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯಿಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಎಸಿ ವೆಂಟ್ಸ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರಿಯರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್ ಸಹ ಹೊಂದಿದ್ದು, ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಹೊಸ ಕಾರಿನಲ್ಲಿ ಕೀ ಲೆಸ್ ಎಂಟ್ರಿ,ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದ್ದು, ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸಿಎನ್‌ಜಿ ಪ್ರೇರಿತ ಮಾರುತಿ ಎಸ್-ಪ್ರೆಸ್ಸೊ

ಹೊಸ ಕಾರು ಕ್ವಿಡ್ ಮಾದರಿಯಲ್ಲೇ ಉದ್ದಳತೆ ಹೊಂದಿದ್ದು, 3,565-ಎಂಎಂ ಉದ್ದ, 1,520-ಎಂಎಂ ಅಗಲ, 1,564-ಎಂಎಂ ಎತ್ತರ, 2,380-ಎಂಎಂ ವೀಲ್ಹ್‌ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 165/70 ಆರ್14 ಟೈರ್ ಹೊಂದಿರಲಿದೆ.

Most Read Articles

Kannada
English summary
Maruti is working on CNG variant of S Press micro SUV and it will be launched in India very soon.
Story first published: Saturday, October 5, 2019, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X