ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಮಾರುತಿ ಸುಜುಕಿ ನಿರ್ಮಾಣದ ಹೊಚ್ಚ ಹೊಸ ಎಸ್-ಪ್ರೆಸ್ಸೊ ಕಾರು ಇದೇ 30ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಹೊಸ ಕಾರಿನ ಡಿಸೈನ್ ಕುರಿತಾದ ಮಾಹಿತಿಯುಳ್ಳ ಟೀಸರ್‌ವೊಂದನ್ನು ಬಿಡುಗಡೆ ಮಾಡಿದ್ದು, ಮೊದಲ ನೋಟದಲ್ಲೇ ಸೆಳೆಯುವ ಹೊಸ ಕಾರು ಚೆಲುವೆಯನ್ನು ಕೂಡಾ ಮೋಡಿ ಮಾಡಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಎಸ್-ಪ್ರೆಸ್ಸೊ ಕಾರು ವಿವಿಧ ಮಾದರಿಯ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಟಕ್ಕರ್ ನೀಡಲು ಎಸ್-ಪ್ರೆಸ್ಸೊ ಎನ್ನುವ ಸಣ್ಣ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಭಿನ್ನ ವೈಶಿಷ್ಟ್ಯತೆ ಹೊಂದಿರುವ ಎಸ್-ಪ್ರೆಸ್ಸೊ ಕಾರು ವ್ಯಯಕ್ತಿಕ ಕಾರು ಬಳಕೆದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಮಾರುತಿ ಸುಜುಕಿ ಕಾರು ಮಾರಾಟ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಅಗ್ಗದ ಬೆಲೆಯ ಪ್ಯಾಸೆಂಜರ್ ಕಾರುಗಳಿಂದಲೇ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಮಾರುತಿ ಸುಜುಕಿಯು ಪ್ರಸ್ತಕ ವರ್ಷದಲ್ಲಿ ಕೆಲವು ಹೊಸ ನಮೂನೆಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಮೈಕ್ರೊ ಎಸ್‌ಯುವಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯನ್ನೇ ಇದೀಗ ಎಸ್-ಪ್ರೆಸ್ಸೊ ಹೆಸರಿನೊಂದಿಗೆ ಬಿಡುಗಡೆ ಮಾಡುತ್ತಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಎಸ್-ಪ್ರೆಸ್ಸೊ ಕಾರುನ್ನು ಬಿಡುಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಉದ್ದಳತೆಯನ್ನು ಹೊಂದಿದೆ. ಮಾಹಿತಿಗಳ ಪ್ರಕಾರ ಹೊಸ ಕಾರು 3,565-ಎಂಎಂ ಉದ್ದ, 1,520-ಎಂಎಂ ಅಗಲ, 1,564-ಎಂಎಂ ಎತ್ತರ, 2,380-ಎಂಎಂ ವೀಲ್ಹ್‌ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 165/70 ಆರ್14 ಟೈರ್ ಸೌಲಭ್ಯವನ್ನು ಹೊಂದಿಯೆಂತೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಹಾಗೆಯೇ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಕೇಂದ್ರ ಸರ್ಕಾರವು 2020ರ ಎಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಾವಳಿ ಪ್ರಕಾರ ಹೊಸ ಎಂಜಿನ್ ಅನ್ನು ಹೊತ್ತು ಬರುತ್ತಿದ್ದು, 1.2-ಲೀಟರ್(1,200 ಸಿಸಿ) ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಎಸ್-ಪ್ರೆಸ್ಸೊ ಕಾರು ಮಾರುತಿ ಸುಜುಕಿಯ ಜನಪ್ರಿಯ ವ್ಯಾಗನ್ಆರ್ ಕಾರಿಗಿಂತಲೂ ಕೆಳಹಂತದ ಆವೃತ್ತಿಯಾಗಿ ಮಾರಾಟವಾಗಲಿದ್ದು, ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಹ್ಯುಂಡೈ ವೆನ್ಯೂ ಕಾರಿಗೂ ಇದು ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಇನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಮತ್ತೊಂದು ಗೇಮ್‌ಚೆಂಜರ್ ಕಾರು ಎಸ್-ಪ್ರೆಸ್ಸೊ ಮಾದರಿಯು ಮತ್ತಷ್ಟು ಸದ್ದು ಮಾಡಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಎಸ್-ಪ್ರೆಸ್ಸೊ ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸಲಿದ್ದು, ಮೈಕ್ರೊ ಎಸ್‌ಯುವಿ ಕಾರಿನ ಗುಣಲಕ್ಷಣಗಳಾದ 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿದೆ. ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದ್ದು, ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆ ಹೊಂದಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಈ ಮೂಲಕ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ನಗರ ಪ್ರದೇಶಗಳಲ್ಲಿ ವ್ಯಯಕ್ತಿಕ ಕಾರು ಬಳಕೆಗಾಗಿ ಇದು ಅತಿಹೆಚ್ಚು ಬೇಡಿಕೆ ಸೃಷ್ಠಿಸುವ ನೀರಿಕ್ಷೆಯಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಮಾದರಿಯು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಚೆಲುವೆಯ ಕಣ್ಣಲ್ಲಿ ಕಂಡ ಮಾರುತಿ ಎಸ್-ಪ್ರೆಸ್ಸೊ ಹೀಗಿರಲಿದೆ ನೋಡಿ..

ಎಸ್-ಪ್ರೆಸ್ಸೊ ಕಾರಿನ ಬೆಲೆಗಳು(ಅಂದಾಜು)

ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರು ಒಟ್ಟು ನಾಲ್ಕು ವೆರಿಯೆಂಟ್‍‌ಗಳ ಮೂಲಕ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.50 ಲಕ್ಷಕ್ಕೆ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ.

Most Read Articles

Kannada
English summary
Maruti s-presso second teaser video released details. Read in Kannada.
Story first published: Monday, September 23, 2019, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X