ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಹಣ ಇದ್ದವರಿಗೆ ವಾಹನ ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಒಂದು ವಾಹನ ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ವಾಹನ ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪಾರವು ವಾಹನ ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಹೊಸ ಮಾರುತಿ ಸುಜುಕಿ ಆಲ್ಟೋ ಕಾರು ಖರೀದಿ ಮಾಡಿದ ಗ್ರಾಹಕನಿಗೆ ಅಲ್ಲಿನ ಸ್ಥಳೀಯ ಡೀಲರ್‍‍ಗಳು ಆತನಿಗೆ ಸರಿಯಾಗಿ ಟೋಪಿ ಹಾಕಲು ಮುಂದಾಗಿದ್ದರು. ಆದರೆ ಹೊಸ ಕಾರಿನಲ್ಲಿ ತಾಂತ್ರಿಕ ದೋಷವನ್ನು ಅರಿತ ಮಾಲೀಕನು ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿದ್ದು, ದೋಷವಿರುವುದು ಸಾಬೀತಾದ ಹಿನ್ನೆಲೆ ಡೀಲರ್ಸ್ ಕಾರು ಮಾಲೀಕನಿಗೆ ಸುಮಾರು ರೂ. 1 ಲಕ್ಷದ ಪರಿಹಾರ ನೀಡಿದ್ದಾರೆ.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಸುದರ್ಶನ್ ರೆಡ್ದಿ ಎಂಬ ಹೈದ್ರಾಬಾದ್ ನಿವಾಸಿಯಾಗಿದ್ದು, ಜುಲೈ 2014ರಂದು ವರುಣ್ ಮೋಟಾರ್ಸ್ ಬಳಿ ಹೊಸ ಮಾರುತಿ ಸುಜಿಕಿ ಆಲ್ಟೋ ಕಾರನ್ನು ಖರೀದಿ ಮಾಡಿದ್ದರು. ಕಾರು ಖರೀದಿ ಮಾಡಿದ 6 ತಿಂಗಳಿನಲ್ಲಿ ಕಾರಿನಲ್ಲಿ ದೊಡ್ಡ ಪ್ರಮಾಣದ ತಾಂತ್ರಿಕ ದೋಷವಿರುವುದನ್ನು ಸುದರ್ಶನ್ ಪತ್ತೆಹಚ್ಚಿದ್ದರು.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಅದೇನೆಂದರೆ ಸುದರ್ಶನ್‍‍ರವರು ಖರೀದಿ ಮಾಡಲಾದ ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನ ಮುಂಭಾಗದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಬಿಟ್ಟಿಲ್ಲದೇ ಬಲ ಭಾಗದ ಬಾಗಿಲಿನಲ್ಲಿ ಕಳಪೆ ಲಾಕಿಂಗ್, ಎಂಜಿನ್ ನಿಂದ ಕರ್ಕಷ ಶಬ್ದ ಮತ್ತು ದೋಷಯುಕ್ತ ಹಾರ್ನ್ ಜೋಡಣೆ ಮಾಡಿರುವುದು ಪತ್ತೆಯಾಗಿತ್ತು.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಇದನ್ನು ಡೀಲರ್‍‍ಗಳ ಗಮನಕ್ಕೆ ತಂದು ಇದರಲ್ಲಿನ ಲೋಪವನ್ನು ಸರಿ ಮಾಡಿ ಕೊಡಿ ಎಂದು ಹೋದಾಗ ಡೀಲರ್‍‍‍ಗಳು ಕೇವಲ ಕಾರಿನಲ್ಲಿದ್ದ ದೋಷಯುಕ್ತ ಹಾರ್ನ್ ಮಾತ್ರ ರೀಪೇರಿ ಮಾಡಿದ್ದರು. ಆದ್ರೆ ಇನ್ನುಳಿದ ತಾಂತ್ರಿಕ ದೋಷಗಳನ್ನು ಸರಿಪಡಿಸಲು ನಿರಾಕರಿಸಿದ್ದರು.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ರೀಪೆರಿ ನಂತರವೂ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ಮತ್ತದೇ ಕರ್ಕಷ ಶಬ್ದ ಹೊರ ಹಾಕುತ್ತಿದ್ದ ಎಂಜಿನ್ ಅನ್ನು ಸುದರ್ಶನ್ ಗಮನಿಸಿದರು ಮತ್ತು ಹಾರ್ನ್ ಕೂಡಾ ಹಾಗೆಯೇ ಕೆಲಸ ಮಾಡುತ್ತಿತ್ತು. ದೋಷಯುಕ್ತ ಹಾರ್ನ್ ಇದ್ದ ಕಾರಣ ಸುದರ್ಶನ್‍ರವರು ರಸ್ತೆಗಳಲ್ಲಿ ಕಾರನ್ನು ನಿಧಾನವಾಗಿ ಚಲಿಸಲು ಮುಂದಾದರು ಮತ್ತು ಇದರಿಂದ ಒಂದು ಸಣ್ಣ ಅಪಘಾತ ಕೂಡಾ ಸಂಭವಿಸಿತು.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಇದರ ಜೊತೆಗೆ ಎಂಜಿನ್ ಹೆಚ್ಚು ಇಂಧನವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಮನೆ ಇಂದ ಸುಮಾರು ಕಿಲೋಮೀಟರ್‍‍ಗಳ ದೂರವಿದ್ದ ಆಫಿಸ್‍ಗೆ ದಿನನಿತ್ಯ ಚಲಿಸುವಾಗ ತಿಳಿದುಕೊಂಡರು. ಕಾರು ರಿಪೇರಿ ಮಾಡಿಸಿದಾಗ ಸರಿಯಾಗಿ ಡೀಲರ್‍‍ಗಳು ಅವರ ಕಾರ್ಯ ನಿರ್ವಹಿಸಲಿಲ್ಲವೆಂದು ಈ ಬಾರಿ ಗ್ರಾಹಕರ ನ್ಯಾಯಾಲಯದಲ್ಲಿ ಸುದರ್ಶನ್ ದೂರು ನೀಡಿದರು.

