ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಎಂ‍‍ವೈ2019 ಸಿಯಾಜ್ ಸೆಡಾನ್ ಕಾರಿನಲ್ಲಿ ಹೊಸ ಫೀಚರ್‍‍ವೊಂದನ್ನು ಬಿಡುಗಡೆಗೊಳಿಸಿದೆ. ಹೊಸ ಮಾರುತಿ ಸುಜುಕಿ ಸಿಯಾಜ್ ಕಾರ್ ಅನ್ನು ಆಟೋ ಟ್ರಂಕ್ ಒಪನರ್‍‍ನೊಂದಿಗೆ ಮಾರಾಟ ಮಾಡಲಾಗುವುದು. ಈ ಫೀಚರ್ ಅನ್ನು ಸಿಯಾಸ್ ಸೆಡಾನ್‍‍ನೊಂದಿಗೆ ಹೆಚ್ಚುವರಿ ಆಯ್ಕೆಯಾಗಿ ಮಾರಾಟ ಮಾಡಲಾಗುವುದು.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಮಾರುತಿ ಸುಜುಕಿ ಕಂಪನಿಯು ಹೊಸ ಆಟೋ ಟ್ರಂಕ್ ಓಪನರ್ ಅನ್ನು ಎಂ‍‍ವೈ19 ಸಿಯಾಜ್‍‍ನ ಫೀಚರ್ ಎಂದು ಹೇಳಿಕೊಂಡಿದೆ. ಈಗಾಗಲೇ ಸಿಯಾಜ್ ಕಾರ್ ಅನ್ನು ಹೊಂದಿರುವವರೂ ಸಹ ರೂ.3,390ಗಳನ್ನು ಹೆಚ್ಚುವರಿಯಾಗಿ ಪಾವತಿಸಿ ಈ ಫೀಚರ್ ಅನ್ನು ಅಳವಡಿಸಿಕೊಳ್ಳಬಹುದು.

