ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ದೇಶದ ನಂ.1 ಕಾರು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಒಟ್ಟು ಆರು ಕಾರುಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರಲ್ಲಿ ಸೆಲೆರಿಯೊ ಕೂಡಾ ಈ ಬಾರಿ ಹೊಸ ದಾಖಲೆಗೆ ಕಾರಣವಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಕಡಿಮೆ ಬೆಲೆ ಮತ್ತು ಕಡಿಮೆ ನಿರ್ವಹಣೆಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ತನ್ನ ಸೆಲೆರಿಯೊ ಹೊಸ ಆವೃತ್ತಿಯ ಮೂಲಕ ಹೊಸ ದಾಖಲೆ ಬರೆದಿದ್ದು, 2014ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಸೆಲೆರಿಯೊ ಕಾರು 2018-19ರ ಆರ್ಥಿಕ ವರ್ಷದ ಅವಧಿಯಲ್ಲಿ ಗರಿಷ್ಠ ಮಟ್ಟದ ಮಾರಾಟ ಪ್ರಮಾಣವನ್ನು ದಾಖಸಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ವಾರ್ಷಿಕವಾಗಿ ಕಾರು ಮಾರಾಟದಲ್ಲಿ ಇದೇ ಮೊದಲ ಬಾರಿಗೆ 1 ಲಕ್ಷಕ್ಕೂ ಅಧಿಕ ಸೆಲೆರಿಯೊ ಕಾರುಗಳು ಮಾರಾಟಗೊಂಡಿದ್ದು, ಬಿಡುಗಡೆಗೊಂಡ ನಂತರ ಇದುವರೆಗೂ ಭಾರತದಲ್ಲಿ 4.7 ಲಕ್ಷ ಸೆಲೆರಿಯೊ ಕಾರುಗಳು ಗ್ರಾಹಕರ ಕೈ ಸೇರಿವೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಈ ಮುೂಲಕ ಕಳೆದ ವರ್ಷದ ಆರ್ಥಿಕ ವರ್ಷದ ಸೆಲೆರಿಯೊ ಕಾರು ಮಾರಾಟಕ್ಕೂ ಮತ್ತು 2018-19ರ ಆರ್ಥಿಕ ವರ್ಷಕ್ಕೂ ಶೇ.10ರಷ್ಟು ಬೆಳವಣಿಗೆ ಕಂಡಿದ್ದು, ಹೊಸ ಕಾರು ಆವೃತ್ತಿಯಲ್ಲಿ ಪರಿಚಯಿಸಲಾದ ನೂತನ ಸುರಕ್ಷಾ ಸೌಲಭ್ಯಗಳು ಈ ಬಾರಿ ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಇನ್ನೊಂದು ವಿಶೇಷ ಅಂದ್ರೆ, ಮಾರಾಟವಾಗಿರುವ ಸೆಲೆರಿಯೊ ಕಾರುಗಳಲ್ಲಿ ಶೇ.31 ರಷ್ಟು ಕಾರುಗಳು ಆಟೋ ಗೇರ್ ಶಿಫ್ಟ್ ಸೌಲಭ್ಯದ ಕಾರುಗಳಾಗಿದ್ದರೇ, ಟಾಪ್ ಎಂಡ್ ಮಾದರಿಯಾದ ಜೆಎಡ್ಎಕ್ಸ್ ಶೇ.52 ರಷ್ಟು ಮತ್ತು ಶೇ.20 ರಷ್ಟು ಸಿಎನ್‌ಜಿ ಕಾರುಗಳು ಕೂಡಾ ಮಾರಾಟವಾಗಿವೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಇನ್ನು ಬಿಡುಗಡೆಯಾದ ನಂತರ 4 ವರ್ಷಗಳ ತನಕವು ಬೇಡಿಕೆಯಲ್ಲಿ ಅಷ್ಟಾಗಿ ಮುಂಚೂಣಿ ಸಾಧಿಸಲು ವಿಫಲವಾಗಿದ್ದ ಸೆಲೆರಿಯೊ ಮಾರಾಟದಲ್ಲಿ ಹೊಸ ಸಂಚಲನ ನೀಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷವಷ್ಟೇ ಸ್ಪೋರ್ಟಿ ಲುಕ್‌ನೊಂದಿಗೆ ಸೆಲೆರಿಯೊ ಎಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಸೆಲೆರಿಯೊ ಎಕ್ಸ್ ಹ್ಯಾಚ್‌ಬ್ಯಾಕ್ ಕಾರುಗಳು ಕೂಡಾ ಸಾಕಷ್ಟು ಆಕರ್ಷಣೆಯಾಗಿದ್ದು, ಸಾಮಾನ್ಯ ಸೆಲೆರಿಯೊ ಕಾರುಗಳಿಂತಲೂ ವಿಭಿನ್ನವಾಗಿದೆ. ಹೀಗಾಗಿ ಎಂಟ್ರಿ ಲೆವಲ್ ಕಾರುಗಳಲ್ಲಿ ಸ್ಪೋರ್ಟಿ ಡಿಸೈನ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಸೆಲೆರಿಯೊ ಕಾರುಗಳು 10 ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಎಂಜಿನ್ ಸಾಮರ್ಥ್ಯ

1.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್‌ಜಿ ಆಯ್ಕೆ ಹೊಂದಿರುವ ಸೆಲೆರಿಯೊ ಕಾರುಗಳು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗೆ ಲಭ್ಯವಿದ್ದು, 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಸುರಕ್ಷಾ ಸೌಲಭ್ಯಗಳು

ಖರೀದಿಗೆ ಲಭ್ಯವಿರುವ ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎರಡು ಮಾದರಿಯಲ್ಲೂ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಬಿಎಸ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ಖರೀದಿಸಬೇಕಾಗುತ್ತದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಕಾರಿನ ಒಳವಿನ್ಯಾಸ

ಚಾಲಕ ಸೇರಿ 4 ಜನ ಅರಾಮವಾಗಿ ಪ್ರಯಾಣಿಬಹುದಾದಷ್ಟು ಒಳವಿನ್ಯಾಸ ಹೊಂದಿರುವ ಸೆಲೆರಿಯೊ ಕಾರುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್‌ರೆಸ್ಟ್, ವಿಸ್ತರಿತ ಬೂಟ್ ಸ್ಪೆಸ್, ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ರಿಯರ್ ವ್ಯೂವ್ ಮಿರರ್, ಕೀ ಲೆಸ್ ಎಂಟ್ರಿ, ರಿಯರ್ ವೈಪರ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯವಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಹೊಸ ದಾಖಲೆ

ಒಟ್ಟಿನಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲೆರಿಯೊ ಕಾರುಗಳು ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಉತ್ತಮ ಸೌಲಭ್ಯಗಳೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ಇದು ಮಧ್ಯವರ್ಗದ ಜೊತೆ ಜೊತೆಗೆ ಯುವ ಸಮುದಾಯದ ನೆಚ್ಚಿನ ಆಯ್ಕೆ ಕೂಡಾ ಆಗಿದೆ.

Most Read Articles

Kannada
English summary
Maruti Suzuki Celerio records highest ever yearly sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X