ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಮಾರುತಿ ಸುಜುಕಿ ಕಂಪನಿಯು ಯಾವಾಗಲೂ ಭಾರತೀಯ ಆಟೋಮೋಬೈಲ್ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ತನ್ನ ಎಂಟ್ರಿ ಲೆವೆಲ್ ಕಾರುಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಆಟೋಮ್ಯಾಟಿಕ್ ಗೇರ್‍‍ಗಳನ್ನು ಒದಗಿಸಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಈ ರೀತಿಯ ಕಾರುಗಳನ್ನು ಒದಗಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ಮಾರುತಿ ಕಂಪನಿ ಹೊಂದಿದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಮಾರುತಿ ಸುಜುಕಿಯ ಆಟೋಮ್ಯಾಟಿಕ್ ಕಾರುಗಳನ್ನು ಸದ್ಯಕ್ಕೆ ಮೂರು ವಿವಿಧ ಟ್ರಾನ್ಸ್ ಮಿಷನ್ ಬಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವುಗಳೆಂದರೆ - ಎಟಿ, ಕಂಟ್ಯೂನಿಯಸ್ಲಿ ವೆರಿಯಬಲ್ ಟ್ರಾನ್ಸ್ ಮಿಷನ್ (ಸಿ‍‍ವಿ‍‍ಟಿ) ಮತ್ತು ಆಟೋಮೇಟೆಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ (ಎ‍ಎಂ‍‍ಟಿ) - ಇವುಗಳನ್ನು ಆಟೋ ಗೇರ್ ಶಿಫ್ಟ್ (ಎ‍‍ಜಿ‍ಎಸ್) ಎಂದು ಕರೆಯಲಾಗುತ್ತದೆ. ಮಾರುತಿ ಸುಜುಕಿ ಕಂಪನಿಯು 2014ರಲ್ಲಿ ಮೊದಲ ಬಾರಿಗೆ ಸೆಲೆರಿಯೋ ಹ್ಯಾಚ್‍‍ಬ್ಯಾಕ್ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್ ಸಿಸ್ಟಂ ಅನ್ನು ಪರಿಚಯಿಸಿತು.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಅದಾದ ನಂತರ ಆಲ್ಟೋ ಕೆ10, ವ್ಯಾಗನ್ ಆರ್, ಸ್ವಿಫ್ಟ್, ಇಗ್ನಿಸ್, ಡಿಜೈರ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍‍ಯು‍‍ವಿಯಾದ ವಿಟಾರಾ ಬ್ರಿಝಾ ವಾಹನಗಳಲ್ಲಿ ಅಳವಡಿಸಲಾಗಿದೆ. ಎಜಿ‍ಎಸ್ ಸಿಸ್ಟಂ, ಮ್ಯಾನುಯಲ್ ಟ್ರಾನ್ಸ್ ಮಿಷನ್ ನಿಂದ ಪವರ್ ಪಡೆದುಎಲೆಕ್ಟ್ರೊ ಹೈಡ್ರಾಲಿಕ್ ಸಿಸ್ಟಂ ಬಳಸುವ ರೆಗ್ಯುಲರ್ ಎ‍ಎಂ‍‍ಟಿ ಟ್ರಾನ್ಸ್ ಮಿಷನ್ ನಂತೆಯೇ ಇದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಈ ಸಿಸ್ಟಂ ಕ್ಲಚ್ ಹಾಗೂ ಗೇರ್ ಶಿಫ್ಟ್ ನ ಕಾರ್ಯವನ್ನು ಆಟೋಮ್ಯಾಟಿಕ್ ಆಗಿ ನಿಯಂತ್ರಿಸುತ್ತದೆ, ಇದರಿಂದ ಚಾಲಕನಿಗೆ ಚಾಲನೆ ಸುಲಭವಾಗಲಿದೆ. ಎಜಿ‍ಎಂ ಸಿಸ್ಟಂನಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚುವರಿಯಾಗಿ ಟ್ರಾನ್ಸ್ ಮಿಷನ್ ಕಂಟ್ರೋಲ್ ಯೂನಿಟ್ ಅಳವಡಿಸಿದ್ದು, ಇದು ಹೈಡ್ರಾಲಿಕ್ ಸಿಸ್ಟಂ‍‍ನ ಕಾರ್ಯವನ್ನು ನಿಯಂತ್ರಿಸುತ್ತದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಇದು ಆಕ್ಸೆಲೆರೇಟರ್ ಪೆಡಾಲ್‍‍ನ ಮೇಲೆ ಹಾಗೂ ವಾಹನವು ಚಲಿಸುತ್ತಿರುವ ವೇಗದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಮಾರುತಿ ಸುಜುಕಿಯ ಆಟೋ ಗೇರ್ ಶಿಫ್ಟ್ ಚಾಲಕನಿಗೆ ಅನೇಕ ಆಯ್ಕೆಗಳನ್ನು ನೀಡುತ್ತದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಮಾರುತಿ ಸುಜುಕಿಯ ವಾಹನಗಳು, ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ವಾಹನಗಳು ನೀಡುವಷ್ಟೆ ಮೈಲೇಜ್ ನೀಡುತ್ತವೆ. ಈ ವಾಹನಗಳು ಭಾರತದಲ್ಲಿ ಜನಪ್ರಿಯವಾಗುತ್ತಿವೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಏಕೆಂದರೆ, ಭಾರತದಲ್ಲಿ ಕಾರನ್ನು ಖರೀದಿಸುವ ಮೊದಲು ಕಾರಿನ ಮೈಲೇಜಿನ ಬಗ್ಗೆ ಹೆಚ್ಚು ವಿಚಾರಿಸಲಾಗುತ್ತದೆ. ಆದ ಕಾರಣ ಹೊಸ ಕಾರನ್ನು ಕೊಳ್ಳುವವರಿಗಾಗಿ ಎ‍‍ಜಿ‍ಎಸ್ ಉತ್ತಮವಾದ ಆಯ್ಕೆಯಾಗಿದೆ. ಮ್ಯಾನುಯಲ್ ಟ್ರಾನ್ಸ್ ಮಿಷನ್ ಕಾರುಗಳಿಂದ ಆಟೋ ಮ್ಯಾಟಿಕ್ ಟ್ರಾನ್ಸ್ ಮಿಷನ್‍ ಕಾರುಗಳಿಗೆ ಬದಲಾವಣೆ ಬಯಸುವವರು ಈ ವಾಹನಗಳನ್ನು ಕೊಳ್ಳಬಹುದಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಪ್ರತಿ ಬಾರಿ ಗೇರ್ ಬದಲಿಸುವಾಗ ಕ್ಲಚ್ ಪೆಡಲ್ ಬಳಸುವ ಚಿಂತೆಯಿಲ್ಲದೇ, ಆಟೋಮ್ಯಾಟಿಕ್ ಕಾರಿನ ಚಾಲಕನು, ರಸ್ತೆಯ ಮೇಲೆ ಗಮನವಿರಿಸಿ, ಸುರಕ್ಷತೆಯಿಂದ ಕಾರು ಚಾಲನೆ ಮಾಡಬಹುದು.

