19 ವರ್ಷದಲ್ಲಿ 38 ಲಕ್ಷ ಆಲ್ಟೋ ಕಾರು ಮಾರಾಟ ಮಾಡಿದ ಮಾರುತಿ

ಮಾರುತಿ ಸುಜುಕಿ ಆಲ್ಟೋ ಕಾರ್ ಅನ್ನು ಭಾರತದಲ್ಲಿ 2000ನೇ ಇಸವಿಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದಾಗಿನಿಂದ ಈ ಕಾರು ಮಾರುತಿ ಸುಜುಕಿ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಮಾರುತಿ ಸುಜುಕಿ ಕಂಪನಿಯು ಇದುವರೆಗೂ ಆಲ್ಟೋ ಕಾರಿನ 38 ಲಕ್ಷ ಯುನಿಟ್‍‍ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಈ ಕಾರು ಕಳೆದ 15 ವರ್ಷಗಳಿಂದ ಮಾರುತಿ ಕಂಪನಿಯ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ ಎಂದು ಕಂಪನಿಯು ಹೇಳಿದೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಆಲ್ಟೋ ಕಾರಿಗಿಂತ ಮೊದಲು ಮಾರುತಿ 800 ಕಾರು ಹೆಚ್ಚು ಜನಪ್ರಿಯವಾಗಿತ್ತು. ಮಾರುತಿ 800 ಕಾರಿನ ಬದಲಿಗೆ ಆಲ್ಟೋ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ 8 ವರ್ಷಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕಾರಿನ 10 ಲಕ್ಷ ಯುನಿಟ್‍‍ಗಳನ್ನು ಮಾರಾಟ ಮಾಡಿತ್ತು.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಕೆಲ ವರ್ಷಗಳ ನಂತರ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಫೀಚರ್‍‍ಗಳಿರುವ ಆಲ್ಟೋ ಕೆ 10 ಕಾರ್ ಅನ್ನು ಬಿಡುಗಡೆಗೊಳಿಸಿತು. ಆಲ್ಟೋ ಕೆ 10 ಕಾರು ಬಲಶಾಲಿಯಾದ ಎಂಜಿನ್, ಹೆಚ್ಚು ಸ್ಪೇಸ್ ಹಾಗೂ ಹೆಚ್ಚು ಪ್ರೀಮಿಯಂ ಅಂಶಗಳನ್ನು ಒಳಗೊಂಡಿದೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ವರ್ಷದಿಂದ ವರ್ಷಕ್ಕೆ ಆಲ್ಟೋ ಕಾರಿನ ಮಾರಾಟವು ಹೆಚ್ಚಾಗುತ್ತಲೇ ಇದೆ. 2012ರ ವೇಳೆಗೆ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕಾರಿನ 20 ಲಕ್ಷ ಯುನಿಟ್‍‍ಗಳನ್ನು ಮಾರಾಟ ಮಾಡಿತ್ತು. ಆದರೆ 2014ರ ಗ್ಲೋಬಲ್ ಎನ್‍‍ಸಿ‍ಎ‍‍ಪಿ ಕ್ರಾಶ್ ಟೆಸ್ಟ್ ನಲ್ಲಿ ಸೊನ್ನೆ ಅಂಕವನ್ನು ಪಡೆದ ನಂತರ ಈ ಕಾರಿನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಗ್ಲೋಬಲ್ ಎನ್‌ಸಿಎಪಿ ಈ ಕಾರಿನ ರಚನೆಯೇ ಅಸಮರ್ಪಕವೆಂದು ಹೇಳಿತು. ಇದರಿಂದಾಗಿ ಈ ಕಾರಿನಲ್ಲಿ ಪ್ರಯಾಣಿಸುವವರಿಗೆ ಮಾರಣಾಂತಿಕ ಗಾಯಗಳು ಉಂಟಾಗುತ್ತವೆ. ಈ ಕಾರಿನಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸುವುದರಿಂದಲೂ ಸಹ ಗಂಭೀರವಾದ ಗಾಯದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಹೇಳಲಾಯಿತು.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಈ ಸುದ್ದಿಯಿಂದಾಗಿ ಆಲ್ಟೋ ಕಾರುಗಳ ಮಾರಾಟ ಪ್ರಮಾಣವು ಕುಸಿತಗೊಂಡಿತ್ತು. ಈ ಸೆಗ್‍‍ಮೆಂಟಿನಲ್ಲಿ ಹೊಸ ಕಾರುಗಳು ಬಿಡುಗಡೆಯಾಗಿದ್ದು ಸಹ ಆಲ್ಟೋ ಕಾರುಗಳ ಮಾರಾಟಕ್ಕೆ ತೊಡಕನ್ನು ಉಂಟು ಮಾಡಿತ್ತು. 