ಈ ಹೊಸ ಆಕ್ಸೆಸರಿ ಕೇವಲ ಹೊಸ ತಲೆಮಾರಿನ ಮಾರುತಿ ಸುಜುಕಿ ಸಿಯಾಜ್ ಕಾರಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಹಳೆಯ ತಲೆಮಾರಿನ ಸಿಯಾಜ್ ಕಾರುಗಳಲ್ಲಿಯೂ ಸಹ ಅಳವಡಿಸಿಕೊಳ್ಳಬಹುದು. ಈ ಆಟೋ ಟ್ರಂಕ್ ಫೀಚರ್ ಬಗ್ಗೆ ಹೇಳುವುದಾದರೆ, ಈ ಫೀಚರ್ ಫುಟ್ ಗೆಸ್ಜರ್ ಕಂಟ್ರೋಲ್‍‍ನೊಂದಿಗೆ ಬರುತ್ತದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ನಿಮ್ಮ ಬಳಿ ಕಾರಿನ ಕೀಯಿದ್ದು ನಿಮ್ಮ ಕಾಲನ್ನು ಈ ಕಾರಿನ ಬಂಪರ್ ಕೆಳಗೆ ಆಡಿಸಿದರೆ ಈ ಕಾರಿನ ಬೂಟ್ (ಡಿಕ್ಕಿ) ತೆರೆದುಕೊಳ್ಳಲಿದೆ. ಈ ಫೀಚರ್ ಅನ್ನು ಸ್ಟಾಂಡರ್ಡ್ ಆಗಿ ದೇಶಿಯ ಮಾರುಕಟ್ಟೆಯಲ್ಲಿರುವ ಹೈ ಎಂಡ್ ಕಾರುಗಳಲ್ಲಿ ನೀಡಲಾಗುತ್ತಿದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಮಾರುತಿ ಸುಜುಕಿ ಕಂಪನಿಯು ಇದೇ ಮೊದಲ ಬಾರಿಗೆ ಈ ಫೀಚರ್ ಅನ್ನು ನೀಡುತ್ತಿದೆ. ಇದರಿಂದಾಗಿ ಈ ಸೆಡಾನ್ ಕಾರಿಗೆ ಒಂದು ರೀತಿಯ ಪ್ರೀಮಿಯಂನೆಸ್ ಸಿಗಲಿದೆ. ಮಾರುತಿ ಸುಜುಕಿ ಕಂಪನಿಯ ಸಿಯಾಜ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಈ ಕಾರಿನ ಮಾರಾಟದಿಂದಾಗಿ ಮಾರುತಿ ಸುಜುಕಿ ಕಂಪನಿಯ ಮಾರಾಟ ಪ್ರಮಾಣವು ಹೆಚ್ಚಾಗಿತ್ತು. ಸದ್ಯ ದೇಶಿಯ ಆಟೋಮೊಬೈಲ್ ಉದ್ಯಮವು ಎದುರಿಸುತ್ತಿರುವ ನಿಧಾನಗತಿಯ ಪ್ರಗತಿಯ ಕಾರಣದಿಂದಾಗಿ ಮಾರುತಿ ಸುಜುಕಿ ಕಂಪನಿಯ ಮಾರಾಟವು ಕುಸಿದಿದೆ. ಇದರ ಪರಿಣಾಮವು ಸಿಯಾಜ್ ಕಾರಿನ ಮಾರಾಟದ ಮೇಲೂ ಉಂಟಾಗಿದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಸಿಯಾಜ್ ಕಾರಿನಲ್ಲಿ ಮೊದಲ ಬಾರಿಗೆ ಮಾರುತಿ ಸುಜುಕಿ ಕಂಪನಿಯೇ ಸ್ವತಃ ಅಭಿವೃದ್ಧಿಪಡಿಸಿರುವ 1.5 ಲೀಟರಿನ ಕೆ15 ಸರಣಿಯ ಪೆಟ್ರೋಲ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಈ ಎಂಜಿನ್ 104 ಬಿ‍‍ಹೆಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಹೆಚ್ಚುವರಿ ಆಯ್ಕೆಯಾಗಿ 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಹ ನೀಡಲಾಗುವುದು. ಸಿಯಾಜ್ ಕಾರ್ ಅನ್ನು 1.5 ಲೀಟರಿನ ಡೀಸೆಲ್ ಎಂಜಿನ್‍‍ನೊಂದಿಗೂ ಸಹ ಮಾರಾಟ ಮಾಡಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಸಿಯಾಜ್ ಕಾರಿನಲ್ಲಿ ಅಳವಡಿಸಲಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳೆರಡೂ ಬಿ‍ಎಸ್4 ಎಂಜಿನ್‍‍ಗಳಾಗಿವೆ. ಸಿಯಾಜ್ ಕಾರಿನಲ್ಲಿ ಇನ್ನೂ ಬಿ‍ಎಸ್6 ಎಂಜಿನ್ ಅನ್ನು ಅಳವಡಿಸಲಾಗಿಲ್ಲ. ಈಗಾಗಲೇ ಎರ್ಟಿಗಾ ಹಾಗೂ ಎಕ್ಸ್ ಎಲ್6 ಕಾರುಗಳಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಮಾರುತಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ (ಎಸ್‍‍ಹೆಚ್‍‍ವಿ‍ಎಸ್) ಟೆಕ್ನಾಲಜಿಯನ್ನು ಸಿಯಾಜ್ ಕಾರಿನ ಡೀಸೆಲ್ ಆವೃತ್ತಿಗಳ ಜೊತೆಗೆ ನೀಡುತ್ತಿದೆ. ಡೀಸೆಲ್ ಎಂಜಿನ್‍‍ನಲ್ಲಿ ಹೊಸ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಸಹ ನೀಡಲಾಗುತ್ತಿದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಸೆಡಾನ್ ಕಾರಿನಲ್ಲಿ ಆಟೋ ಟ್ರಂಕ್ ಓಪನರ್ ಫೀಚರ್ ನೀಡುವುದರೊಂದಿಗೆ ಸಿಯಾಜ್ ಕಾರಿಗೆ ಮತ್ತಷ್ಟು ಪ್ರೀಮಿಯಂತನವನ್ನು ನೀಡಿ ಈ ಸೆಗ್‍‍ಮೆಂಟಿನಲ್ಲಿರುವ ಇತರ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ.

ಕಾಲು ಆಡಿಸಿದರೆ ತೆರೆದು ಕೊಳ್ಳಲಿದೆ ಸಿಯಾಜ್ ಕಾರಿನ ಡಿಕ್ಕಿ

ಈ ಹೊಸ ಫೀಚರ್‍‍ನಿಂದಾಗಿ ಬೂಟ್ ಅನ್ನು (ಡಿಕ್ಕಿ) ಸುಲಭವಾಗಿ ತೆರೆಯಬಹುದಾಗಿದೆ. ಮಾರುತಿ ಸುಜುಕಿ ಕಂಪನಿಯ ಸಿಯಾಜ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವರ್ನಾ, ಸ್ಕೋಡಾ ರ್‍ಯಾಪಿಡ್ ಹಾಗೂ ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Maruti Suzuki Introduces ‘Auto Trunk Opener’ Accessory On MY2019 Ciaz: Priced At Rs 3,390 - Read in kannada
Story first published: Tuesday, September 17, 2019, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X