ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಹ್ಯಾಚ್‍‍ಬ್ಯಾಕ್ ಕಾರ್ ಆದ ಎಸ್ ಪ್ರೆಸ್ಸೊವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಎಸ್‍ ಪ್ರೆಸ್ಸೊ ಕಾರು ಸೆಪ್ಟೆಂಬರ್ 30ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಈ ಹ್ಯಾಚ್ ಬ್ಯಾಕ್ ಕಾರಿನ ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಇವುಗಳಲ್ಲಿ ಈ ಕಾರಿನ ಡೈಮೆಂಷನ್, ವೆರಿಯಂಟ್, ಎಂಜಿನ್ ಹಾಗೂ ಫೀಚರ್‍‍ಗಳ ಬಗೆಗಿನ ಮಾಹಿತಿಯನ್ನು ನೀಡಲಾಗಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ, ಎಸ್ ಪ್ರೆಸ್ಸೊ ಹ್ಯಾಚ್‍‍ಬ್ಯಾಕ್ ಕಾರು ಮಾರುತಿ ಸುಜುಕಿ ಕಂಪನಿಯ ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂನ ಭಾಗವಾಗಿದೆ. ಈ ಪ್ಲಾಟ್‍‍ಫಾರಂ ಲಘು ತೂಕವನ್ನು ಹೊಂದಿದ್ದರೂ, ಬಲಿಷ್ಟವಾದ ಆರ್ಕಿಟೆಕ್ಚರ್ ಹೊಂದಿದೆ. ಎಸ್ ಪ್ರೆಸ್ಸೊ ಈ ಪ್ಲಾಟ್‍‍ಫಾರಂನಲ್ಲಿ ಅಭಿವೃದ್ದಿಯಾಗುತ್ತಿರುವ ಮಾರುತಿ ಸುಜುಕಿ ಕಂಪನಿಯ ಎಂಟನೇ ಮಾದರಿಯಾಗಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಸ್ವಿಫ್ಟ್, ಡಿಜೈರ್, ಬಲೆನೊ, ಇಗ್ನಿಸ್, ವ್ಯಾಗನ್ ಆರ್, ಎರ್ಟಿಗಾ ಹಾಗೂ ಎಕ್ಸ್ ಎಲ್6 ಕಾರುಗಳನ್ನು ಸಹ ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂನಲ್ಲಿ ತಯಾರಿಸಲಾಗಿತ್ತು. ಎಸ್ ಪ್ರೆಸ್ಸೊ ಕಾರು ಈ ಪ್ಲಾಟ್‍‍ಫಾರಂನಲ್ಲಿ ತಯಾರಾಗುತ್ತಿರುವ ಸಣ್ಣ ಕಾರ್ ಆಗಿದೆ. ಹಾರ್ಟ್ ಟೆಕ್ ಪ್ಲಾಟ್‍‍ಫಾರಂನಲ್ಲಿ ತಯಾರಾಗುವ ಕಾರುಗಳು ಕ್ರಾಶ್ ಟೆಸ್ಟ್ ನಿಯಮಗಳಿಗೆ ಹೊಂದಿಕೊಳ್ಳುವಂತೆ ಬಲಿಷ್ಟವಾಗಿರುತ್ತವೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಈ ಪ್ಲಾಟ್‍‍ಫಾರಂನಲ್ಲಿ ತಯಾರಾಗುವ ಕಾರುಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಈ ಹ್ಯಾಚ್ ಬ್ಯಾಕ್ ಕಾರು 726 ಕೆ.ಜಿ ತೂಕವನ್ನು ಹೊಂದಿದೆ. ಈ ತೂಕವು ಎಂಟ್ರಿ ಲೆವೆಲ್‍‍ನ ಆಲ್ಟೋ 800 ಕಾರಿಗಿಂತ ಕಡಿಮೆಯಾಗಿದೆ. ಎಸ್ ಪ್ರೆಸ್ಸೊ ಆಲ್ಟೋ ಕೆ10 ಕಾರಿಗಿಂತ 43 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಎಸ್ ಪ್ರೆಸ್ಸೊ ಕಾರಿನ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ರೆನಾಲ್ಟ್ ಕ್ವಿಡ್ ಕೇವಲ 699 ಕೆ.ಜಿ ತೂಕವನ್ನು ಹೊಂದಿದೆ. ಮಾರುತಿ ಎಸ್-ಪ್ರೆಸ್ಸೊ ಕಾಂಪ್ಯಾಕ್ಟ್ ಡೈಮೆಂಷನ್‍‍ಗಳನ್ನು ಹೊಂದಿದೆ. ಈ ಕಾರು 3565 ಎಂಎಂ ಉದ್ದ, 1520 ಎಂಎಂ ಅಗಲ ಹಾಗೂ 1564 ಎಂಎಂ ಎತ್ತರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ರೆನಾಲ್ಟ್ ಕ್ವಿಡ್ ಕಾರು, ಮಾರುತಿ ಎಸ್ ಪ್ರೆಸ್ಸೊ ಕಾರಿಗಿಂತ 114 ಎಂಎಂ ಉದ್ದ, 59 ಎಂಎಂ ಅಗಲ ಹಾಗೂ 86 ಎಂಎಂನಷ್ಟು ಚಿಕ್ಕದಾಗಿದೆ. ಎಸ್ ಪ್ರೆಸ್ಸೊ ಹ್ಯಾಚ್‌ಬ್ಯಾಕ್ ರೆನಾಲ್ಟ್ ಕ್ವಿಡ್‌ಗಿಂತ 42 ಎಂಎಂ ಕಡಿಮೆ ವ್ಹೀಲ್‍‍ಬೇಸ್ ಹೊಂದಿದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಈ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಸ್ಟಾಂಡರ್ಡ್, ಎಲ್‍‍ಎಕ್ಸ್ ಐ, ವಿ‍ಎಕ್ಸ್ ಐ ಹಾಗೂ ವಿ‍ಎಕ್ಸ್ ಐ ಎಂಬ ನಾಲ್ಕು ವಿವಿಧ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಸ್ ಪ್ರೆಸ್ಸೊ ಕಾರಿನಲ್ಲಿ ಆಲ್ಟೊ ಕೆ10 ಕಾರಿನಲ್ಲಿ ಅಳವಡಿಸಲಾಗಿರುವಂತಹ 1.0 ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಈ ಎಂಜಿನ್ 68 ಬಿ‍‍ಹೆಚ್‍ಪಿ ಪವರ್ ಹಾಗೂ 90 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಅಥವಾ ಹೆಚ್ಚುವರಿ ಆಯ್ಕೆಯಾಗಿ ಎ‍ಎಂ‍‍ಟಿ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಆಲ್ಟೊ ಕೆ10 ಕಾರಿನಲ್ಲಿರುವ 1.0 ಲೀಟರಿನ ಎಂಜಿನ್ ಅನ್ನು ಬಿ‍ಎಸ್6 ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್ ಮಾಡಲಾಗಿಲ್ಲ. ಆದರೆ ಮಾರುತಿ ಸುಜುಕಿ ಕಂಪನಿಯು ಎಸ್ ಪ್ರೆಸ್ಸೊ ಕಾರಿನಲ್ಲಿ ಬಿ‍ಎಸ್6 ಎಂಜಿನ್ ಅನ್ನು ಅಳವಡಿಸಲಿದೆ.

