ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಮಾರುತಿ ಕಂಪನಿಯು ಹೊಸ ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿಯನ್ನು ಕಳೆದ ಸೆಪ್ಟೆಂಬರ್ 30ರಂದು ಬಿಡುಗಡೆಗೊಳಿಸಿತ್ತು. ಈ ಮಿನಿ ಎಸ್‍‍ಯು‍ವಿ ಬಿ‍ಡುಗಡೆಯಾದಾಗಿನಿಂದ 5,006 ಬುಕ್ಕಿಂಗ್‍‍ಗಳನ್ನು ದಾಖಲಿಸಿದೆ. ಈ ಮಿನಿ ಎಸ್‍‍ಯು‍ವಿ ಸಾಲಿಡ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಡೀಲರ್‍‍ರೊಬ್ಬರು ತಮ್ಮ ಗ್ರಾಹಕರಿಗಾಗಿ ಡ್ಯುಯಲ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಕಾರನ್ನು ಸಿದ್ದಪಡಿಸಿದ್ದಾರೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿಗೆ ಕಂಪನಿ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ನೀಡಿಲ್ಲವಾದರೂ, ಡ್ಯುಯಲ್ ಟೋ‍‍‍ನ್ ಬಣ್ಣಗಳ ಆಯ್ಕೆಯನ್ನು ತಮ್ಮ ಗ್ರಾಹಕರಿಗಾಗಿ ಸಿದ್ದಪಡಿಸಿದ್ದು, ಇದನ್ನು ಆಯ್ಕೆ ಮಾಡುವ ಗ್ರಾಹಕರಿಗೆ ನೀಡಲಾಗುತ್ತದೆ. ಗ್ರಾಹಕರಿಗಾಗಿ ಸಾಲಿಡ್ ಸಿಜ್ಲೆ ಆರೇಂಜ್ ಬಣ್ಣದಿಂದ ವಿನ್ಯಾಸ ಮಾಡಲಾಗಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.96 ಲಕ್ಷದಿಂದ 4.91 ಲಕ್ಷದವರೆಗೆ ಬೆಲೆ ಹೊಂದಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಆರೇಂಜ್ ಬಣ್ಣಕ್ಕೆ ಹೊಂದಿಕೆಯಾಗುವಂತೆ ಸ್ಟಾಕ್ ಬ್ಲ್ಯಾಕ್ ಬಂಪರ್, ಗ್ರಿಲ್ ಮತ್ತು ಏರ್‍ ಡ್ಯಾಮ್ ಅನ್ನು ಹೊಂದಿದೆ. ಈ ಬದಲಾವಣೆಯಿಂದ ಮಿನಿ ಎಸ್‍‍ಯು‍ವಿ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಒಇಎಂ ಮೆಟಾಲಿಕ್ ವ್ಹೀಲ್‍‍ಗಳು ಮತ್ತು ವ್ಹೀಲ್ ಆರ್ಚ್ ಕ್ಲಾಡಿಂಗ್, ಒಆರ್‍‍ವಿಎಂ, ಸೈಡ್ ಕ್ಲಾಡಿಂಗ್ ಮತ್ತು ಬ್ಲ್ಯಾಕ್ ರೂಫ್, ಎ ಮತ್ತು ಬಿ ಪಿಲ್ಲರ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಕಾರಿನ ಬಣ್ಣಕ್ಕೆ ಹೊಂದಿಕೆಯಾಗುವಂತೆ ಹಿಂಭಾಗದ ಬಂಪರ್ ಅನ್ನು ಆರೇಂಜ್ ಬಣ್ಣದಿಂದ ಮರುವಿನ್ಯಾಸ ಮಾಡಲಾಗಿದೆ. ಕಾರಿನಲ್ಲಿ ಬ್ಲ್ಯಾಕ್ ಬಣ್ಣದ ಸ್ಟ್ರೀಪ್ ಅನ್ನು ಕೂಡ ಹೊಂದಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ವಾಹನದ ಇಂಟಿರಿಯರ್(ಒಳಾಂಗಣ)ದಲ್ಲಿ ಯಾವುದಾದರೂ ಬದಲಾವಣೆಗಳನ್ನು ಮಾಡಲಾಗಿದೆಯೆ ಎಂಬ ಮಾಹಿತಿಯಿಲ್ಲ. ಎಂಜಿನ್‍‍ನಲ್ಲಿ ಕೂಡ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿಗೆ ಬಿಡಿಭಾಗಗಳನ್ನು ಹೊರತುಪಡಿಸಿ ರೂ.15,000 ಅಧಿಕವಾಗಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ಹೊಂದಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನಲ್ಲಿ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಕೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರೇರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್ ಸಹ ಹೊಂದಿದ್ದು, ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ಕಾರಿನಲ್ಲಿ ಕೀ ಲೆಸ್ ಎಂಟ್ರಿ, ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

ಡೀಲರ್‍ ಕೈಚಳಕದಿಂದ ವಿಭಿನ್ನವಾಗಿ ತಯಾರಾಯ್ತು ಎಸ್-ಪ್ರೆಸ್ಸೊ

ನಿರ್ದಿಷ್ಟ ಡೀಲರ್‍‍ಗಳ ಬಳಿ ಮಾತ್ರ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿರುವ ಎಸ್-ಪ್ರೆಸ್ಸೊ ಲಭ್ಯವಿರುವುದಾ ಅಥವಾ ಎಲ್ಲಾ ಮಾರುತಿ ಡೀಲರ್‍‍ಗಳ ಬಳಿ ಲಭ್ಯವಿದೆಯಾ ಎಂಬ ಮಾಹಿತಿ ಇಲ್ಲ. ಎಸ್‍‍ಯು‍ವಿ ಡ್ಯುಯಲ್ ಟೋನ್ ಬಣ್ಣದಲ್ಲಿ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇದರ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಎಸ್-ಪ್ರೆಸ್ಸೊ ಡೀಲರ್‍‍ಗಳು ಪ್ರಯ್ನತಿಸುತ್ತಿದ್ದಾರೆ.

Most Read Articles

Kannada
English summary
Maruti S-Presso Dual-Tone Paint Scheme Modified By Dealership: Check Out The Video Here! - Read in Kannada
Story first published: Monday, October 14, 2019, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X