ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ತನ್ನ ಕಾರು ಉತ್ಪನ್ನಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಅಗ್ಗದ ಬೆಲೆಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಡುವ ಸುಳಿವು ನೀಡಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರಲಿದ್ದು, ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತೀಕರಣ ಸಾಧ್ಯವಿಲ್ಲದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವು ಬಂದ್ ಆಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಅಗ್ಗದ ಬೆಲೆಯ ಡೀಸೆಲ್ ಕಾರುಗಳನ್ನು ಮಾರಾಟ ಮಾಡುವ ಮಾರುತಿ ಸುಜುಕಿಗೂ ಹೊಸ ನಿಯಮವು ಬಿಸಿತುಪ್ಪವಾಗಿ ಪರಿಣಮಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಕುರಿತಂತೆ ಸ್ಪಷ್ಟನೆ ನೀಡಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಹೆಚ್ಚುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಬರಲಿರುವ ಬಿಎಸ್-6 ನಿಯಮದಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಕಾರುಗಳ ಮಾರಾಟವೇ ಸ್ಥಗಿತಗೊಳ್ಳಲಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ವೈಶಿಷ್ಟ್ಯತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಉನ್ನತೀಕರಿಸುವ ಯೋಜನೆಯಲ್ಲಿ ತೊಡಗಿರುವ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತೀಕರಣ ಸಾಧ್ಯವಿಲ್ಲದ ಡೀಸೆಲ್ ಎಂಜಿನ್‌ಗಳ ಮಾರಾಟವನ್ನು ಕೈಬಿಡಲು ನಿರ್ಧರಿಸಿವೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಹ ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ಹೊಸ ನಿಯಮ ಜಾರಿಗೆ ಮುನ್ನವೇ ಬಿಎಸ್-6 ನಿಯಮದನ್ವಯ ಪೆಟ್ರೋಲ್ ಕಾರು ಮಾದರಿಗಳನ್ನು ಉನ್ನತೀಕರಿಸಿ ಮಾರಾಟ ಮಾಡುತ್ತಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಣ ಮಾಡದಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಮಾರುತಿ ಸುಜುಕಿಯು ಮುಂಬರುವ ಕೆಲವೇ ದಿನಗಳಲ್ಲಿ 1.3-ಲೀಟರ್ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಮಾರಾಟ ಬಂದ್ ಮಾಡುವುದಾಗಿ ಹೇಳಿಕೊಂಡಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಇದರ ಬದಲಾಗಿ ಪ್ರತಿ ಕಾರು ಮಾದರಿಯಲ್ಲೂ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಮಾರಾಟ ಮೇಲೆ ಹೆಚ್ಚಿನ ಗಮನಹರಿಸಿರುವುದಾಗಿ ಹೇಳಲಾಗಿದ್ದು, 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಮಾದರಿಯನ್ನು ಮಾತ್ರವೇ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.

ಈ ಕುರಿತಂತೆ ಸಿಎನ್‌ಬಿಸಿ ಟಿವಿ18 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾರುತಿ ಸುಜುಕಿ ಎಂಡಿ ಆರ್.ಸಿ.ಭಾರ್ಗವ್ ಅವರು ಪೆಟ್ರೋಲ್ ಕಾರುಗಳು ಈಗಾಗಲೇ ಬಿಎಸ್-6 ನಿಯಮಕ್ಕೆ ಉನ್ನತಿಕರಿಸಲಾಗಿದ್ದು, ಉನ್ನಳಿದಂತೆ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 2020ರ ಏಪ್ರಿಲ್ ನಂತರವೇ ಉನ್ನತೀಕರಿಸುವುದಾಗಿ ಮಾಹಿತಿ ನೀಡಿದ್ದಾರೆ.

MOST READ:ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಹೀಗಾಗಿ ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ಪೆಟ್ರೋಲ್ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿರಲಿದ್ದು, ಇನ್ನುಳಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಮಾತ್ರವೇ ಖರೀದಿಗೆ ಲಭ್ಯವಾಗಲಿವೆ.

MOST READ:ಕಿಯಾ ಸೆಲ್ಟೊಸ್ ಬಿಡುಗಡೆ- ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು..!