ಹಾರ್ಟ್‍‍ಟೆಕ್ ಪ್ಲಾಟ್‍‍ಫಾರಂ ಹೊಂದಲಿದೆ ಮಾರುತಿ ಎಸ್‍‍ಪ್ರೆಸ್ಸೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಎಸ್ ಪ್ರೆಸ್ಸೊ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಫ್ಯೂಚರ್ ಎಸ್ ಕಾನ್ಸೆಪ್ಟ್ ಮೇಲೆ ಆಧಾರಿತವಾಗಿದೆ. ಈ ಕಾರು ತನ್ನ ಪ್ರತಿಸ್ಪರ್ಧಿ ರೆನಾಲ್ಟ್ ಕ್ವಿಡ್‌ ಕಾರಿನಲ್ಲಿರುವಂತಹ ಎಸ್‍‍ಯುವಿ-ಇಶ್ ಸ್ಟಾನ್ಸ್ ಅನ್ನು ಹೊಂದಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿರುವ ಎಸ್ ಪ್ರೆಸ್ಸೊ ಹ್ಯಾಚ್‍‍ಬ್ಯಾಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3 ಲಕ್ಷಗಳಿರುವ ಸಾಧ್ಯತೆಗಳಿವೆ.

Most Read Articles

Kannada
English summary
Maruti Suzuki S-Presso Receives Heartect Platform: Other Details Revealed Ahead Of Launch - Read in kannada
Story first published: Saturday, September 14, 2019, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X