ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಮಾರುತಿ ಸುಜುಕಿ ಸಂಸ್ಥೆಯು ಜಾರಿಗೆ ಬರಲಿರುವ ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ತನ್ನ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದೆ. ಹೀಗಾಗಿ ಡೀಸೆಲ್ ಕಾರುಗಳ ಬದಲಾಗಿ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತುನೀಡುತ್ತಿದ್ದು, ಆಲ್ಟೋ ಮಾದರಿಯಲ್ಲೂ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿದೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

2020ರ ಏಪ್ರಿಲ್ ನಂತರ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್ ಜೊತೆಗೆ ಸಿಎನ್‌ಜಿ ಮತ್ತು ಪೆಟ್ರೋಲ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ವರ್ಷನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಪ್ರೇರಿತ ಆಲ್ಟೋ 800 ಮತ್ತು ಬಲೆನೊ ಪೆಟ್ರೋಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ನಿನ್ನೆಯಷ್ಟೇ ಸಿಫ್ಟ್ ಮತ್ತು ವ್ಯಾಗನ್‌ಆರ್ ಪೆಟ್ರೋಲ್ ಆವೃತ್ತಿಗಳನ್ನು ಸಹ ಹೊಸ ನಿಯಮದಂತೆ ಉನ್ನತಿಕರಿಸಿ ಬಿಡುಗಡೆ ಮಾಡಿದೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಇದರ ಜೊತೆಗೆ ಆಲ್ಟೋ 800 ಆವೃತ್ತಿಯಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದ್ದು, ಕಡಿಮೆ ಮಾಲಿನ್ಯ ಉತ್ಪಾದನೆಯ ಜೊತೆಗೆ ಉತ್ತಮ ಮೈಲೇಜ್ ನೀಡುವ ಸಿಎನ್‌ಜಿ ಕಾರು ಆಯ್ಕೆಯು ಮಾರುತಿ ಸುಜುಕಿ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿವೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಆಲ್ಟೋ 800 ಮಾದರಿಯ ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದ್ದು, ಸಾಮಾನ್ಯ ಪೆಟ್ರೋಲ್ ಕಾರುಗಳಿಂತ ಇವುಗಳು ರೂ.60 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿವೆ.

ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮಾದರಿಯ ಆಲ್ಟೋ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.94 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 3.72 ಲಕ್ಷ ಬೆಲೆ ಹೊಂದಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ ಆಲ್ಟೋ ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ವೆರಿಯೆಂಟ್‌ಗಳು ಕ್ರಮವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 4.11 ಲಕ್ಷ ಮತ್ತು ರೂ. 4.14 ಲಕ್ಷ ಬೆಲೆ ಹೊಂದಿವೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಇನ್ನುಳಿದಂತೆ ಹೊಸ ಕಾರುಗಳಲ್ಲಿ ಯಾವುದೇ ಬಲಾವಣೆ ತರದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳು ಬಿಡುಗಡೆ ಮಾಡಲಾದ ಹೊಸ ತಾಂತ್ರಿಕ ಅಂಶಗಳನ್ನೇ ಮುಂದುವರಿಸಿದ್ದು, ಪವರ್ ಸ್ಟಿರಿಂಗ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ರಂಟ್ ಪವರ ವಿಂಡೋ, ಸಿಲ್ವರ್ ಇಂಟಿರಿಯರ್ ಆಕ್ಸೆಟ್, ರಿಯರ ಚೈಲ್ಡ್ ಲಾಕ್, ರಿಮೋಟ್ ಬೂಟ್, ಬಾಡಿ ಕಲರ್ ಹ್ಯಾಂಡಲ್ ಮತ್ತು ರಿಯರ್ ವ್ಯೂವ್ ಮಿರರ್, ಡಬಲ್ ಡೀನ್ ಇನ್ಪೋಟೈನ್‌ಮೆಂಟ್, ಯುಎಸ್‌ಬಿ, ಬ್ಲ್ಯೂಟೂಥ್ ಮತ್ತು ಆಕ್ಸ್ ಇನ್ ಸೌಲಭ್ಯವನ್ನು ಹೊಂದಿದೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಜೊತೆಗೆ ಈ ಹಿಂದಿಗಿಂತಲೂ ಅತ್ಯುತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್ಟೋ 800 ಫೇಸ್‌ಲಿಫ್ಟ್ ಮಾದರಿಯಲ್ಲಿ ಎಬಿಸ್, ಡ್ರೈವರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹೈ ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಆಯ್ಕೆ ರೂಪದಲ್ಲಿ ಪ್ರಯಾಣಿಕರ ಆಸದ ಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಎಂಜಿನ್ ಸಾಮರ್ಥ್ಯ

ಆಲ್ಟೋ 800 ಮಾದರಿಯು ಈ ಹಿಂದಿನಂತೆಯೇ 796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದೀಗ ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದೆ. ಈ ಮೂಲಕ ಹೊಸ ಎಂಜಿನ್ ಮಾದರಿಯು ಈ ಬಾರಿ ಪರ್ಫಾಮೆನ್ಸ್ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಫೈವ್ ಸ್ಪೀಡ್‌ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 48-ಬಿಎಚ್‌ಪಿ ಮತ್ತು 69-ಎನ್ಎಂ ಟಾರ್ಕ್ ಉತ್ಪಾದಿಸಿ ಉತ್ತಮ ಮೈಲೇಜ್ ಹಿಂದಿರುಗಿಸುತ್ತೆ.

MOST READ: ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ರಸ್ತೆಗಿಳಿದ ಮಾರುತಿ ಸುಜುಕಿ ಆಲ್ಟೋ ಸಿಎನ್‌ಜಿ

ಸದ್ಯ ಮಾರುಕಟ್ಟೆಯಲ್ಲಿ ಆಲ್ಟೋ 800 ಫೇಸ್‌ಲಿಫ್ಟ್ ಕಾರು ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿರುವ ವಿಎಕ್ಸ್‌ಐ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.3.72 ಲಕ್ಷ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Maruti Suzuki Alto CNG launched. Read in Kannada.
Story first published: Saturday, June 15, 2019, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X