MOST READ: ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಈ ವಾಹನಗಳಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಅನುಕೂಲವಾಗಲಿದೆ. ಅಲ್ಲಿ ಹೆಚ್ಚು ತಿರುವುಗಳು, ಹೇರ್‍‍ಪಿನ್‍‍ನಂತಹ ರಸ್ತೆಗಳಿದ್ದು, ಗೇರ್‍‍ಗಳನ್ನು ಬದಲಿಸುವಾಗ ಅನೇಕ ಏರಿಳಿತಗಳಾಗುತ್ತವೆ. ಮಾರುತಿ ಸುಜುಕಿಯ ಎ‍‍ಜಿ‍ಎಸ್ ಗೇರ್‍‍ಬಾಕ್ಸ್ ನೆರವಿನಿಂದಾಗಿ ಚಾಲಕನು ಗುಡ್ಡಗಾಡು ಪ್ರದೇಶಗಳಲ್ಲಿ ಗೇರ್ ಬದಲಾವಣೆ ಹಾಗೂ ಕ್ಲಚ್ ನ ಚಿಂತೆಯಿಲ್ಲದೇ ತಿರುವುಗಳಿರುವ ಬೆಟ್ಟ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಗಮನವಿಡಬಹುದಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಗೇರ್ ಬದಲಾವಣೆಗಳ ಮೇಲೆ ಇನ್ನೂ ಸ್ವಲ್ಪ ನಿಯಂತ್ರಣ ಹೊಂದಬಯಸುವ ಚಾಲಕರಿಗಾಗಿ, ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಗಳ ಜೊತೆಯಲ್ಲಿ ಮ್ಯಾನುಯಲ್ ಗೇರ್‍‍ಬಾಕ್ಸ್ ಗಳನ್ನು ಸಹ ನೀಡಲಾಗಿದೆ. ಮ್ಯಾನುಯಲ್ ಮೋಡ್‍‍ನಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೈಡ್ರಾಲಿಕ್ಸ್ ನ ಜೊತೆಯಲ್ಲಿ ಸಿಕ್ವೆಂಷಿಯಲ್ ಗೇರ್‍‍ಬಾಕ್ಸ್ ಆಗಿ ಕಾರ್ಯನಿರ್ವಹಿಸಿ ಕ್ಲಚ್ ನ ಬಗ್ಗೆ ಗಮನ ನೀಡುತ್ತದೆ. ಇದರಲ್ಲಿ ಚಾಲಕನು ಗೇರ್‍‍ಗಳನ್ನು ಬದಲಿಸಬಹುದು. ಚಾಲಕನು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಿನ ವೇಗ ಬಯಸಿದರೆ, ಗೇರ್‍‍ಗಳನ್ನು ಮ್ಯಾನುಯಲ್ ಆಗಿ ಬದಲಿಸಬಹುದಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಎಟಿ ಹಾಗೂ ಸಿವಿ‍‍ಟಿ ಗೇರ್ ಬಾಕ್ಸ್ ಗಳಿಗಿಂತ ಭಿನ್ನವಾಗಿರುವ ಆಟೋಮ್ಯಾಟಿಕ್ ವಾಹನಗಳು ಗ್ರಾಹಕರಿಗೆ ಹೆಚ್ಚು ಹೊರೆಯಾಗಲಾರವು. ಮ್ಯಾನುಯಲ್ ಟ್ರಾನ್ಸ್ ಮಿಷನ್ ಮಾದರಿಯ ವಾಹನಗಳಿಗಿಂತ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮಾದರಿಯ ವಾಹನಗಳ ಬೆಲೆಯು ಸುಮಾರು ರೂ.50,000 ಗಳಷ್ಟು ಜಾಸ್ತಿಯಾಗಿರಲಿದೆ.

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಮಾರುತಿ ಸುಜುಕಿಯ ಆಟೋಮ್ಯಾಟಿಕ್ ವಾಹನಗಳು, ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ವಾಹನಗಳು ನೀಡುವಷ್ಟೇ ಮೈಲೇಜ್ ನೀಡುತ್ತವೆ. ಆದರೆ ಗೇರ್ ಹಾಗೂ ಕ್ಲಚ್‍‍ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆಟೋಮ್ಯಾಟಿಕ್ ಗೇರ್ ಹೊಂದಿರುವ ವಾಹನಗಳನ್ನು ನಿಭಾಯಿಸುವುದು ಸುಲಭ ವಾಗಿದೆ. ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸುವಂತಿಲ್ಲ. ಅಲ್ಲದೇ ಮ್ಯಾನುಯಲ್ ಟ್ರಾನ್ಸ್ ಮಿಷನ್ ವಾಹನಗಳಿಗಿಂತ ಹೆಚ್ಚೇನೂ ದುಬಾರಿಯಲ್ಲದ ಕಾರಣದಿಂದಾಗಿ ಅನೇಕ ಭಾರತೀಯರು ಮಾರುತಿ ಸುಜುಕಿಯ ಆಟೋಮ್ಯಾಟಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ.

Most Read Articles

Kannada
English summary
Maruti Suzuki AGS: The Automatic Transmission For Every Indian - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X