2016ರಲ್ಲಿ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕಾರುಗಳ 30 ಲಕ್ಷ ಯುನಿಟ್‍‍ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿತು.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಸುರಕ್ಷತಾ ಫೀಚರ್‍‍‍ಗಳ ಬಗ್ಗೆ ಹೇಳುವುದಾದರೆ, ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಆಲ್ಟೊ 800 ಹಾಗೂ ಆಲ್ಟೊ ಕೆ 10 ಕಾರುಗಳಲ್ಲಿ ಸುರಕ್ಷತಾ ಫೀಚರ್‍‍ಗಳನ್ನು ಸ್ಟ್ಯಾಂಡರ್ಡ್‌ ಆಗಿ ಅಳವಡಿಸಿರುವುದಾಗಿ ತಿಳಿಸಿದೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಈ ಫೀಚರ್‍‍‍ಗಳಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ ), ರೇರ್ ಪಾರ್ಕಿಂಗ್ ಸೆನ್ಸಾರ್‌, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಸೀಟ್‌ಬೆಲ್ಟ್ ರಿಮ್ಯಾಂಡರ್‍‍ಗಳು ಸೇರಿವೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಆಲ್ಟೋ 800 ಹಾಗೂ ಆಲ್ಟೋ ಕೆ 10 ಕಾರುಗಳಲ್ಲಿ ಬಿಎಸ್ 6 ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಶಶಾಂಕ್ ಶ್ರೀವಾಸ್ತವರವರು ಮಾತನಾಡಿ, ಆಲ್ಟೋ ಕಾರು ಖರೀದಿಸುವ ಸುಮಾರು 54% ಗ್ರಾಹಕರು ಮೊದಲ ಬಾರಿಗೆ ಕಾರು ಖರೀದಿಸುವವರಾಗಿದ್ದಾರೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಕಾಂಪ್ಯಾಕ್ಟ್ ವಿನ್ಯಾಸ, ಹೆಚ್ಚಿನ ಇಂಧನ ದಕ್ಷತೆ, ನವೀಕರಿಸಿದ ಸುರಕ್ಷತಾ ಫೀಚರ್ ಮುಂತಾದ ಹಲವಾರು ಕಾರಣಗಳಿಗಾಗಿ ಆಲ್ಟೋ ಕಾರು ಎಂಟ್ರಿ ಲೆವೆಲ್ ಕಾರು ಖರೀದಿದಾರರ ಮೊದಲ ಆದ್ಯತೆಯ ಆಯ್ಕೆಯಾಗಿದೆ ಎಂದು ಹೇಳಿದರು.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ ಆಲ್ಟೋ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾರ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ. ಆಲ್ಟೋ ಕಾರು, ರೆನಾಲ್ಟ್ ಕ್ವಿಡ್‍‍ನಂತಹ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ.

19 ವರ್ಷದಲ್ಲಿ 38 ಲಕ್ಷ ಮಾರಾಟವಾದ ಮಾರುತಿ ಸುಜುಕಿ ಆಲ್ಟೋ

ಇದರ ಜೊತೆಗೆ ತನ್ನದೇ ಕಂಪನಿಯ ಮಾರುತಿ ಸುಜುಕಿ ಎಸ್ ಪ್ರೆಸ್ಸೊ ಕಾರಿನಿಂದಲೂ ಸಹ ಪೈಪೋಟಿಯನ್ನು ಎದುರಿಸುತ್ತಿದೆ. ಇದು ಆಲ್ಟೋ ಕಾರುಗಳ ಮಾರಾಟದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Maruti suzuki alto 38 lakhs units sold in 19 years - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X