MOST READ: ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಡೀಲರ್ ಹೆಳಿದ್ದು ಹೀಗೆ

ತಮ್ಮ ಕಡೆಯಿಂದ ಮಾರುತಿ ಪ್ರತಿನಿಧಿಗಳು ಶ್ರೀ ಸುದರ್ಶನ್ ಅವರು ಸಲ್ಲಿಸಿದ ಮೂಲ ದೂರು ದೋಷಯುಕ್ತ ಕಾರಿಗೆ ಮಾತ್ರ ಮತ್ತು ಕೆಲಸ ಮಾಡದ ಕಾರಿಗೆ ಅಲ್ಲ ಎಂದು ಪ್ರತಿಪಾದಿಸಿದರು. ಅದರಂತೆ, ದುರಸ್ತಿ ಮಾಡುವುದು ಸ್ವಾಭಾವಿಕ ಕೆಲಸವಾಗಿತ್ತು ಎಂದು ಡೀಲರ್ ತಿಳಿಸಿದರು.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಸುದರ್ಶನ್‍ರವರು ಹೇಳಿದ ಹಾಗೆಯೇ ಆ ತಾಂತ್ರಿಕ ದೋಷವನ್ನು ನಾವು ಆ ದಿನದಂದೇ ಸರಿ ಪಡಿಸಿದ್ದೇವೆ ಎಂದು ಕೂಡಾ ವಾದ ಮಾಡಿದರು. ದೋಷಯುಕ್ತ ಹಾರ್ನ್‍ನಿಂದ ಉಂಟಾದ ಅಪಘಾತಕ್ಕೆ ಇದು ಸುಳ್ಳು ನಿಂದನೆ ಎಂದು ಡೀಲರ್ ಹೇಳಿದರು. ವರುಣ್ ಮೋಟಾರ್ಸ್ ತಮ್ಮ ಕಡೆಯಿಂದ ಯಾವುದೇ ಕೊರತೆಯಿಲ್ಲ ಮತ್ತು ಖಾತರಿಯ ಅವಧಿಯಲ್ಲಿ ಸೇವೆಗಳನ್ನು ಒದಗಿಸುವುದಕ್ಕೆ ಅವು ಸೀಮಿತವಾಗಿವೆ ಎಂದು ಹೇಳಿದರು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಗ್ರಾಹಕ ನ್ಯಾಯಾಲಯದಿಂದ ಅಂತಿಮ ತೀರ್ಪು

ಗ್ರಾಹಕ ನ್ಯಾಯಾಲಯವು ಸುದರ್ಶನ್ ಮತ್ತು ಡೀಲರ್‍‍ಗಳ ವಾದ ಪ್ರತಿವಾದಗಳನ್ನು ಪರಿಶೀಲಿಸಿದ ನಂತರ ದೋಷಯುಕ್ತ ಹಾರ್ನ್ ಕಾರಿನಲ್ಲಿರುವುದು ಅಪಾಯಕಾರಿ. ಇದರಿಂದ ಅಪಘಾತಗಳು ಸಂಭವಿಸಬಹುದು. ಹಾಗೆಯೇ ನ್ಯಾಯಾಲಯವು ಅಪಘಾತದ ಬಗ್ಗೆ ಇದ್ದ ವಾದವನ್ನು ತಿರಸ್ಕರಿಸಿ ಸುದರ್ಶನ್‍‍ರವರಿಗೆ ವರುಣ್ ಮೋಟಾರ್ಸ್ ರೂ. 1 ಲಕ್ಷದ ಪರಿಹಾರ ನೀಡಬೇಕಾಗಿ ಆದೇಶ ನೀಡಲಾಗಿದೆ.

ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ತಾಂತ್ರಿಕ ದೋಷ - 1 ಲಕ್ಷ ಪರಿಹಾರ ಧನ ನೀಡಿದ ಡೀಲರ್

ಹೀಗಾಗಿರುವುದು ಇದೇನು ಮೊದಲನೆಯೆದಲ್ಲ ಇದಕ್ಕೂ ಮುನ್ನವೇ ಹಲವು ಡೀಲರ್‍‍ಗಳು ಮತ್ತು ಸರ್ವೀಸ್ ಸೆಂಟರ್‍‍ನವರು ಯಾವ ರೀತಿ ತಮ್ಮ ಗ್ರಾಹಕರಿಗೆ ಟೋಪಿ ಹಾಕಿ ಸಿಕ್ಕಿಕೊಂಡಿದ್ದಾರೆ ಎಂಬ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇನ್ನಾದರು ವಾಹನ ಖರೀದಿಸುವಾಗ ಇಂತಹ ವಿಚಾರಗಳ ಬಗ್ಗೆ ಗಮನವಿರಲಿ.

Source: Rushlane

Most Read Articles

Kannada
English summary
Maruti Suzuki Alto Owner Gets Rs. 1 Lakh As Compensation From Dealer. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X