ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾರು, 19 ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿ ಹೊಸ ದಾಖಲೆಯನ್ನು ಬರೆದಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿರುವ ಸೆ‍‍ಡಾನ್ ಸೆಗ್‍‍ಮೆಂಟಿನಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದೆ. ಈ ಮೊದಲು ಡಿಜೈರ್ ಕಾರ್ ಅನ್ನು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎಂದು ಕರೆಯಲಾಗುತ್ತಿತ್ತು.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಕಳೆದ 10 ವರ್ಷಗಳಿಂದ ಈ ಕಾರು ಸಬ್‍ ಕಾಂಪ್ಯಾಕ್ಟ್/ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದೆ. 2019ರ ಏಪ್ರಿಲ್ ಹಾಗೂ ಜುಲೈ ನಡುವಿನ ಅವಧಿಯಲ್ಲಿ ಮಾರಾಟವಾದ ಒಟ್ಟು ಸೆಡಾನ್ ಕಾರುಗಳನ್ನು ಪರಿಗಣಿಸಿದರೆ, ಡಿಜೈರ್ ಮಾರುಕಟ್ಟೆಯಲ್ಲಿನ 61%ನಷ್ಟು ಷೇರ್ ಅನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಪ್ರತಿ ಎರಡು ನಿಮಿಷಗಳಿಗೆ ಒಂದರಂತೆ ಹೊಸ ಡಿಜೈರ್ ಕಾರು ಮಾರಾಟವಾಗುತ್ತದೆ ಎಂದು ಹೇಳಿಕೊಂಡಿದೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

2008ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮೊದಲ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಸಬ್ 4 ಮೀಟರ್ ಸೆಡಾನ್ ಕಾರ್ ಆಗಿರಲಿಲ್ಲ. ಈ ಕಾರು 4160 ಎಂಎಂ ಉದ್ದವನ್ನು ಹೊಂದಿತ್ತು. 2012ರಲ್ಲಿ ಮಾರುತಿ ಕಂಪನಿಯು, ಎರಡನೇ ತಲೆಮಾರಿನ ಡಿಜೈರ್ ಕಾರ್ ಅನ್ನು ಸಬ್ 4 ಮೀಟರಿನ ಕಾರ್ ಆಗಿ ಬಿಡುಗಡೆಗೊಳಿಸಿತು.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