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಒಂದು ವೇಳೆ ಮಾರುತಿ ಸುಜುಕಿ ಸಂಸ್ಥೆಯು 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಣ ಮಾಡದರೂ ಸಹ ಕಾರಿನ ಬೆಲೆಗಳು ರೂ.80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ. ಇದರಿಂದ ಕಾರಿನ ಬೆಲೆಗಳು ಹೆಚ್ಚಾಗಿ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನೇ ತೆಗೆದುಹಾಕುತ್ತಿದೆ.

MOST READ:ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಹೈ ಎಂಡ್ ಮಾದರಿಗಳಾದ ಎಸ್-ಕ್ರಾಸ್ ಎಸ್‌ಯುವಿ, ಎರ್ಟಿಗಾ ಎಂಪಿವಿ ಮತ್ತು ಸಿಯಾಜ್ ಸೆಡಾನ್ ಕಾರಿನಲ್ಲಿ ಮಾತ್ರವೇ 1.5-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆ ಇರಲಿದ್ದು, ಇನ್ನುಳಿದ ಕಾರುಗಳಲ್ಲಿ ಪೆಟ್ರೋಲ್ , ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳು ಹೆಚ್ಚಲಿವೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಇನ್ನು ಬಿಎಸ್-6 ಪೆಟ್ರೋಲ್ ಎಂಜಿನ್‌ಗಳನ್ನು ಅವಧಿಗೂ ಮುನ್ನವೇ ಉನ್ನತೀಕರಿಸುತ್ತಿರುವ ಮಾರುತಿ ಸುಜುಕಿಯು 1.5-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಅನ್ನು ಇದುವರೆಗೂ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಉನ್ನತೀಕರಣ ಮಾಡಿಲ್ಲ ಎಂಬ ವಿಚಾರವನ್ನು ಹಂಚಿಕೊಂಡಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಮಾರುಕಟ್ಟೆಯಲ್ಲಿ ಸದ್ಯ ಬಿಎಸ್-4 ಇಂಧನ ಮಾದರಿಯು ಮಾರಾಟಗೊಳ್ಳುತ್ತಿದ್ದು, ಇದು ಬಿಎಸ್-6 ಎಂಜಿನ್ ಡೀಸೆಲ್ ಕಾರುಗಳಿಗೆ ಪೂರಕವಾಗಿಲ್ಲ. ಒಂದು ವೇಳೆ ಬಿಎಸ್-4 ಡೀಸೆಲ್ ಮಾದರಿಯನ್ನು ಬಿಎಸ್-6 ಡೀಸೆಲ್ ಕಾರುಗಳಲ್ಲಿ ಬಳಕೆ ಮಾಡಿದರೂ ಹೊಸ ನಿಯಮ ಜಾರಿಯ ಉದ್ದೇಶಕ್ಕೆ ಅದು ವಿರುದ್ದವಾಗುತ್ತದೆ ಎನ್ನಲಾಗಿದೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಇದರಿಂದ ಬಿಎಸ್-6 ಇಂಧನ ಮಾರಾಟವು ಆರಂಭದ ಬಳಿಕವಷ್ಟೇ ಬಿಎಸ್-6 ಡೀಸೆಲ್ ಎಂಜಿನ್ ಮಾರಾಟಕ್ಕೆ ಚಾಲನೆ ನೀಡುವುದಾಗಿ ಹೇಳಿಕೊಂಡಿರುವ ಆರ್.‍‌ಸಿ.ಭಾರ್ಗವ್ ಅವರು, ಬಿಎಸ್-6 ಪೆಟ್ರೋಲ್ ಕಾರುಗಳಲ್ಲಿ ಬಿಎಸ್-4 ಪೆಟ್ರೋಲ್ ಮಾದರಿ ಬಳಕೆ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುವುದನ್ನು ಕೂಡಾ ಸ್ಪಷ್ಟಪಡಿಸಿದ್ದಾರೆ.

ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಕಠಿಣನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಿರುವ ಮಾರುತಿ ಸುಜುಕಿಯು ಈ ಹಿಂದಿನ ಜನಪ್ರಿಯತೆಯನ್ನೇ ಮುಂದುವರಿಸಿಕೊಂಡು ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡುತ್ತಿದೆ.

Most Read Articles

Kannada
English summary
Maruti Suzuki is decided to launch BS-6 diesel engine in midsize cars by next financial year.
Story first published: Monday, August 26, 2019, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X