2015ರ ಹೊತ್ತಿಗೆ ಡಿಜೈರ್ ಕಾರಿನ 10 ಲಕ್ಷ ಕಾರುಗಳ ಮಾರಾಟವಾಗಿದ್ದವು. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ 10 ಲಕ್ಷ ಸಂಖ್ಯೆಯಲ್ಲಿ ಮಾರಾಟವಾದ ಮೊದಲ ಸೆಡಾನ್ ಕಾರು ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಇತ್ತೀಚಿಗೆ ಈ ಕಾರಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಿ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಿಸಲಾಗಿದೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಈಗಿರುವ ಹೊಸ ತಲೆಮಾರಿನ ಡಿಜೈರ್ ಸೆಡಾನ್, ಅತಿ ಹೆಚ್ಚು ಮಾರಾಟವಾಗುವ ಸೆಡಾನ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಒಂದೇ ತಿಂಗಳಿನಲ್ಲಿ ಈ ಸೆಡಾನ್ ಕಾರಿನ 30,000 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಗಮನಿಸ ಬೇಕಾದ ಸಂಗತಿಯೆಂದರೆ ಕೇವಲ ಐದು ತಿಂಗಳಲ್ಲಿ 1 ಲಕ್ಷ ಸೆಡಾನ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಡಿಜೈರ್ ಕಾರಿನ ಪೆಟ್ರೋಲ್ ಆವೃತ್ತಿಯು ಬಿ‍ಎಸ್6 ಎಂಜಿನ್ ಹೊಂದಿದ ಮೊದಲ ಸೆಡಾನ್ ಕಾರ್ ಆಗಿದೆ. ಭಾರತದ ಆಟೋ ಮೊಬೈಲ್ ಉದ್ಯಮವು ಎದುರಿಸುತ್ತಿರುವ ನಿಧಾನಗತಿಯ ಪರಿಣಾಮವು ಮಾರುತಿ ಸುಜುಕಿ ಕಂಪನಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿದೆ. ಉಳಿದ ಎಲ್ಲಾ ಕಂಪನಿಗಳಿಗಿಂತ ಹೆಚ್ಚಿನ ಪ್ರಮಾಣದ ಕುಸಿತವನ್ನು ಮಾರುತಿ ಸುಜುಕಿ ಕಂಪನಿಯು ಕಂಡಿದೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಮಾರುತಿ ಸುಜುಕಿ ಕಂಪನಿಯ ಎಲ್ಲಾ ಸೆಗ್‍‍ಮೆಂಟಿನ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದೆ. ಡಿಜೈರ್ ಕಾಂಪ್ಯಾಕ್ಟ್ ಕಾರ್ ಸೆಗ್‍‍ಮೆಂಟಿನಲ್ಲಿರುವ ಸ್ವಿಫ್ಟ್, ಇಗ್ನಿಸ್, ಬಲೆನೊ, ಹೊಸ ವ್ಯಾಗನ್ ಆರ್ ಹಾಗೂ ಸೆಲೆರಿಯೊ ಸೇರಿದಂತೆ ಎಲ್ಲಾ ಕಾರುಗಳ ಮಾರಾಟದಲ್ಲಿ ಆಗಸ್ಟ್ ತಿಂಗಳಿನಲ್ಲಿ 24%ನಷ್ಟು ಕುಸಿತ ಉಂಟಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಒಟ್ಟಾರೆಯಾಗಿ ಮಾರುತಿ ಸುಜುಕಿ ಕಂಪನಿಯು 33%ನಷ್ಟು ಕುಸಿತವನ್ನು ಕಂಡಿದೆ. ಮಾರುಕಟ್ಟೆಯು ನಿಧಾನಗತಿಯಲ್ಲಿದ್ದರೂ ಸಹ ಡಿಜೈರ್ ಕಾರುಗಳು ಪ್ರತಿ ತಿಂಗಳು ಸರಾಸರಿ 16,000ದಂತೆ ಮಾರಾಟವಾಗುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರುತಿ ಡಿಜೈರ್ ಕಾರನ್ನು ಮಾರಾಟ ಮಾಡಲಾಗುತ್ತಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಈ ಎಂಜಿನ್‍‍ಗಳು ಉತ್ತಮ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ನೀಡುತ್ತವೆ. ಈ ಎಂಜಿನ್‌ಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದು, ರಿ-ವರ್ಕ್ ಅಗತ್ಯವಿಲ್ಲದೇ ಲಕ್ಷಾಂತರ ಕಿಲೋಮೀಟರ್‌ಗಳಷ್ಟು ದೂರ ಚಲಿಸುತ್ತವೆ. ಇದರ ಜೊತೆಗೆ ಈ ಎಂಜಿನ್‍‍ಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು ಡಿಜೈರ್ ಅನ್ನು ಉದ್ಯಮದ ಅತ್ಯಂತ ವಿಶ್ವಾಸಾರ್ಹ ಕಾರು ಬ್ರಾಂಡ್‌ಗಳಲ್ಲಿ ಒಂದನ್ನಾಗಿ ಮಾಡಿವೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಮಾರುತಿ ಡಿಜೈರ್‌ನ ಪೆಟ್ರೋಲ್ ಎಂಜಿನ್ ಗರಿಷ್ಠ 81.80 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 73.75 ಬಿಹೆಚ್‌ಪಿ ಪವರ್ ಹಾಗೂ 190 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳು 5 ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಗಳನ್ನು ಹೊಂದಿವೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ಡೀಸೆಲ್ ಚಾಲಿತ ಮಾರುತಿ ಡಿಜೈರ್ ಕಾರು, ಎಆರ್‍‍ಎಐ ಪರೀಕ್ಷೆಯ ಪ್ರಕಾರ ಪ್ರತಿ ಲೀಟರಿಗೆ 28.4 ಕಿ.ಮೀ ಮೈಲೇಜ್ ನೀಡುತ್ತದೆ. ಇದು ದೇಶದಲ್ಲಿ ಮಾರಾಟವಾಗುವ ಯಾವುದೇ ಐಸಿಇ ಚಾಲಿತ ಕಾರುಗಳಿಗಿಂತ ಹೆಚ್ಚಾಗಿದೆ. ಪೆಟ್ರೋಲ್ ಮಾದರಿಯ ಕಾರು ಪ್ರತಿ ಲೀಟರಿಗೆ 22 ಕಿ.ಮೀ ಮೈಲೇಜ್ ನೀಡುತ್ತದೆ.

ಹತ್ತು ವರ್ಷಗಳಿಂದ ನಂ.1 ಸ್ಥಾನದಲ್ಲಿದೆ ಈ ಕಾರು..!

ನಗರದ ಟ್ರಾಫಿಕ್‍‍ಗಳಲ್ಲಿಯೂ ಸಹ, ನೀವು ಡೀಸೆಲ್ ಮಾದರಿಯಿಂದ 24 ಕಿ.ಮೀ ಹಾಗೂ ಪೆಟ್ರೋಲ್ ಮಾದರಿಯಿಂದ 21 ಕಿ.ಮೀ ಮೈಲೇಜ್ ಪಡೆಯಬಹುದು. ಈ ರೀತಿಯ ಮೈಲೇಜ್‍‍ನಿಂದಾಗಿ ಭಾರತದ ಕಾರು ಪ್ರಿಯರ ಮನ ಗೆದ್ದಿದೆ.

Most Read Articles

Kannada
English summary
Maruti Suzuki Dzire Is The Best-Selling Sedan In India For Past 10 Years - Read in kannada
Story first published: Thursday, September 5, 2019, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X